ಕುಷ್ಟಗಿ: ತಾಲೂಕಿನ ಗಡಿ ಜಿಲ್ಲೆಯಾದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮುರಡಿ ಗ್ರಾಮಕ್ಕೆ ಅಂಟಿಕೊಂಡ ಕೊನೆ ಕುಗ್ರಾಮ ಪರಮನಟ್ಟಿ ಇದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜಾಗೀಗೂಡುದುರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕಡೆ ಹಳ್ಳಿ ಪರಮನಟ್ಟಿ ಯಾಕೊ ಏನೊ ಇಲ್ಲಿನ ಎಸ್ಕಾಂ ಅಧಿಕಾರಿ ಸೇರಿದಂತೆ ಇಲ್ಲಿನ ಲೈಮನ್ ರಗಿ ಸಾರ್ವಜನಿಕ ತೊಂದರೆ ಆದ್ರು ಕಣ್ಣಿದ್ದು ಕುರುಡರಂತೆ ಎರಡು ವರ್ಷಗಳಿಂದ ಗ್ರಾಮದ ಹನುಮಗೌಡ ಗೌಡರ ಇವರ ಮನೆ ಮುಂದ ಮೆನ್ ವಿದ್ಯುತ್ ಸರಬರಾಜು ತಂತಿ ಹರಿದು,ಕಂಬ ಮುರಿದು ಬಿದ್ದಿದ್ದು ಅವರ ಮನೆ ಮಕ್ಕಳು ಸೇರಿದಂತೆ ನಿತ್ಯ ಭಯದಿಂದ ಮನೆ ಒಳಗೆ ಒರಗೆ ಒಡಾಡುವುದು ಸಾಹಸವಾಗಿದೆ ಮನೆಗೆ ಬರುವವರು ನೋಡಿದ ತಕ್ಷಣ ಗಾಬರಿಗೆ ಒಳಪಡದೇ ಇರಲಾರು ಈ ಬಗ್ಗೆ ಹನುಮಸಾರ ಸೆಕ್ಷನ್ ಆಫೀಸರ್ ಗೆ ಹತ್ತು ಹಲವಾರು ಬಾರಿ ಎಷ್ಟೇ ಮನವಿ ಮಾಡಿಕೊಂಡರು ಸಹ ಎರಡು ವರ್ಷಗಳಿಂದ ಬರಿ ಸಾಬಾಬು ಹೇಳಿ ಕಳಿಸುತ್ತಿದ್ದಾರೆ.

ನಿಲ್ಲದ ಮಳೆ ಮನೆ ಮೇಲೆ ಎಲ್ಲಾ ಮೆನ್ ಒಯರ್ ಕಲೆಕ್ಷನ್ ಕಟ್ಟ್ ಮಾಡಿ ಅದೇ ಕಂಬದಲ್ಲಿ ಕಟ್ಟಿದ್ದಾರೆ ಆಕಸ್ಮಿಕ ಏನಾದರೂ ತೊಂದರೆ ಆಗಿ ಜೀವ ಹಾನಿ ಆದರೆ ಯಾರು ಹೊಣೆ ? ಎಂದು ಹನುಮಗೌಡ ಗೌಡರ ಅಧಿಕಾರಿಗಳ ಈ ಮೊಂಡುತನಕೆ ಆಕ್ರೋಶ ಬರಿತರಾದರು.
ಮುಖ್ಯ ರಸ್ತೆ ಪಕ್ಕದಲ್ಲಿ ಮನೆ ಮುಂದೆ ಈ ರೀತಿಯಾಗಿ ಒಯರ್ ನೆತಾಡುವುದು ನೋಡಿ ಗ್ರಾಮದ ಜನ ಕ್ಷೇತ್ರದಲ್ಲಿ ಶಾಸಕರು ಇದ್ದಾರೊ ಅಥವಾ ಶಾಸಕರು ತಮ್ಮ ಅಧಿಕಾರವನ್ನು ರೈತರ ಮೇಲೆ ದಬ್ಬಾಳಿಕೆ ಮಾಡಲು ಬಿಟ್ಟಿದ್ದಾರೊ ಗೊತ್ತಿಲ್ಲ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಒಂದು ವಾರದಲ್ಲಿ ಸರಿ ಪಡಿಸದಿದ್ದರೆ ಎಸ್ಕಾಂ ಅಧಿಕಾರಿಗಳ ವಿರುದ್ದ ಹಾಗೂ ಇಖಾಖೆ ಮುತ್ತಿಗೆ ಹಾಗಿ ಪ್ರತಿ ಭಟಿಸುವುದಾಗಿ ಗ್ರಾಮದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಎಚ್ಚರಿಕೆ ನೀಡಿದ್ದಾರೆ.