
ಅಮೀನಗಡ :
ಇಂದು ಭಾರತ್ ಬಂದ್ ಪ್ರಯುಕ್ತ ಹುನಗುಂದ ತಾಲೂಕಿನ ಕಮತಗಿ ಬ್ರಿಜ್ ಮುಂದೆ ವಿವಿಧ ರೈತ ಸಂಘಟನೆಗಳು ಭಾರತ ಬಂದ್ ಗೆ ಕರೆಕೊಟ್ಟಿದ್ದರ ಪ್ರಯುಕ್ತ ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯ ಕಮತಗಿ ಪಟ್ಟಣದ ಕಮತಗಿ ಕ್ರಾಸ್ ಹತ್ತಿರ ಎನ್.ಎಚ್. ೨೦ ರಸ್ತೆಯಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಭೂಸುಧಾರಣಾ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ತಾಲೂಕಾ ರೈತ ಸಂಘಟನೆಯಿಂದ ರಸ್ತೆ ತಡೆಮಾಡಿ ಪ್ರತಿಭಟನೆ ಹಮ್ಮಿಕೊಂಡಿದ್ದುರು ,ಬರವ ವಾಹನಗಳನ ತಡೆದು ನಿಲ್ಲಿಸಿ ಕೆಲ ಕಾಲ ಪೊಲೀಸ್ ಹಾಗೂ ರೈತರ ಮಧ್ಯ ಮಾತಿನ ಚಕಿಮಕಿ ನಡೆಯಿತು, ರೈತರೊಬ್ಬರು ಸರಕಾರದ ಜೊತೆಗೆ ನಿಮ್ಮ ಹೊಂದಾನಿಕೆ ಇದೆ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಬೇಡಿ ಎಂದು ಕಿಡಿ ಕಾರಿದರು ,ಇವೆಲ್ಲವನ್ನು ಶಾಂತ ಚಿತ್ತದಿಂದ ಪಿ,ಎಸ್ ಐ ಕುಲಕರ್ಣಿ ಅವರು ರೈತರಿಗೆ ಹೋರಾಟ ಮಾಡುವ ಹಕ್ಕಿದೆ ಆದರೆ ಸಂಚಾರಕ್ಕೆ ಅಡೆ ತಡೆ ಮಾಡುವ ಹಕ್ಕಿಲ್ಲ ಶಾಂತವಾಗಿ ಪ್ರತಿಭಟನೆ ಮಾಡಿ ಎಂದು ಸಂಚಾರಕ್ಕೆ ಅನುವುಮಾಡಲು ವಿನಂತಿಸಿ ವಾಹನ ಸವಾರರಿಗೆ ತೊಂದರೆ ಆಗದಂತೆ ಅನುವುಮಾಡಿ ಕೊಟ್ಟರು,ಈ ಪ್ರತಿಭಟನೆಯಲ್ಲಿ ಅನೇಕ ರೈತ
ಮುಖಂಡರಾದ ಶ್ರೀ ಬಸನಗೌಡ ಪಾಟೀಲ್ ಅಧ್ಯಕ್ಷರು ರೈತ ಸಂಘ ಹುನಗುಂದ. ಗುರು ಗಾಣಿಗೇರ ಅಧ್ಯಕ್ಷರು ರೈತ ಸಂಘ ಇಲಕಲ್. ರಸುಲ್ ಸಾಬ್ ತಹಶೀಲ್ದಾರ. ರೈತ ಮುಖಂಡರು ಕಮತಗಿ. ಹಾಗೂ ಸುತ್ತ ಮುತ್ತಲ ಗ್ರಾಮಗಳ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ವರದಿ: ಮುಸ್ತಫಾ ಮಾಸಪತಿ,