
** ಕಾರ್ಯಕ್ರಮದ ಸಭೆ ಉದ್ದೇಶಿಸಿ ಮಾತನಾಡುತ್ತಿರುವ ಶ್ರೀ ನಾಗೇಶ ಗಂಜಿಹಾಳ.

ನೂತನ ಸದಸ್ಯರಾದ ಹನಮಂತ ಮೀನಜಗಿ ಅವರಿಗೆ ಶ್ರೀ ಸುರೇಶ ಜವಳಿ ಅವರು ಸ್ವಾಮಿ ವಿವೇಕಾನಂದ ಅವರ ಪುಸ್ತಕ ನೀಡಿ ಅಭಿನಂದಿಸಿದರು,

ಅಮೀನಗಡ : ಇಂದು ಸೊಳೇಭಾವಿ ಗ್ರಾಮದ ಶ್ರೀ ರಾಮಯ್ಯಸ್ವಾಮಿ ದೇವಸ್ಥಾ ನದ ಹೊರಗೆ ಭಾರತೀ ಯ,ಜನತಾ ಪಕ್ಷದ ಹಲವು ಮುಖಂಡರು,ಕಾರ್ಯಕರ್ತರು ಸೇರಿ ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದ ಪಕ್ಷದ ಕಾರ್ಯಕರ್ತರಿಗೆ ಇದೆ ಜನವರಿ ೧೩ ರಂದು ಬಾಗಲಕೋಟೆಯಲ್ಲಿ DCM ಗೋವಿಂದ ಕಾರಜೋಳ ಅವರ ನೇತ್ರತ್ವದಲ್ಲಿ ಜನಸೇವಕ ಎಂಬ ವಿಶೇಷ ಕಾರ್ಯಕ್ರಮದ ಸಲುವಾಗಿ ನಾಗೇಶ ಗಂಜಿಹಾಳ ಅವರ ಸಾರಥ್ಯದಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು. ಸೊಳೇಭಾವಿ ಗ್ರಾಮ ಘಟಕದಿಂದ ಕಳೆದ ಗ್ರಾಮ ಪಂಚಾಯತಿ ಚುನಾವಣೆ ಹಾಗೂ PKPS ಸಂಘದ ಚುನಾವಣೆಯಲ್ಲಿ ಗೆದ್ದ ಪಕ್ಷದ ಕಾರ್ಯಕರ್ತರಿಗೆ ಈ ಸಂಧರ್ಭದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಸಭೆ ಅಧ್ಯಕ್ಷತೆಯನ್ನು ಪಕ್ಷದ ಹಿರಿಯ ನಾಯಕರಾದ ಶ್ರೀ ಹನಮಂತಗೌಡ ಬೇವೂರು ಅವರು ವಹಿಸಿದ್ದರು. ಪಾಲ್ಗೊಂಡ ಎಲ್ಲಾ ಕಾರ್ಯಕರ್ತರಿಗೆ ಮುಂಬರುವ ಜಿಲ್ಲಾ ಪಂಚಾಯತ ಹಾಗೂ ತಾಲ್ಲೂಕು ಪಂಚಾಯತ ಚುನಾವಣೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಈ ಕಾರ್ಯಕ್ರಮದ ಮೂಲಕ ಪಕ್ಷ ಇನ್ನೂ ಬಲವರ್ಧನೆ ಆಗಬೇಕಾಗಿದೆ,ಆದ್ದರಿಂದ ೧೨ನೇ ತಾರಿಕಿಗೆ ನಾವೆಲ್ಲರೂ ಬಾಗಲಕೋಟೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮ ಯುವ ನಾಯಕರಿಗೆ ಅಭಿನಂದನೆ ಸಲ್ಲಿಸಿ ಬೂತ್ ಮಟ್ಟದಿಂದ ಪಕ್ಷ ಬಲಪಡಿಸಲು ಹನಮಂತಗೌಡ ಬೇವೂರು ಸಲಹೆ ಕೊಟ್ಟರು.

ನೂತನ ಸದಸ್ಯರಾದ ಶ್ರೀ ಗ್ಯಾನಪ್ಪ ಗೋನಾಳ ಅವರಿಗೆ ಶ್ರೀ ಹಮಂತಗೌಡ ಬೇವೂರು ಅವರು ಸ್ವಾಮಿ ವಿವೇಕಾನಂದ ಅವರ ಪುಸ್ತಕ ನೀಡಿ ಅಭಿನಂದಿಸಿದರು,

ನೂತನ ಗ್ರಾಮ ಪಂಚಾಯತ ಸದಸ್ಯರಿಗೆ ಈ ಸಂಧರ್ಭದಲ್ಲಿ “ವೀರ ಕೇಸರಿ, ಎಂಬ ಸ್ವಾಮಿ ವಿವೇಕಾನಂದ ಅವರ ಪುಸ್ತಕ ನೀಡಿ ಅಭಿನಂದಿಸಲಾಯಿತು. ನೂತನ ಗ್ರಾಂ,ಪ,ಸದಸ್ಯರಾದ ಶ್ರೀ ಗ್ಯಾನಪ್ಪ ಗೋನಾಳ ಶ್ರೀಮತಿ ಸಾವಿತ್ರಿ ದೇ ಮೇಟಿ ಶ್ರೀ ಹನಮಂತ ಮಿನಜಗಿ. ಹಾಗೂ ಪಿಕೆಪಿಸ್‌ಸದಸ್ಯ ಶ್ರೀ ಆನಂದ ಮೊಕಾಶಿ ,ಹಿರಿಯ ಮುಖಂಡರಾದ , ಹನಮಂತಗೌಡ ಬೇವೂರ, ಮಾಜಿ ಗ್ರಾಂ,ಪ,ಸದಸ್ಯರಾದ ಶ್ರೀ ನಾಗೇಶ ಗಂಜಿಹಾಳ ಶ್ರೀ ಹನಮಂತ ಭಜಂತ್ರಿ ಶ್ರೀ ಹಾಲಪ್ಪ ಹಾದಿಮನಿ ಶ್ರೀ ಸುರೇಶ. ಜವಳಿ ಶ್ರೀ ಆಸಂಗೆಪ್ಪ ಭಜಂತ್ರಿ ಮುಂತಾದ ಬಿಜೆಪಿ ಕಾರ್ಯಕರ್ತರು ಉಪಸ್ಥಿತಿ ಇದ್ದರು.
ವರದಿ: ಎಮ್,ಡಿ,ಮುಸ್ತಫಾ.