
ಅಮೀನಗಡ;
ಪ್ರತಿ ವರ್ಷದಂತೆ ಈ ವರ್ಷವೊ ಕೂಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹಾಗೂ ಕೇನರಾ ಬ್ಯಾಂಕ್, ಗ್ರಾಮ ಪಂಚಾಯತಿ ಇಂದೆ ಸ್ಥಳದಲ್ಲಿ ಎಲ್ಲವೂ ಅಕ್ಕ ಪಕ್ಕದಲ್ಲಿ ಇರುವುದರಿಂದ ನಿತ್ಯ ಬರುವ ಸಾರ್ವಜನಿಕರಿಗೆ ಅನೂಕುಲ ಆಗುವ ದೃಷ್ಟಿಯಿಂದ ಗ್ರಾಮದ ವೀರ ಸಾವರ್ಕರ್ ಯುವ ಸೇನೆ ಜಿಲ್ಲಾ ಸಂಚಾಲಕ ಶ್ರೀ ನಾಗೇಶ ಗಂಜಿಹಾಳ ಹಾಗೂ ಸಂಘದ ಕಾರ್ಯಕರ್ತರು ಕಳೆದ ನಾಲ್ಕು ವರ್ಷಗಳಿಂದ ಜನತೆಗೆ ಶುದ್ದ ಕುಡಿಯುವ ನೀರಿನ ಅರವಟಿಗೆಗೆ ಇಂದು ಚಾಲನೆ ನೀಡಿದರು. ಗ್ರಾಮದ ಮಧ್ಯ ಎರಡು ಹೋಟೆಲ್ ಇರುವುದರಿಂದ ಅಲ್ಲಿ ಮಹಿಳೆಯರು ಹೋಗಲು ಹಿಂಜರಿಯುತ್ತಾರೆ, ಬರುವ ಎಲ್ಲಾ ಸಾರ್ವಜನಿಕರ ಅನೂಕುಲಕ್ಕಾಗಿ ಈ ಸೇವೆ ಒದಗಿಸಲಾಗಿ ಜನತೆ ಈ ನೀರನ್ನು ದುಂದು ವೆಚ್ಚ ಮಾಡದೆ ಹಿತ ಮಿತವಾಗಿ ಕುಡಿಯಲು ಮಾತ್ರ ಬಳಸಬೇಕು ಎಂದು ಮಾಜಿ ಗ್ರಾಮ,ಪಂ, ಸದಸ್ಯ ನಾಗೇಶ ಗಂಜಿಹಾಳ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂ,ಸದಸ್ಯ ಗ್ಯಾನಪ್ಪ ಗೋನಾಳ,ಮುಸ್ತಫಾ ,ಮುಲ್ಲಾ,ಎಸ್,ಡಿ,ಎಮ್,ಸಿ,ಅಧ್ಯಕ್ಷ ಯಮನೂರ,ಹುಲ್ಲಾಳ,ಪತ್ರಕರ್ತ ಡಿ,ಬಿ,ವಿಜಯಶಂಕರ್, ಹನಮಂತ ತಳವಾರ, ದೇವರಾಜ ಕಮತಗಿ, ಆನಂದ ಮೊಕಾಶಿ, ಉಪಸ್ಥಿತಿ ಇದ್ದರು.
