Breaking News

ಅಮೆರಿಕಾದ ಜಿಲ್ಲಾ ನ್ಯಾಯಾಲಯದ ಜಡ್ಜ್ ಆಗಲಿರುವ ಭಾರತೀಯ ಮೂಲದ ರೂಪಾ ರಂಗ

ಭಾರತ ಮೂಲದ ಇಂಡಿಯನ್-ಅಮೆರಿಕನ್ ರೂಪಾ ರಂಗ ಪುಟ್ಟಗುಂಟಾ ಅವರನ್ನು ಫೆಡರಲ್ ನ್ಯಾಯಾಧೀಶರನ್ನಾಗಿ ನೇಮಿಸುವ ಉದ್ದೇಶವನ್ನು ಅಮೆರಿಕ ಅಧ್ಯಕ್ಷ ಜೋ ಬಿಡನ್ ವ್ಯಕ್ತಪಡಿಸಿ, ನಾಮನಿರ್ದೇಶನ ಮಾಡಿದ್ದಾರೆ. ನ್ಯಾಯಾಂಗದ 10 ಉನ್ನತ ಸ್ಥಾನಗಳಿಗೆ ಅಧ್ಯಕ್ಷರು ನಾಮನಿರ್ದೇಶನ ಮಾಡಿದ್ದು, ಅದರಲ್ಲಿ ಭಾರತೀಯ-ಅಮೆರಿಕನ್, ಆಫ್ರಿಕನ್-ಅಮೆರಿಕನ್ ಮತ್ತು ಮುಸ್ಲಿಂ ಅಮೆರಿಕನ್ ಅಭ್ಯರ್ಥಿಗಳು ಇದ್ದಾರೆ.

10 ಫೆಡರಲ್ ಸರ್ಕ್ಯೂಟ್ ಮತ್ತು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಹುದ್ದೆಗಳಿಗೆ ಮತ್ತು ಒಂದು ಕೊಲಂಬಿಯಾ ಜಿಲ್ಲೆಯ ಸುಪೀರಿಯರ್ ಕೋರ್ಟ್ ನ್ಯಾಯಾಧೀಶ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಲಾಗಿದೆ. ಈ ಅರ್ಹ ಅಭ್ಯರ್ಥಿಗಳು ತಮ್ಮ ಹಿನ್ನೆಲೆ ಮತ್ತು ವೃತ್ತಿಪರ ಅನುಭವದಲ್ಲಿ ಅಮೆರಿಕಾದ ಜನರ ಸಂಪೂರ್ಣ ವೈವಿಧ್ಯತೆಯನ್ನು ಪ್ರತಿಬಿಂಬಿಸಬೇಕು ಎಂಬುದು ಅಧ್ಯಕ್ಷರ ಆಳವಾದ ನಂಬಿಕೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

ಯುಎಸ್ ಸೆನೆಟ್ ದೃಢಪಡಿಸಿದರೆ, ನ್ಯಾಯಾಧೀಶೆ ರೂಪಾ ರಂಗ ಪುಟ್ಟಗುಂಟಾ ಅಮೆರಿಕಾದ ಜಿಲ್ಲಾ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿದ ಮೊದಲ ಏಷ್ಯನ್ ಅಮೆರಿಕನ್ ಮತ್ತು ಪೆಸಿಫಿಕ್ ಐಲ್ಯಾಂಡರ್ (AAPI) ಮಹಿಳೆಯಾಗಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ರೂಪಾ ರಂಗ ಪುಟ್ಟಗುಂಟಾ ಅವರು 2007 ರಲ್ಲಿ ಓಹಿಯೋ ಸ್ಟೇಟ್ ಮೊರಿಟ್ಜ್ (Ohio State Moritz) ಕಾಲೇಜ್ ಆಫ್ ಲಾದಿಂದ ಪದವಿ ಪಡೆದಿದ್ದಾರೆ.  2008 ರಿಂದ 2010 ರವರೆಗೆ ವಾಷಿಂಗ್ಟನ್ ಡಿ.ಸಿ. ಸುಪೀರಿಯರ್ ಕೋರ್ಟ್‌ನ ನ್ಯಾಯಾಧೀಶ ವಿಲಿಯಂ ಎಂ. ಜಾಕ್ಸನ್‌ಗೆ ಕಾನೂನು ಸಹಾಯಕಿಯಾಗಿ ತಮ್ಮ ಕಾನೂನು ವೃತ್ತಿಜೀವನವನ್ನು ಪ್ರಾರಂಭಿಸಿದರು, ಜೊತೆಗೆ 2010 ರಿಂದ 2011 ರವರೆಗೆ ಡಿ.ಸಿ. ಮೇಲ್ಮನವಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆಯಾಗಿದ್ದರು.

ನ್ಯಾಯಾಧೀಶೆ ಪುಟ್ಟಗುಂಟಾ ಪ್ರಸ್ತುತ ವಾಷಿಂಗ್ಟನ್ ಡಿ.ಸಿ. ಬಾಡಿಗೆ ವಸತಿ ಆಯೋಗದ ಆಡಳಿತಾತ್ಮಕ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2019 ರಲ್ಲಿ ಆಯೋಗಕ್ಕೆ ಸೇರುವ ಮೊದಲು, ನ್ಯಾಯಾಧೀಶೆ ಪುಟ್ಟಗುಂಟ ಅವರು 2013 ರಿಂದ 2019 ರವರೆಗೆ ಸ್ವಂತ ಪ್ರಾಕ್ಟೀಸ್ ಮಾಡುತ್ತಿದ್ದರು.

About vijay_shankar

Check Also

MS ಡೌಲಪರ್ಸ್ ಕಂಪನಿ ಹೆಸರಲ್ಲಿ ಸಾರ್ವಜನಿಕರಿಂದ ಲಕ್ಷ ಲಕ್ಷ ಹಣ FD ಡಿಪಾಜಿಟ್ ರೂಪದಲ್ಲಿ  ಕಮತಗಿಯ ಕಾಸಗಿ ಶಿಕ್ಷಕ  ಹುಚ್ಚಪ್ಪ ವಡವಡೊಗಿ ಇವರಿಂದ ಹಗಲು ದರೋಡೆ

MS ಡೌಲಪರ್ಸ್ ಕಂಪನಿ ಹೆಸರಲ್ಲಿ ಸಾರ್ವಜನಿಕರಿಂದ ಲಕ್ಷ ಲಕ್ಷ ಹಣ FD ಡಿಪಾಜಿಟ್ ರೂಪದಲ್ಲಿ ಕಮತಗಿಯ ಕಾಸಗಿ ಶಿಕ್ಷಕ ಹುಚ್ಚಪ್ಪ ವಡವಡೊಗಿ ಇವರಿಂದ ಹಗಲು ದರೋಡೆ

ಕಮತಗಿ: ರಾಜ್ಯದಲ್ಲಿ ಹಣ ಡಬ್ಲಿಂಗ್ ಹಾಗೂ ಶೇರು ಮಾರುಕಟ್ಟೆ ,ಅತೀ ಕಡಿಮೆ ಸಮಯದಲ್ಲಿ ಹಣ ಡಬ್ಲಿಂಗ್ ಜನರ ಆಕರ್ಷಿಸಲು ವಿವಿಧ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.