ಅಮೀನಗಡ : ನವರಾತ್ರಿಯ ಅಂಗವಾಗಿ ಇಂದು ಶ್ರೀ ಹುಲಿಗೇಮ್ಮ ದೇವಸ್ಥಾನದಲ್ಲಿ ನಿರಂತರವಾಗಿ ಕಳೆದ ೭ ದಿನಗಳಿಂದ ದೇವಿ ಪಾರಾಯಣ ನಡೆಯುತ್ತಿದೆ, ಈ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಭರದಿಂದ ನಡೆಯುತ್ತಿವೆ, ಇಂದು ಗ್ರಾಮದ

ಕುಮಾರಿ : ಕುಸುಮಾ ಕಣಿಗಿ ಕುಮಾರಿ : ಸಹನಾ ಪೂಜಾರಿ ಕುಮಾರಿ : ತುಳಸಿ ಕಣಿಗಿ ಇವರಿಂದ ಗೀತಾ ಪಾರಾಯಣ ನಡೆಯಿತು, ಇಂದು ಬೆಳಗ್ಗೆ ೯ ಗಂಟೆಗೆ ಈ ಗೀತಾ ಪಾರಾಯಣವನ್ನು ಮಾಡಲಾಯಿತು, ದೇವಸ್ಥಾನದ ಅರ್ಚಕರಾದ ಮಂಜುನಾಥ ಮುಂಡಾಸದ ಅವರ ಸಾರಥ್ಯದಲ್ಲಿ ಈ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಿತು, ಈ ಭಗವದ್ಗೀತೆ ಪಾರಾಯಣಕ್ಕೆ ದೇವಿ ಪುರಾಣಿಕರಾದ ಶ್ರೀ ಶಂಕ್ರಪ್ಪ ನೆಮ್ಮದಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಹುಲಗಪ್ಪ ಕುರಿ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ದುರಗಪ್ಪ ಮಾದರ ,ಮುತ್ತಣ್ಣ ಭಜಂತ್ರಿ, ಶಂಕರ ಮಿಣಜಗಿ, ಮತ್ತಿತರು ಚಾಲನೆ ನೀಡಿದರು. ನಿನ್ನೆಯ ದಿನ ದೇವಸ್ಥಾನದಲ್ಲಿ ಸುಮಂಗಲಿಯರಿಂದ ಸಾಮೂಹಿಕ ಕುಂಕುಮಾರ್ಚನೆ

ಮಾಡಿಸಲಾಯಿತು,ಅಪಾರ ಸಂಖ್ಯೆಯಲ್ಲಿ ಮಹಿಳೆಯರು, ತಾಯಂದೆರು, ಪಾಲ್ಗೊಂಡಿದ್ದರು. ಅರ್ಚಕರಾದ ಮಂಜುನಾಥ ,ಹಾಗೂ ಪಿತಂಬ್ರಸಾ ದೇವಂಗಮಠ, ಸೇವಾ ಸಮಿತಿ ಮುಖ್ಯಸ್ಥರಾದ ಮಹಾಂತೇಶ ಕತ್ತಿ,ಹನಮಂತ ಆಲೂರು, ಚನ್ನಪ್ಪ ಅಂಗಡಿ, ಸಂಗಪ್ಪ ತೋಟದ, ರಾಘವೇಂದ್ರ ಕುರಿ, ಹುಲಗಪ್ಪ ಕುರಿ , ಅವರ ಮಾರ್ಗದರ್ಶನದಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಗ್ರಾಮದ ಮಾಜಿ ಗ್ರಾಂ,ಪ,ಅಧ್ಯಕ್ಷ ಶ್ರೀ ದುರಗಪ್ಪ ಹೊಸಮನಿ,ಶ್ರೀ ಬಾಳು ಗೋನಾಳ, ಶ್ರೀಮತಿ ಎಸ್,ಆರ್ ಸಿಂಗರೆಡ್ಡಿ ಹಾಗೂ ಅಪಾರ ಭಕ್ತರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಗೀತಾ ಪಾರಾಯಣ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಮಹಾ ಭಾರತದ ಭಗವದ್ಗೀತೆ ನಾವು ಪಾರಾಯಣ ಮಾಡುವುದರಿಂದ ನಮ್ಮ ಬದುಕಿನಲ್ಲಿ ನಾವು ಹೇಗೆ ಕರ್ಮಾನುಸಾರ ಬದುಕಬೇಕು ಎಂಬುದನ್ನು ಕಲಿಸುತ್ತದೆ, ಎಂದರು.

ನಿನ್ನೆಯ ದಿನ ವಿಶೇಷವಾಗಿ ಸರಸ್ವತಿ ಪೂಜೆ ಮಾಡಿ ಪುಸ್ತಕಗಳನ್ನು ಮುದ್ದು ಮಕ್ಕಳಿಗೆ ವಿತರಣೆ ಮಾಡಲಾಯಿತು.ಪಾಂಡುರಂಗ ಮಾಶ್ಯಾಳ ಅನೇಕ ಪ್ರಮುಖರು ಪುಸ್ತಕ ವಿತರಣೆ ಮಾಡಿದರು.