
ಅಮೀನಗಡ :
ಹುನಗುಂದ ತಾಲೂಕಿನ ಅಮೀನಗಡ ವಲಯದ ಶ್ರೀ ಕ್ಷೇತ್ರ ಗ್ರಾಮಭಿವೃದ್ಧಿ ಯೋಜನೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಡಾ. ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಸೂಳೇಭಾವಿ ಗ್ರಾಮದಲ್ಲಿ ಮಾಶಾಸನ ಪಡೆಯುತ್ತಿರುವ ಫಲಾನುಭವಿ ಶಾರದಾ ಬಡಿಗೇರ ಅವರಿಗೆ ಅವಶ್ಯಕತೆ ಇರುವ ವಾತ್ಸಲ್ಯ ಕಿಟ್ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು .

ಗ್ರಾಮ ಪಂಚಾಯಿತ ಅಧ್ಯಕ್ಷರಾದ ಪಿಡ್ಡಪ್ಪ ಕುರಿ ಹಾಗೂ ಜನಜಾಗೃತಿ ಸದಸ್ಯರಾದ ಕೃಷ್ಣಾ ರಾಮದುರ್ಗ ,ಹಾಗೂ ಯುವ ಮುಖಂಡರಾದ ದೇವರಾಜ್ ಕಮತಗಿ ತಾಲೂಕಿನ ಗೌರವಾನ್ವಿತ ಯೋಜನಾಧಿಕಾರಿಗಳಾದ ಸಂತೋಷ ವಲಯ ಮೇಲ್ವಿಚಾರಕಿ ಪವಿತ್ರಾ ತಾಲೂಕಾ ವಿಚಕ್ಷಣಧಿಕಾರಿಗಳಾದ ನಾಗರಾಜ್ ಇವರುಗಳ ಉಪಸ್ಥಿತಿಯಲ್ಲಿ ವಿತರಣೆ ಮಾಡಲಾಯಿತು.
ಹುನಗುಂದ ತಾಲೂಕಿನಲ್ಲಿ 87 ಜನ ಪ್ರತಿ ತಿಂಗಳು ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳು ಇದ್ದು ತಾಲೂಕಿನ ವಿವಿಧ ಭಾಗದಲ್ಲಿ ಈ ವರ್ಷದಲ್ಲಿ 17 ಜನ ಹೊಸದಾಗಿ ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳಿಗೆ ಇವತ್ತಿನ ದಿನ ದಿನನಿತ್ಯ ಬಳಕೆ ಅವಶ್ಯಕತೆ ಇರುವ ಸಾಮಗ್ರಿಗಳನ್ನು ಗುರುತಿಸಿ ಕಿಟ್ ವಿತರಣೆಯನ್ನು ಮಾಡಲಾಯಿತು ಎಂದು ಸಂತೋಷ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ದೇವರಾಜ್ ಕಮತಗಿ ಅವರು ಈ ಸಂಘದ ಕಾರ್ಯ ಶ್ಲಾಘನೀಯವಾದದ್ದು ತಾಲೂಕಿನ ಆಧ್ಯಾಂತಹ ಬಡವರನ್ನು ಗುರುತಿಸಿ ಅವರಿಗೆ ಆಸರೆಯಾಗಿ ಸಮಾಜಮುಖಿ ಕೆಲಸ ಮಾಡುತ್ತಿರುವ ಈ ಸಂಸ್ಥೆಯ ತಮ್ಮೆಲ್ಲರಿಗೂ ಗ್ರಾಮದ ಪರವಾಗಿ ಧನ್ಯವಾದ ಹೇಳಿ ತಮ್ಮ ಸಮಾಜ ಸೇವೆ ಹೀಗೆ ನೋಂದವರ ಆಸರೆಯಾಗಿ ದೇಶದಲ್ಲಿ ಗುರುತಿಸುವಂತಾಗಲಿ ಎಂದು ಶುಭ ಕೋರಿದರು.
