ಮಂಗಳೂರು: ಕರ್ನಾಟಕ ಕಲ್ಬರಲ್ ಫೌಂಡೇಶನ್ ಇದರ ಅಂತರ್ ರಾಷ್ಟ್ರೀಯ ಸಮಿತಿ ವತಿಯಿಂದ “ಕೋವಿಡ್ ಸಮಯದಲ್ಲಿ ಹಾಗೂ ನಂತರದ ಜೀವನ” ಎಂಬ ವಿಷಯದ ಕುರಿತು ಸೆಪ್ಟೆಂಬರ್4 ರಂದು Zoom App ನಲ್ಲಿ ಆನ್ಲೈನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕೇರಳ ಮರ್ಕಝ್ ನಾಲೇಡ್ ಸಿಟಿ ನಿರ್ದೇಶಕ ಡಾ.ಅಬ್ದುಲ್ ಹಕೀಂ ಅಲ್-ಅಝ್ಹರಿ ಉಪನ್ಯಾಸ ನೀಡಲಿದ್ದಾರೆ.
ಕೆಸಿಎಫ್ ಅಂತರ್ ರಾಷ್ಟ್ರೀಯ ಸಮಿತಿ ಸಾಂತ್ವನ ಇಲಾಖೆ ಅಧ್ಯಕ್ಷ ಅಲಿ ಮುಸ್ಲಿಯಾರ್ ರವರ ದುಆ ದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಅಂತರ್ ರಾಷ್ಟ್ರೀಯ ಸಮಿತಿ ಅಡ್ಮಿನ್ ಇಲಾಖೆಯ ಅಧ್ಯಕ್ಷ ಡಾ.ಅಬ್ದುಲ್ ರಶೀದ್ ಝಿನಿ ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಜನಾಬ್ ಖಮರುದ್ದೀನ್ ಗೂಡಿನಬಳಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷ ಡಾ.ಶೇಖ್ ಭಾವ ಮಂಗಳೂರು ಹಾಗೂ ಫೈನಾನ್ಸಿಯಲ್ ಕಂಟ್ರೋಲರ್ ಹಮೀದ್ ಸಅದಿ ಈಶ್ವರಮಂಗಳ ಅವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.
ಕೋವಿಡ್ ಕಾಲದಲ್ಲಿ ಹಲವು ಕೆಲಸಗಳು ನಷ್ಟವಾಗಿದ್ದು, ಇನ್ನು ಕೆಲವರು ಆರ್ಥಿಕವಾಗಿ ಬಹುದೊಡ್ಡ ಕಷ್ಟದಲ್ಲಿದ್ದಾರೆ. ಇದಕ್ಕೂ ಮಿಗಿಲಾಗಿ ಈ ಕೋವಿ ಕಾಲದಿಂದ ಹೊರಬಂದ ಮೇಲೆ ಪರಿಸ್ಥಿತಿ ಹೇಗಿರುತ್ತದೆ. ಎಂಬುದು ಊಹಿಸಲೂ ಸಾಧ್ಯವಿಲ್ಲ ವಿಷಯವಾಗಿದೆ. ಹೀಗಿರುವಾಗ ನಾವು ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂದು ತಿಳಿದು ಈ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಲು ಉಸ್ತಾದರು ನೀಡುವ ಸಲಹೆಗಳು ಉಪಕಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಆದ್ದರಿಂದ ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಲು ಅಡ್ಮಿನ್ ಇಲಾಖೆಯ ಕಾರ್ಯದರ್ಶಿ ಎಲ್ ಬೊಲ್ಮಾರ್ ಬರ್ಕ ಹಾಗೂ ಇಹ್ವಾನ್ ಇಲಾಖೆಯ ಕಾರ್ಯದರ್ಶಿ ರಹೀಂ ಸಅದಿ ಖತ್ತರ್ ರವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.