Breaking News

ಸೊಳೇಭಾವಿ ಗ್ರಾಮದಲ್ಲಿ ಶಿವಶರಣರ ನೂಲಿ ಚಂದಯ್ಯನವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು ,

ಇಂದು ಸೊಳೇಭಾವಿ ಗ್ರಾಮದಲ್ಲಿ ಶಿವಶರಣರ ನೂಲಿ ಚಂದಯ್ಯನವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು , ಕೊರಮ ಜನಾಂಗದ ಕುಲ ಗುರು ಶಿವಶರಣ ನೂಲಿ ಚಂದಯ್ಯನವರ ಕೊಡುಗಿ ವಚನ ಸಾಹಿತ್ಯಕ್ಕೆ ಅಪಾರ ೧೨ ನೇ ಶತಮಾನದಲ್ಲಿ ಬಸವ ಕಲ್ಯಾಣದಲ್ಲಿ ವಿಶ್ವಗುರು ಬಸವಣ್ಣನವರ ಜತೆ ಸಮಾಜದ ಅಸಮಾನತೆ ವಿರುದ್ದ, ಜಾತ್ಯಾತೀತ ವಿರುದ್ದ ಧ್ವನಿ ಎತ್ತಿ ಅಪಾರ ಜ್ಞಾನ ಬಂಡಾರ ಹೊಂದಿದ್ದ ಶರಣರು ವಚನ ಸಾಹಿತ್ಯ ಮೂಲಕ ಕೊರಮ ಜನಾಂಗದ ಉದ್ದಾರಕ್ಕಾಗಿ ಅಂದು ಅನೇಕ ಸವರ್ಣಿಯರನ್ನು ಎದುರಿಸಿ ಸಮಾಜವನ್ನ ಒಗ್ಗಿಡಿಸಲು ಸಮಾನತೆಯ ಪ್ರತಿಪಾದ ಸಾರಿದರು , ಸದಾ ನದಿ ತಟದಲ್ಲಿ ಕುಠಿರ ನಿರ್ಮಿಸಿ ಹುಲ್ಲು ಕಡ್ಡಿಯಿಂದ ಕಸಬಾರಗಿ,ಕಟ್ಟಿ ನಿತ್ಯ ಕಾಯಕ ಮಾಡುತ್ತಿದ್ದರು,

ಕಾಯಕವೇ ಕೈಲಾಸ ಎಂಬ ಬಸವಣ್ಣನವರು ನುಡಿಯಂತೆ ಕಾಯಕವನ್ನೇ ನಿಜವಾದ ಧೈವ, ದೇವರು ಎಂದು ನಂಬಿದ್ದ ನಿಜ ಶರಣ ನೂಲಿ ಚಂದಯ್ಯನವರ ಕಾಯಕ ಇಡಿ ಐಕ್ಯ ಮಂಟಪವನ್ನು ದಿಬ್ಬೇರಗು ಮಾಡುವಂತೆ ಮಾಡಿತ್ತು.
ಇಂದು ನಾವು ಅಂತಹ ಮಹಾನ್ ಶರಣರ ವಂಶಜರಾದ ಕೊರಮ ಜನಾಂಗ ಇಂದಿಗೂ ಅದೇ ವೃತ್ತಿ ಜೀವನದಲ್ಲಿ ನಿಷ್ಟೇಯಿಂದ ಬದುಕುತ್ತಿದ್ದೆವೆ ಎಲ್ಲರೂ ಇಂತಹ ಶರಣರ ವಚನ,ಕಾಯಕ ನಿಷ್ಟೆ ಮೈಗೂಡಿಸಿಕೊಂಡು ಬದುಕುಕಿದಾಗ ಜೀವನ ಪಾವನ ಎಂದು ಸಮಾಜದ ಗೌರವ ಅಧ್ಯಕ್ಷ ಬಸವರಾಜ ಭಜಂತ್ರಿ ತಿಳಿಸಿದರು,
ಈ ಸರಳ ಸಭೆಯ ಸಮಾರಂಭದಲ್ಲಿ ಸಮಾಜದ ಮುಖಂಡರಾದ ರೋಮಣ್ಣ ಭಜಂತ್ರಿ, ಶಂಕರ್,ಭಜಂತ್ರಿ, ಯಮನಪ್ಪ ಭಜಂತ್ರಿ, ಟಿ,ಬಿ, ಭಜಂತ್ರಿ, ಆಸಂಗೆಪ್ಪ,ಭಜಂತ್ರಿ, ಯಮನೂರಪ್ಪ ,ಬೊ,ಭಜಂತ್ರಿ, ಹನಮಂತ,ಹಿರೇಮನಿ, ಸುರೇಶ ಭಜಂತ್ರಿ, ರಾಮಣ್ಣ ಮೆಲ್ದಿ, ಹಾಗೂ ಹಿರಿಯರು, ಯುವಕರು,ಮಹಿಳೆಯರು ಪಾಲ್ಗೊಂಡಿದ್ದರು.

About vijay_shankar

Check Also

ಕೊರಮ ಸಮಾಜದಿಂದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸ ಹಾಗೂ ಅದ್ದೂರಿ ಪಲ್ಲಕ್ಕಿ ಉತ್ಸವದ ಮೆರವಣಿಗೆ

ಗುಡೂರು sc :ಇಂದು ಇಲಕಲ್ಲ ತಾಲ್ಲೂಕಿನ ಗುಡೂರುsc ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಕೊರಮ ಸಮಾಜ ಹಾಗೂ ನೂಲಿ ಚಂದಯ್ಯ ಯುತ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.