Breaking News

ಗೋವಾ ರಾಜ್ಯದ ಉದ್ಯಮಿ ಸದಾಶಿವ ಹಿರಿಯಣ್ಣ ಶಟ್ಟಿ ಅವರಿಗೆ ಸಮಾಜ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ

ಗೋವಾ :
ಇಂದು ಮಡಗಾಂವ ನ ಲಕ್ಷ್ಮೀ ಎಂಪಾಯರ್ ಹೋಟೆಲ್ ಮಾಲೀಕರಾದ ಶ್ರೀ ಸದಾಶಿವ ಹಿರಿಯಣ್ಣ ಶಟ್ಟಿ ಅವರಿಗೆ ಇಂಡಿಯನ್ ಜರ್ನಲಿಸ್ಟ ಯುನಿಯನ್ ದೆಹಲಿ ಹಾಗೂ ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ಮತ್ತು ಬಿಬಿ ನ್ಯೂಜ್ ವೆಬ್ ಚಾನಲ್ ಬೆಂಗಳೂರು ಇವರ ಪ್ರಶಸ್ತಿ ನಡಿಗೆ ಸಾಧಕರ ಕಡೆ ಅಭಿಯಾನದಡಿ ಇಂದು ಸದಾಶಿವ ಶಟ್ಟಿ ಅವರಿಗೆ ಗೋವಾ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕರಾದ ಶ್ರೀ ದಿಗಂಬರ ಕಾಮತ್ ಅವರು ಹಾಗೂ ಸರೋಲಿಯಂ ಶಾಸಕರಾದ ಉಲ್ಲಾಸ್ ತುರವೇಕರ್ ಹಾಗೂ ನೂತನ ಗೋವಾ ರಾಜ್ಯದ IJU ಉಪಾಧ್ಯಕ್ಷರಾದ ಶ್ರೀ ವಿಠ್ಠಲ ಜಕ್ಕಾ ಈ ಅಭಿಯಾನದ ಮುಖ್ಯಸ್ಥರು ಹಾಗೂ IJU ರಾಷ್ಟ್ರೀಯ ಮಂಡಳಿ ನಿರ್ದೇಶಕರು ಮತ್ತು ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ ಬಿ ವಿಜಯಶಂಕರ್ ಮತ್ತು IJU ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಮೇಶ ಭಜಂತ್ರಿ ,ಉಧ್ಯಮಿ ರಾಘವ ಶಟ್ಟಿ, ಸೇರಿದಂತೆ ಅನೇಕ ಗಣ್ಯರು ಸದಾಶಿವ ಶಟ್ಟಿ ಅವರಿಗೆ ” ಸಮಾಜ ಸೇವಾ ರತ್ನಾ , ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ದಿಗಂಬರ್ ಕಾಮತ್ ಹಾಗೂ ಶಾಸಕ ಶ್ರೀ ಉಲ್ಲಾಸ್ ತುರವೇಕರ್,IJU ರಾಜ್ಯ ಉಪಾಧ್ಯಕ್ಷ ಶ್ರೀ ವಿಠ್ಠಲ ಜಕ್ಕಾ ,ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪೂರ ತಾಲೂಕಿನ ಕೊಕ್ಕರಣೆ ಗ್ರಾಮದಲ್ಲಿ ಜನಿಸಿ ,ತಿಳುವಳಿಕೆ ಬರುವಷ್ಟರಲ್ಲಿ ಎಲ್ಲಾ ಆಸ್ತಿ ಉಳೂವನೇ ವಡೆಯ ಇಂದಿರಾ ಗಾಂಧಿ ಸರಕಾರದಲ್ಲಿ ಎಲ್ಲಾ ಭೂಮಿ ಕಳೆದುಕೊಂಡು ಬಾಲ್ಯದಲ್ಲೇ ಜೀವನದ ಉದ್ದಕ್ಕೂ ಬದುಕಿನೊಂದಿಗೆ ಹೋರಾಟ ಮಾಡುತ್ತಾ ಕಷ್ಟದ ದಿನಗಳನ್ನು ದೂಡಿದವರು. ಮುಂದೆ ಉತ್ತಮ ಅಡುಗೆ ಭಟ್ಟರಾಗಿ ಹೊರ ಹೊಮ್ಮಿ ಇಂದು 4,- 5 ಹೋಟೆಲ್ ಗಳ ಮಾಲೀಕರಾಗಿ ನೂರಾರು ಬಡ ಯುವಕರಿಗೆ ಕೆಲಸ ಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ದೇಶ ವಿದೇಶದಲ್ಲಿ ಬೆಸ್ಟ ಕುಕ್ಕು ಆಗಿ ಕೆಲಸ ಮಾಡಿದ್ದಾರೆ.

ಗೋವಾದ ಮಾಜಿ ಮುಖ್ಯಮಂತ್ರಿ ಶ್ರೀ ದಿಗಂಬರ್ ಕಾಮತ್ ಅವರಿಗೆ ಹೋಟೆಲ್ ಉದ್ಯಮಿ ಶ್ರೀ ಸದಾಶಿವ ಶಟ್ಟಿ ಅವರಿಂದ ಗೌರವ ಸತ್ಕಾರ ,

ಅಲ್ಲದೆ ಬಡ ಮಕ್ಕಳ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಹಾಯ ಮಾಡುತ್ತಾ ,ಧಾರ್ಮಿಕ ಮಂದಿರಗಳ ಜಿರ್ನೋದ್ದಾರಕ್ಕೆ ನಿರಂತರವಾಗಿ ಸಹಾಯ ಮಾಡುತ್ತಾ ಸಮಾಜ ಸೇವೆ ಮಾಡುತ್ತಿದ್ದಾರೆ. ಇದರೊಂದಿಗೆ ಗೋವಾದ ಕನ್ನಡ ಸಂಘಟನೆಗೆ ಬೆನ್ನೆಲುಬಾಗಿ ಇಂತು ಅವರಿಗೆ ಸಹಾಯ ಸಹಕಾರ ಮಾಡುತ್ತಾ ಕನ್ನಡ ಭವಣದ ಹೋರಾಟಕ್ಕೆ ಎಲ್ಲರನ್ನೂ ಒಗ್ಗುಡಿಸುತ್ತಿದ್ದಾರೆ. ಇಂತಹ ಅಪರೂಪದ ಸರಳ ಸಜ್ಜನಿಕೆಯ ಮನುಷ್ಯ ಸದಾಶಿವ ಶಟ್ಟಿ ಎಂದರೆ ತಪ್ಪಾಗಲಾರದು.

ಸದಾ ಸ್ನೇಹ ಜೀವಿ,ಭಾವ ಜೀವಿಯಾಗಿರುವ ಇವರು ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಮುಂದೆ ಬಂದವರು ಇಂತಹ ಸೇವಕರು ಈ ಸಮಾಜಕ್ಕೆ ದಾರಿ ದೀಪ ಇಂತಹ ಎಲೆ ಮರೆಯ ಕಾಯಿಯಂತೆ ಸೇವೆ ಮಾಡುತ್ತಿರುವ ಸದಾಶಿವ ಶಟ್ಟಿ ಅವರ ಪ್ರಾಮಾಣಿಕ ಸೇವೆ ಮೆಚ್ವಿ BB News Channel ನಡೆಸಿದ ಪ್ರಶಸ್ತಿ ನಡಿಗೆ ಸಾಧಕರ ಕಡೆಗೆ ಅಭಿಯಾನದಡಿ ಸದಾಶಿವ ಶಟ್ಟಿ ಅವರಿಗೆ ಸಮಾಜ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಲಾ ತಂಡದಿಂದ ಮಧುರ ಮಧುರವಿ ಮಂಜುಳ ಗಾನ ಕಾರ್ಯಕ್ರಮ ನಡೆಸಲಾಯಿತು.

ಅನೇಕ ಕಲಾವಿದರು ಹಾಡಿ ರಂಜಿಸಿದರು. ಈ ಸರಳ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಶಾಸಕರು ಹಾಗೂ ಮುಖ್ಯ ಅಥೀತಿಗಳಾದ ಸುನೀಲ ಶಟ್ಟಿ, ನವೀನ್ ಶಟ್ಟಿ , ಶಶಿಧರ್ ನಾಯಕ್, ಆನಂದ ಕಾಂಬಳೆ,ಪರಶುರಾಮ ಕಾಲೀವಾಲ,ಬಸವರಾಜ್ ಬನ್ನಿಕೊಪ್ಪ,ಶಿವಾನಂದ ಗಾಣಿಗೆರ, ಹಾಜಿಮಸ್ತಾನ್ ಬದಾಮಿ, ಸೇರಿದಂತೆ ಅನೇಕ ಕಲಾವಿದರು, ಸಾಕ್ಷಿಯಾದರು, ಈ ಸಂದರ್ಭದಲ್ಲಿ ಖ್ಯಾತ ಗಾಯಕಿ ಶ್ರೀಮತಿ ಮಮತಾ ಅಧಿಕಾರಿ ಅವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಖ್ಯಾತ ಗಾಯಕಿ ಶ್ರೀಮತಿ ಮಮತಾ ಅಧಿಕಾರಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ ವೇದಿಕೆ ಇಂದ ಸನ್ಮಾನ ಮಾಡಲಾಯಿತು.

ರಾಜ್ಯ ಉಪಾಧ್ಯಕ್ಷರಾದ ಶ್ರೀ ವಿಠ್ಠಲ ಜಕ್ಕಾ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ರಮೇಶ ಭಜಂತ್ರಿ ಶ್ರೀ ,ಶಿವಾನಂದ ಗಾಣಿಗೇರ ಹಾಗೂ ಶ್ರೀ ಹಾಜಿಮಸ್ತಾನ್ ಬದಾಮಿ ಶ್ರೀ ಪರಶುರಾಮ ಅವರೊಂದಿಗೆ ವೇದಿಕೆ ಮೇಲೆ ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದರ್ಶನ ಮಾಡಿ ಸನ್ಮಾನ ಮಾಡಲಾಯಿತು.

.

.

About vijay_shankar

Check Also

ನೂತನ ಅಧ್ಯಕ್ಷ ಪ್ರಮೀಣ ರಾಮದುರ್ಗ ,ಅವರಿಗೆ ಭಾವೈಕ್ಯತಾ ಗೆಳೆಯರ ಬಳಗದಿಂದ ಸನ್ಮಾನ

ಅಮೀನಗಡ :ಇಂದು ಶೂಲೀಭಾವಿ ಗ್ರಾಮದ ಪ್ರತಿಷ್ಠಿತ ಶ್ರೀ ಶಾಖಾಂಬರಿ ನೇಕಾರ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ,ಆಯ್ಕೆಯಾದ ಶ್ರೀ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.