ಇಲಕಲ್ಲ : ನೂತನ ಇಲಕಲ್ಲ ತಾಲೂಕಿನ ನಗರದಲ್ಲಿ ವಿವಿಧ ದಿನ ಪತ್ರಿಕೆಯ ಎಲ್ಲಾ ವಿತರಕರಿಗೆ ಶುಭಾಶಯ ಕೋರುವ ಮೂಲಕ ಅವರನ್ನು ಕರೆಹಿಸಿ ಸಂಸ್ಥೆಯ ಕಾರ್ಯಾಲಯದಲ್ಲಿ ಅವರಿಗೆ ಸರ್ವ ವಿಜಯ ಸೇವಾ ಸಂಸ್ಥೆ ಯ ವತಿಯಿಂದ ಸಂಸ್ಥೆಯ ಗೌರವ ಅಧ್ಯಕ್ಷರಾದ ಸನ್ಮನ್ಯ ರಾಜು ಎಮ್ ಬೋರಾ ,ಧಣಿಗಳು ಎಲ್ಲಾ ಪತ್ರಿಕೆ ವಿತರಕನ್ನು ಗೌರವಿಸಿ, ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಮಳೆ ,ಚಳಿ ಎನ್ನದೇ ಸರಿಯಾಗಿ ಬೆಳಕಿನ ಜಾವ ೦೬ ಗಂಟೆಗೆ ಪತ್ರಿಕೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಅವರ ಕಾಯಕ ಈ ದಿನ ಎಲ್ಲಾ ಸಾರ್ವಜನಿಕರು ಇವರ ಕಾಯಕ ನಿಷ್ಟೆ ಯನ್ನು ಗೌರವಯುತ ವಾಗಿ, ಕಾಣಬೇಕು ಅ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಇವರನ್ನು ಗುರುತಿಸಿ ಇವರ ಕಾಯಕ ಮೆಚ್ಚಿ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ ಹಾಗಾಗಿ ಇವರಿಗೆ ನನ್ನ ಪರವಾಗಿ ಹಾಗೂ ನಮ್ಮ ಸಂಸ್ಥೆಯ ಪರವಾಗಿ ಎಲ್ಲಾ ಮಾಧ್ಯಮ ಪತ್ರಿಕಾ ವಿತರಕರಿಗೆ ಹಾರ್ಧಿಕ ಶುಭಾಶಯಗಳು ಎಂದರು,
ಈ ಸಂಧರ್ಭದಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷರು ಸೇರಿದಂತೆ ಶ್ಯಾಮ್ ಸುಂದರ್,ಕರವಾ ,ಮತ್ತು ಸಂಸ್ಥೆಯ ಸಿಬ್ಬಂದಿ ಹಾಗೂ ಹಿರಿಯ & ಕಿರಿಯ ಪತ್ರಿಕೆಯ ವಿತರಕರು ಹಾಜರಿದ್ದರು .