ಅಮೀನಗಡ : ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ಇಂದು ಗ್ರಾಮೀಣ ಹಿತರಕ್ಷಣಾ ಸಮಿತಿಯಿಂದ ಗ್ರಾಮ ಪಂಚಾಯತಿ ಸಿಬ್ಬಂದಿ ವಾಯ್ ಎಚ್ ಕೋರಿ ಅವರಿಗೆ ಕುಡಿಯುವ ನೀರಿನ ತೊಂದರೆ ಸಲುವಾಗಿ ಮನವಿ ಸಲ್ಲಿಸಲಾಯಿತು, ಪಂಚಾಯತ ಅಭಿವೃದ್ಧಿ ಅಧಿಕಾರಿ ಇಲ್ಲದ ಕಾರಣ ಅವರ ಪರವಾಗಿ ಸಿಬ್ಬಂದಿ ಅವರಿಗೆ ಮನವಿ ಸಲ್ಲಿಸಲಾಯಿತು.ಎಂದು ಸಮಿತಿ ಅಧ್ಯಕ್ಷ ದೇವರಾಜ ಕಮತಗಿ ತಿಳಿಸಿದರು,BB Bews ನೊಂದಿಗೆ ಮಾತನಾಡಿದ ಅವರು ಹಲವು ಬಾರಿ ಈ ಬಗ್ಗೆ ಮನವರಿಗೆ ಮಾಡಿ ಹೇಳಿದರು ಪ್ರಯೋಜನ ಆಗಿಲ್ಲ ಈಗ ಒಂದು ತಿಂಗಳ ಆಯಿತು ನಳ ಬಂದಿಲ್ಲ ೧೦ ದಿನ ಆಯಿತು ಶುದ್ದ ಕುಡಿಯುವ ನೀರಿನ ಘಟಕ ಬಂದಾಗಿ ಜನ ಏನ್ ಮಾಡಬೇಕು ? ಇನ್ನೂ ೨-೩ ದಿನದಲ್ಲಿ ಇದು ಸರಿ ಹೋಗದಿದ್ರ ಅಹೊ ರಾತ್ರಿ ಉಪವಾಸ ಸತ್ಯಾಗ್ರಹವನ್ನು ಕೈಕೊಳ್ಳಬೇಕಾಗುತ್ತದೆ, ಎಂದರು.

ಈ ಬಗ್ಗೆ PDO ಅವರ ಬಗ್ಹೆ ವಿಚಾರಿಸಿದಾಗ ಇಲಕಲ್ಲ ತಾಲೂಕಿನ ಗುಡೂರು ಎಸ್,ಸಿ ಗ್ರಾಮದಲ್ಲಿ ಇನಚಾಜ್೯ಆಗಿ ಪಂಚಾಯತನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದು ಇಂದು ಗ್ರಾಂ,ಪ,ಸದಸ್ಯರ ಸಭೆ ಇದ್ದ ಕಾರಣ ಇವತ್ತು ಶೂಲೇಭಾವಿ ಗ್ರಾಂ,ಪ,ಬರಲು ಆಗಲಿಲ್ಲ ತಮ್ಮ ಮನವಿ ಬಗ್ಗೆ ಈಗಾಗಲೇ ನಮ್ಮ ಗಮನಕ್ಕೆ ಬಂದಿದ್ದು ತಕ್ಷಣ ಕುಡಿಯುವ ನೀರಿನ ಸಮಸ್ಯ ಇತ್ಯಾರ್ಥ ಮಾಡುವುದಾಗಿದೆ ಅಭಿವೃದ್ಧಿ ಅಧಿಕಾರಿ ಎಮ್,ಎ,ದಖನಿ ಅವರು BB Bews ,ನೊಂದಿಗೆ ಮಾತನಾಡಿದರು. ಇನ್ನೂ ಮನವಿ ಸಲ್ಲಿಸಿ BB News ನೊಂದಿಗೆ ಮಾತನಾಡಿದ BJP ಮುಖಂಡ ನಾಗೇಶ ಗಂಜಿಹಾಳ PDO ಎಮ್ ಎ ದಖನಿ ಅವರು ನಮ್ಮ ಊರಿನ ಅಭಿವೃದ್ಧಿ ಹಾಗೂ ಸಾರ್ವಜನಿಕ ಕೆಲಸದ ವಿಚಾರದಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ,ಇನೊಬ್ಬ ಅಪ್ರಯೋಜಕ ಅಧಿಕಾರಿ,ಒಂದು ಗಂಟೆಯಿಂದ ಮನವಿ ಸಲ್ಲಿಸಲು ಕಾಯುತ್ತಿದ್ದೇವೆ ಬಂದಿಲ್ಲ ಹೀಗಾಗಿ ಪಂಚಾಯತ ಸಿಬ್ಬಂದಿ ಕೈಯಲ್ಲಿ ಮನವಿ ನೀಡುತ್ತಿದ್ದೇವೆ ಇಂತಹ ೧೫,೦೦೦ ಸಾವಿರ ಜನಸಂಖ್ಯೆ ಹೊಂದಿದ ಗ್ರಾಮ ನೀರಿಗಾಗಿ ಆಹಾಕಾರ ಶುರುವಾಗಿದೆ,ಮನುಷ್ಯರಿಗೆ ಕುಡಿಯುವ ನೀರು ಸಿಗುತ್ತಿಲ್ಲ ಇನ್ನೂ ಜಾನುವಾರಗಳ ಗತಿ ಏನು? ಶುದ್ದ ಕುಡಿಯುವ ನೀರಿನ ಘಟಕ ಬಂದಾಗಿವೆ ತಾವೊಬ್ಬ ಜವಾಬ್ದಾರಿ ಯುತ ಅಧಿಕಾರಿಯಾಗಿ ಏನ್ ಮಾಡುತ್ತಿದ್ದಾರೆ,? ಇಂತಹ ಭ್ರಷ್ಟ – ಅಪ್ರಯೋಜಕ ಅಧಿಕಾರಿಯನ್ನು ಮೊದಲು ವರ್ಗಾವಣೆ ಮಾಡಿ ಬೇರೆ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಮಚಂದ್ರ ನೆಮದಿ,ಶಂಕರ,ಗುರಿಕಾರ,ದೇವರಾಜ ಮೇಟಿ,ರಮೇಶ ಭಾಫ್ರಿ,ರಮೇಶ ಮಡಿವಾಳರ,ಆನಂದ ಮೊಕಾಶಿ,ಹಾಲಪ್ಪ,ಹಾದಿಮನಿ,ಹನಮಂತ ನಾವಿ, ಉಪಸ್ಥಿತಿ ಇದ್ದರು. ಅಲ್ಲದೆ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಗ್ಯಾನಪ್ಪ ಗೋನಾಳ,ಶ್ರೀ ಮಾಹಾಂತಯ್ಯ ಹಿರೇಮಠ ಉಪಸ್ಥಿತಿ ಇದ್ದರು.