ಈಗ ಬಂದಿರುವ ಮಾಹಿತಿಯ ಪ್ರಕಾರ ಇದುವರೆಗೂ ನೋಡಿರುವ ಕೊರೊನಾದ ಅಟ್ಟಹಾಸ ಚಳಿಗಾಲದಲ್ಲಿ ಹಾಗೂ ನಂತರದಲ್ಲಿ ಎದುರಾಗುವ ಕೊರೊನಾದ ಎರಡನೇ ಅಲೆಗಿಂತ ತೀರಾ ಕಡಿಮೆ ಎಂಬ ಮಾತು ವಿಜ್ಞಾನಿಗಳು ಹಾಗೂ ಸಂಶೋಧಕರ ತಂಡದಿಂದ ಕೇಳಿ ಬರುತ್ತಿದೆ.
ಕೊರೊನಾದ ರುದ್ರನರ್ತನ ಹಾಗೂ ಸಾವಿನ ರಣಕೇಕೆ ವಿಶ್ವದಲ್ಲೆಡೆ ಮಿತಿ ಮೀರಿದೆ. ಒಂದು ವರ್ಷ ಸಮೀಪಿಸುತ್ತಿದ್ದರೂ ಕೂಡ ಇನ್ನು ಒಂದೇ ಒಂದು ಪರಿಣಾಮಕಾರಿಯಾದ ಲಸಿಕೆ ಕೊರೋನಾಗೆ ಸಿಕ್ಕಿಲ್ಲ. ಹಾಗಾಗಿ ಜನರ ಬದುಕು ಮತ್ತು ಆರೋಗ್ಯ ಇಂದಿಗೂ ದುಸ್ತರವಾಗಿದೆ.
ಆದರೆ ಈಗ ಬಂದಿರುವ ಮಾಹಿತಿಯ ಪ್ರಕಾರ ಇದುವರೆಗೂ ನೋಡಿರುವ ಕೊರೋನಾದ ಅಟ್ಟಹಾಸ ಚಳಿಗಾಲದಲ್ಲಿ ಹಾಗೂ ನಂತರದಲ್ಲಿ ಎದುರಾಗುವ ಕೊರೋನಾದ ಎರಡನೇ ಅಲೆಗಿಂತ ತೀರಾ ಕಡಿಮೆ ಎಂಬ ಮಾತು ವಿಜ್ಞಾನಿಗಳು ಹಾಗೂ ಸಂಶೋಧಕರ ತಂಡದಿಂದ ಕೇಳಿ ಬರುತ್ತಿದೆ. ವಿಶೇಷವಾಗಿ ನಮ್ಮ ಭಾರತದ ಕಡೆಗೆ ಈಗ ವಿಶ್ವ ಆರೋಗ್ಯ ಸಂಸ್ಥೆಯ ದೃಷ್ಟಿ ಕೂಡ ನೆಟ್ಟಿದೆ. ಹಾಗಾಗಿ ಸರ್ಕಾರ ಹಾಗೂ ಜನ ಸಾಮಾನ್ಯರು ಚಳಿಗಾಲದ ಕೊರೋನಾ ರುದ್ರನರ್ತನವನ್ನು ಎದುರಿಸಲು ಸಜ್ಜಾಗಿರಬೇಕು.
ಲಸಿಕೆ ಬರದಿದ್ದರೆ, ಚಳಿಗಾಲದಲ್ಲಿ ಕೊರೊನಾ ಮಿತಿ ಮೀರಿ ಹೋಗುತ್ತದೆ !!

ಸಾಧಾರಣವಾಗಿ ಭಾರತದಲ್ಲಿ ಚಳಿಗಾಲ ಪ್ರಾರಂಭ ಆಗುವುದು ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ. ನಿಮಗೆ ನೆನಪಿರಬಹುದು. ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ2019 ರ ಡಿಸೆಂಬರ್ ತಿಂಗಳಿನಲ್ಲಿ ನ್ಯೂಮೋನಿಯಾ ಜ್ವರದ ರೀತಿ ಕಾಣಿಸಿಕೊಂಡ ಕೊರೊನಾ, ಇಂದು ಇಡೀ ಜಗತ್ತನ್ನೇ ನುಂಗಿ ಹಾಕುವ ಹಂತಕ್ಕೆ ಬಂದು ತಲುಪಿದೆ.
ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡರೆ, ಇನ್ನೆಷ್ಟೋ ಮಂದಿ ಸೋಂಕಿತರಾಗಿ ಕಷ್ಟ ಪಡುತ್ತಿದ್ದಾರೆ. ಇನ್ನು ಯಾರೋ ಮಾಡಿದ ತಪ್ಪಿಗೆ ತಮ್ಮ ಜೀವನದ ದಿಕ್ಕೇ ಬದಲಾಗಿ ಮುಂದಿನ ದಾರಿ ಕಾಣದೆ ಕುಳಿತ ಮಂದಿಯ ಲೆಕ್ಕ ಕೋಟಿಗಟ್ಟಲೇ ಇದೆ. ಇದಕ್ಕೆಲ್ಲಾ ಕಾರಣ ಎಂದರೆ ಚಳಿಗಾಲ. ಒಂದು ವೇಳೆ ಚೀನಾದಲ್ಲಿ ಚಳಿಗಾಲದಲ್ಲಿ ಕೊರೊನ ಎಂಬ ಮಹಾಮಾರಿ ಜನ್ಮ ತಾಳದಿದ್ದರೆ ಬಹುಷಃ ಇಷ್ಟು ಪ್ರಲಾಪ ಮೆರೆಯುತ್ತಿರಲಿಲ್ಲವೇನೋ ಎನಿಸುತ್ತದೆ.