ಕೊಪ್ಪಳ : ಜಿಲ್ಲೆಯದ್ಯಂತ ಕೊರೊನಾ ಮಾರ್ಗಸೂಚಿಯನ್ನ ಲೆಕ್ಕಿಸದೇ ಶ್ರೀ ಶುಕಮುನಿ ತಾತಾನವರ ಅಡ್ಡಪಲ್ಲಕ್ಕಿ ಉತ್ಸವದ ಹೆಸರಿನಲ್ಲಿ ಕಿಡಿಗೇಡಿಗಳು ಪೊಲೀಸ್ ಜೀಪ್ ನ್ನು ಜಖಂಗೊಳಿಸಿದ ಹಿನ್ನೆಲೆಯಲ್ಲಿ ದೋಟಿಹಾಳ ಗ್ರಾಮದ ಸುತ್ತಮುತ್ತಲಿನ 50 ಮಂದಿ ವಿರುದ್ದ ಕುಷ್ಟಗಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಶ್ರೀ ಶುಕಮುನಿ ಆರಾಧನಾ ಮಹೋತ್ಸವದ ಅಡ್ಡಪಲ್ಲಕ್ಕಿ ಗುರುವಾರ ನಡೆಯಬೇಕಿತ್ತು. ಇದರ ಬಗ್ಗೆ ಜಿಲ್ಲಾಡಳಿತ ಕೂಡಾ ಅದ್ಧೂರಿ ಉತ್ಸವ ಬದಲು ಸರಳವಾಗಿ ಆಚರಿಸುವಂತೆ ಸೂಚಿಸಿತ್ತು. ಅದೆ ಪ್ರಕಾರ ಪಲ್ಲಕ್ಕಿ ಇರುವ ಸ್ಥಳದಲ್ಲಿ ವಿಧಿ ವಿಧಾನ
ನೆರೆವೇರಿಸಲು ಅವಕಾಶಮಾಡಿಕೊಟ್ಟಿತ್ತು. ಈ ಸಂದರ್ಭದಲ್ಲಿ ಒಳಪ್ರವೇಶ ಮಾಡಿದ 50 ಮಂದಿ ಪಲ್ಲಕ್ಕಿ ಹೊತ್ತು ಬಂದ್ ಮಾಡಿದ ಶಟರ್ಸ ಗೇಟ್ ನ್ನು ಪಲ್ಲಿಕ್ಕಿಯಿಂದಲೇ ಗುದ್ದಿ ಮುರಿದಿದ್ದಾರೆ. ಅದಲ್ಲದೇ ದೇವಸ್ಥಾನ ಮುಂದೆ ಇದ್ದ ಪೊಲೀಸ್ ವಾಹನವನ್ನು ಜಖಂಗೊಳ್ಳಿಸಿದ್ದಾರೆ. ಪೊಲೀಸರೆದುರಿಗೆ ಈ ಘಟನೆ ನಡೆದಿದ್ದು, ಪೊಲೀಸ್ರು ಹೇಳಿದ ಎಚ್ಚರಿಕ್ಕೆಯನ್ನು ಪಲ್ಲಕ್ಕಿ ಹೊತ್ತವರಿಗೆ ಕೇಳಲಿಲ್ಲ ಎನ್ನಲಾಗುತ್ತದೆ. ತಡರಾತ್ರಿ ಎಸ್ಪಿ ಸಂಗೀತಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು, ಸಿಸಿ ಟಿವಿ ಹಾಗೂ ವಿಡಿಯೋ ದೃಶ್ಯಗಳನ್ನು ಆಧಾರದ ಮೇಲೆ 50 ಜನರನ್ನು ಬಂಧಿಸಿ ಅವರ ವಿರುದ್ದ ಎಫ್ ಐ ಆರ್ ದಾಖಲಿಸಿದ್ದಾರೆ.