

ಶ್ರೀ ಎಮ್ ಎ ಮೇಗೂರು – ಕಾರ್ಯದರ್ಶಿಗಳು ಮುತ್ತಲಗೇರಿ
ಬದಾಮಿ: ಸಮೀಪದ ಮುತ್ತಲಗೇರಿ ಗ್ರಾಮದಲ್ಲಿ ಇಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ( ಕಾರ್ಯದರ್ಶಿ) ಶ್ರೀ ಎಮ್ ಎ ಮೇಗೂರ ಅವರಿಗೆ ಇಂಡಿಯನ್ ಜರ್ನಲಿಸ್ಟ್ ಯುನಿಯನ್ ದೆಹಲಿ ಹಾಗೂ ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ಮತ್ತು ಬಿಬಿ ನ್ಯೂಸ್ ಡಿಜಿಟಲ್ ಚಾನಲ್ ಸಹಯೋಗದಲ್ಲಿ ಪ್ರಶಸ್ತಿ ನಡಿಗೆ ಸಾಧಕರ ಕಡೆಗೆ ಅಭಿಯಾನದಡಿ ಕಾರ್ಯದರ್ಶಿ ಶ್ರೀ ಎಮ್ ಎ ಮೇಗೂರು ಅವರಿಗೆ ” ಅತ್ಯುತ್ತಮ ಕರ್ತವ್ಯ ಪಾಲನೆ ರಾಜ್ಯ ಪ್ರಶಸ್ತಿಯನ್ನು KPS ಸಂಘದ ಜಿಲ್ಲಾ ಅಧ್ಯಕ್ಷ ಡಿ ಬಿ ವಿಜಯಶಂಕರ್ ಹಾಗೂ ಎಸ್,ಎಂ ವಾಸನದ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, & PKPS ಸಂಘದ ಅಧ್ಯಕ್ಷ ಶ್ರೀ ಬಿ,ಡಿ ಪೂಜಾರ ,ಹಾಗೂ ಗ್ರಾಮದ ಪ್ರಮುಖರಾದ ಶ್ರೀ ಭರಮಣ್ಣ ಗೌಡರ್ , ಇವರು ಪ್ರಶಸ್ತಿ ಪ್ರದಾನ ಮಾಡಿದರು. ನಂತರ ಪ್ರಶಸ್ತಿ ಪ್ರಧಾನ ಮಾಡಿದರು.

ನಂತರ ಮಾತನಾಡಿದ ಡಿ,ಬಿ ವಿಜಯಶಂಕರ್
ಬದಾಮಿ ತಾಲ್ಲೂಕಿನ್ಲೇ ೨ನೇ ಸ್ಥಾನದಲ್ಲಿ ಸಂಘವು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಈ ವರ್ಷ ೨೬ ಲಕ್ಷಕ್ಕೂ ಹೆಚ್ಚು ಲಾಭವನ್ನು ಸಂಘ ಮಾಡಿದೆ, ಉತ್ತಮ ಲಾಭ ಹಾಗೂ ಸಾಲ ವಸೂಲಾತಿಯಲ್ಲಿ ಉತ್ತಮ ಕರ್ತವ್ಯ ನಿರ್ವವಹಿಸುತ್ತಿರುವ ಮೇಗೂರ ಅವರ ಕಾರ್ಯ ಶ್ಲಾಘನೀಯ, ಇದರೊಂದಿಗೆ ಸಂಘದ ಸಿಬ್ಬಂದಿಯೊಂದಿಗೆ ಉತ್ತಮ ಒಡನಾಟ ಹಾಗೂ ಬಾಂಧವ್ಯವನ್ನು ಇಟ್ಟುಕೊಂಡು ರೈತರ ಮನಗೆದ್ದ ಪ್ರಾಮಾಣಿಕ ಕಾರ್ಯದರ್ಶಿ ಎಂದರೆ ತಪ್ಪಾಗಲಾರದು. ಅವರ ಕಾರ್ಯ ಚಟುವಟಿಕೆ ಹಾಗೂ ಉತ್ತಮ ಕೆಲಸವನ್ನು ನೋಡಿ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಎಂದು ಡಿ,ಬಿ, ವಿಜಯಶಂಕರ್ ಅವರು ಈ ಸಭೆ ಉದ್ದೇಶಿಸಿ ಮಾತನಾಡಿದರು.
ನಂತರ ಮಾತನಾಡಿದ ಗ್ರಾಮದ ಪ್ರಮುಖರಾದ ಗೌಡರ ಅವರು ಈ ಪ್ರಶಸ್ತಿ ಅದು ಮೇಗೂರು ಅವರಿಗೆ ಮಾತ್ರ ಬಂದಿಲ್ಲ ಈ ಸಂಘದ ಎರಡೂ ಗ್ರಾಮಗಳಾದ ಮುತ್ತಲಗೇರಿ ಹಾಗೂ ಲಕಮಾಪೂರ ಗ್ರಾಮಕ್ಕೆ ಸಂದ ಗೌರವವಾಗಿದೆ, ಎರಡು ಗ್ರಾಮಗಳ ಹಿರಿಯರ ಮಾರ್ಗದಲ್ಲಿ ಯಾವುದೇ ಚುನಾವಣೆ ಇಲ್ಲದೆ ಅವಿರೋಧವಾಗಿ ಸದಸ್ಯರನ್ನು ಆಯ್ಕೆ ಮಾಡಿ ಸಂಪೂರ್ಣ ಹಿರಿಯರ ಮಾರ್ಗದಲ್ಲಿ ಈ ಸಂಘ ನಡಿತಾ ಇದೆ. ಹೀಗಾಗಿ ಇದು ಲಾಭದತ್ತ ಮುಖ ಮಾಡಿದೆ. ಇಲ್ಲಿ ಸಿಬ್ಬಂದಿಯೂ ಕೂಡ ಉತ್ತಮ ಕೆಲಸ ಮಾಡತಾರೆ,
ಏನೇ ಇದ್ದರು ಸಲಹೆ ಕೇಳತಾರೆ. ಹೀಗಾಗಿ ಈ ಪ್ರಶಸ್ತಿ ಇಂದು ಹುಡುಕಿಕೊಂಡು ಬಂದಿದೆ, ಹೀಗೆ ಸಂಘದಲ್ಲಿ ಉತ್ತಮ ಕೆಲಸ ಮಾಡುತ್ತಾ ಗ್ರಾಮದ ಕೀರ್ತಿ ಹೆಚ್ಚಿಸಲೆಂದು ಶುಭ ಕೋರಿದರು.
ನಂತರ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ವಾಸನದ ಅವರು ಮಾತನಾಡಿ ನಮ್ಮ ತಾಲ್ಲೂಕಿನ ಮುತ್ತಲಗೇರಿ ಗ್ರಾಮಕ್ಕೆ ಈ ಪ್ರಶಸ್ತಿ ಹುಡುಕೊಂಡು ಬಂದಿದ್ದು ಶ್ಲಾಘನೀಯ, ಮೇಗೂರು ಅವರು ಕೂಡ ಆ ಪ್ರಶಸ್ತಿಗೆ ಅರ್ಹರು, ಉತ್ತಮ ಕೆಲಸಗಾರು, ಈ ಗ್ರಾಮಕ್ಕೂ ನನಗೂ ಬಹಳ ವರ್ಷಗಳ ಉತ್ತಮ ಬಾಂಧವ್ಯ ಇದೆ, ಹಲವಾರು ಆತ್ಮೀಯ ಸ್ನೇಹಿತರು ಇಲ್ಲಿ ಇದ್ದಾರೆ,

ಅವರೆಲ್ಲರಿಗೂ ಈ ಸಂದರ್ಭದಲ್ಲಿ ಒಂದು ಮಾತು ಹೇಳಲು ಇಷ್ಟ ಪಡುತ್ತೇನೆ, ಕಳೆದ ನವೆಂಬರ್ ೧ ರಂದು ನನಗೆ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತು, ಅದಕ್ಕೆ ಕಾರಣ ಸುಮಾರು ವರ್ಷಗಳಿಂದ ನಾನೂ ಕೂಡ ಸಾಮಾಜಿಕ ಕಳಕಳೆ ಉಳ್ಳ ಜಾಗೃತಿ ಕಾರ್ಯಕ್ರಮ ಮಾಡತಾ ಇದಿನಿ, ಬದಾಮಿ ನಗರದಲ್ಲಿ ಸುಮಾರು ೧೫೦೦೦, ಸಾವಿರ ಗಿಡಗಳನ್ನು ನಟ್ಟಿದ್ದೇವೆ. ಉತ್ತಮ ಪರಿಸರ ನಮ್ಮೆಲ್ಲರ ಹೊಣೆಗಾರಿಕೆ , ಇದರಿಂದ ಶುದ್ದ ಗಾಳಿ,ನೀರು, ಲಭಿಸಲಿದೆ, ತಾವು ಕೂಡ ಪರಿಸರ ಕಾಳಜಿ ಮಾಡಲು ಸಲಹೆ ನೀಡಿ ಮೇಗೂರ ಅವರಿವೆ ಅಭಿನಂದನೆ ಸಲ್ಲಿಸಿ ಪ್ರಶಸ್ತಿ ಪ್ರಧಾನ ಮಾಡಿದರು.
ನಂತರ ಮಾಜಿ PKPS ಅಧ್ಯಕ್ಷರಾದ ಭೀಮಪ್ಪ ಎಚ್ ಗೌಡರ್, ಮಾತನಾಡಿ ಈ ಸಂಘವು ಹಿರಿಯರ ಮಾರ್ಗದಲ್ಲಿ ಉತ್ತಮವಾಗಿ ನಡಿತಾ ಇದೆ, ಮೇಗೂವರು ಕೂಡ ಈ ಸಂಘದಲ್ಲಿ ವಸೂಲಿ ಕ್ಲರ್ಕ ಆಗಿ ಇಂದು ಕಾರ್ಯದರ್ಶಿಯಾಗಿ ಅನುಭವದಿಂದ ಪ್ರತಿಯೊಂದನ್ನೂ ಹಿರಿಯರ ಮಾರ್ಗದರ್ಶನ ಪಡೆದು ಕೆಲಸ ಮಾಡಿದ ಪ್ರಯುಕ್ತ ಇಂದು ಈ ಪ್ರಶಸ್ತಿ ಹುಡುಕಿಕೊಂಡು ಬಂದಿದ್ದು ಬಹಳ ಖುಷಿ ತಂದಿದೆ,ಎಂದರು.
ಸಂಘದ ಸಿಬ್ಬಂದಿಗಳಿದ ಮೇಗೂರ ಅವರಿಗೆ ಸನ್ಮಾನ
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಶ್ರೀ ಎಸ್,ಡಿ,ಪೂಜಾರ, ಸದಸ್ಯರಾದ ಮಂಜುನಾಥ, ಎಸ್,ಎಚ್, ಶಿರಸಂಘಿ, ರಾಮಣ್ಣ ನೋಟಗಾರ, ಗೌಡಪ್ಪ ನೋಟಗಾರ, ಹಾಗೂ ಆರ್, ಎಮ್, ಕತ್ತಿಕೈ RMS , ಶಾಲೆ ಶಿಕ್ಷಕರು, ಪತ್ರಕರ್ತ ಕಿರಣ್ ಕಾಳಗಿ ,ಬಸವರಾಜ್ ಜುಚನಿ, ಸೇರಿದಂತೆ ಗ್ರಾಮದ ಪ್ರಮುಕರು ಉಪಸ್ಥಿತಿ ಇದ್ದರು.
ವರದಿ : ಸಿದ್ದು ನೀಲಗುಂದ ಬದಾಮಿ