Breaking News

ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಉತ್ತಮ ಪರಿಶುದ್ಧ ವಾತಾವರಣ ನಿರ್ಮಾಣದಲ್ಲಿ ತಾವೆಲ್ಲರೂ ಕೈ ಜೋಡಿಸಿ: ವಿಠ್ಠಲ ಸಾಲಿಯಾನ್

ಹುನಗುಂದ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹುನಗುಂದ ತಾಲೂಕಿನ ಬೆಳಗಲ್ಲ ವಲಯದ ಧನ್ನೂರು ಗ್ರಾಮದ ಶಾರದಾ ವಿದ್ಯಾ ನಿಕೇತನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪರಿಸರ ದಿನಾಚರಣೆಯ ಸಸಿ ನೆಡುವ ಕಾರ್ಯಕ್ರಮ ನಡೆಸಲಾಯಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ವಿಠ್ಠಲ ಸಾಲಿಯಾನ್ ರವರು ಮಾತನಾಡುತ್ತಾ ಯೋಜನೆಯು ಹತ್ತು ಹಲವು ಕಾರ್ಯಕ್ರಮಗಳಲ್ಲಿ ಪರಿಸರ ಕಾರ್ಯಕ್ರಮವು ಒಂದು. ಇಂದಿನ ದಿನ ಆಮ್ಲಜನಕದ ಕೊರತೆಯಿಂದ ಮನುಕುಲವೇ ಪರದಾಡುವಂತಾಗಿದೆ. ಪ್ರತಿಯೊಬ್ಬರು ತಮ್ಮ ಜಮೀನುಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಡುವುದರಿಂದ ಒಳ್ಳೆಯ ಆಮ್ಲಜನಕವನ್ನು ಪಡೆಯಬಹುದೆಂದು ತಿಳಿಸಿದರು. ಹಾಗೂ ಕೊರೋನ ಪರಿಸ್ಥಿತಿಯಲ್ಲಿ ಕ್ಷೇತ್ರದಿಂದ ಪೂಜ್ಯರು ನೀಡಿರುವ ಸೇವೆಗಳಾದ ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕದ ಪೂರೈಕೆ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ರೋಗಿಗಳ ಉಚಿತ ವಾಹನದ ವ್ಯವಸ್ಥೆ ಮಾಡುತ್ತಿರುವುದರ ಬಗ್ಗೆ ತಿಳಿಸಿದರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಉತ್ತಮ ಪರಿಶುದ್ಧ ವಾತಾವರಣ ನಿರ್ಮಾಣದಲ್ಲಿ ತಾವೆಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಸಮ್ಮ ಮಾದರ ರವರು ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜಮುಖಿಯಾದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಕೊರೋನಾ ವೇಳೆಯಲ್ಲಿ ದಿನಸಿ ಕಿಟ್ ವಿತರಣೆ ರೋಗಿಗಳಿಗೆ ವಾಹನ ವ್ಯವಸ್ಥೆ ನಿರ್ಗತಿಕರಿಗೆ ಮಾಶಾಸನ ವಿತರಣೆ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ವಿತರಣೆ ಇಂತಹ ಕಾರ್ಯಕ್ರಮಗಳ ಜೊತೆಗೆ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಕಾರ್ಯಕ್ರಮ ನಡೆಸುತ್ತಿರುವುದು ಯೋಜನೆಯ ಮಹತ್ವದ ಕಾರ್ಯವಾಗಿದೆ ಎಂದು ತಿಳಿಸಿದರು.

ಹುನಗುಂದ ತಾಲೂಕಿನ ವಲಯ ಅರಣ್ಯ ಅಧಿಕಾರಿ ಗರೀಶ್ ರವರು ಮಾತನಾಡುತ್ತಾ ಧರ್ಮಸ್ಥಳ ಸಂಸ್ಥೆಯು ಜನತೆಗೆ ಆರ್ಥಿಕ ಸಬಲೀಕರಣ ದೊಂದಿಗೆ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಒಂದು ಸರ್ಕಾರೇತರ ಸಂಸ್ಥೆಯು ಸರ್ಕಾರದೊಂದಿಗೆ ಹಲವು ಯೋಜನೆಗಳನ್ನು ಹಾಕಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿದೆ. ಅಲ್ಲದೆ ಗ್ರಾಮದ ಜನರು ತಮ್ಮ ಜಮೀನಿನಲ್ಲಿ ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಇಂದ ಉಚಿತವಾಗಿ ಗಿಡವನ್ನ ದೊರಕಿಸಿಕೊಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾರದಾ ವಿಧ್ಯನಿಕೇತನ ಶಾಲೆಯ ಕಾರ್ಯದರ್ಶಿಗಳಾದ ಲಿಂಗಣ್ಣ ರವರು ಯೋಜನೆಯ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಮತ್ತು ಇನ್ನೂ ಪ್ರಗತಿಪರ ಕಾರ್ಯಕ್ರಮಗಳನ್ನು ನಡೆಸುವಂತೆ ಆಶೀಸಿದರು.

ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ಸಂತೋಷ, ಶಾರದಾ ವಿದ್ಯಾನಿಕೇತನ ಶಾಲೆಯ ಕಾರ್ಯದರ್ಶಿಗಳಾದ ಲಿಂಗಣ್ಣ ಒಕ್ಕೂಟದ ಅಧ್ಯಕ್ಷರಾದ ಸುಜಾತ ಹಿರೇಮಠ ಪದಾಧಿಕಾರಿಗಳು ವಲಯದ ಮೇಲ್ವಿಚಾರಕರಾದ ಅರುಣ್, ಮತ್ತು ತಾಲೂಕು ಕೃಷಿ ಮೇಲ್ವಿಚಾರಕರಾದ ಆನಂದ ಹಾಗೂ ಸಂಘದ ಸದಸ್ಯರು .ಗ್ರಾಮಸ್ಥರು ಭಾಗವಹಿಸಿದ್ದರು.

About vijay_shankar

Check Also

MS ಡೌಲಪರ್ಸ್ ಕಂಪನಿ ಹೆಸರಲ್ಲಿ ಸಾರ್ವಜನಿಕರಿಂದ ಲಕ್ಷ ಲಕ್ಷ ಹಣ FD ಡಿಪಾಜಿಟ್ ರೂಪದಲ್ಲಿ  ಕಮತಗಿಯ ಕಾಸಗಿ ಶಿಕ್ಷಕ  ಹುಚ್ಚಪ್ಪ ವಡವಡೊಗಿ ಇವರಿಂದ ಹಗಲು ದರೋಡೆ

MS ಡೌಲಪರ್ಸ್ ಕಂಪನಿ ಹೆಸರಲ್ಲಿ ಸಾರ್ವಜನಿಕರಿಂದ ಲಕ್ಷ ಲಕ್ಷ ಹಣ FD ಡಿಪಾಜಿಟ್ ರೂಪದಲ್ಲಿ ಕಮತಗಿಯ ಕಾಸಗಿ ಶಿಕ್ಷಕ ಹುಚ್ಚಪ್ಪ ವಡವಡೊಗಿ ಇವರಿಂದ ಹಗಲು ದರೋಡೆ

ಕಮತಗಿ: ರಾಜ್ಯದಲ್ಲಿ ಹಣ ಡಬ್ಲಿಂಗ್ ಹಾಗೂ ಶೇರು ಮಾರುಕಟ್ಟೆ ,ಅತೀ ಕಡಿಮೆ ಸಮಯದಲ್ಲಿ ಹಣ ಡಬ್ಲಿಂಗ್ ಜನರ ಆಕರ್ಷಿಸಲು ವಿವಿಧ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.