ಬಾಗಲಕೋಟೆ: ವಿಧಾನಸಭೆ ವಿರೋಧ ಪಕ್ಷದ ನಾಯಕರೂ ಆದ ಶಾಸಕ ಸಿದ್ಧರಾಮಯ್ಯ ಅವರಿಗೆ ಕೋವಿಡ್ ದೃಢಪಟ್ಟಿರುವ ಕಾರಣ ಅವರು ಬೇಗನೇ ಗುಣವಾಗುವಂತೆ ಪ್ರಾರ್ಥಿಸಿ ಬಾದಾಮಿ ತಾಲ್ಲೂಕು ಕಾಂಗ್ರೆಸ್ ಘಟಕ ಹಾಗೂ ಅಭಿಮಾನಿಗಳು ಸೇರಿ ಮಂಗಳವಾರ ಬನಶಂಕರಿ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ವಿರೋಧ ಪಕ್ಷದ ನಾಯಕರಾಗಿ ರಚನಾತ್ಮಕ ಕಾರ್ಯಗಳಿಂದ ಸದಾ ಕ್ರಿಯಾಶೀಲರಾಗಿರುವ ಸಿದ್ದರಾಮಯ್ಯ ಅವರು ಆದಷ್ಟು ಬೇಗ ಕೋವಿಡ್‌ನಿಂದ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಬನಶಂಕರಿ ದೇವಿಗೆ ಅಭಿಷೇಕ ಮಾಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹೊಳಬಸು ಷ,ಶೆಟ್ಟರ, ಪಿ.ಆರ್.ಗೌಡರ,ಮಲ್ಲಣ್ಣ ಯಲಿಗಾರ,ರಾಜು ಚಿಮ್ಮನಕಟ್ಟಿ,ಮಹೇಶ ಹೊಸಗೌಡರ, ರಾಜಮಹ್ಮದ ಬಾಗವಾನ,ಎಮ್.ಎಚ್.ಛಲವಾದಿ,ರೇವಣಸಿದ್ದಪ್ಪ ನೋಟಗಾರ, ಹನಮಂತ ಅಪ್ಪಣ್ಣವರ, ಶಿವು ಮಣ್ಣೂರ ನಾಗಪ್ಪ ಅಡಪಟ್ಟಿ, ಶ್ರೀಕಾಂತಗೌಡ ಗೌಡರ, ವೆಂಕಣ್ಣ ಹೋರಕೇರಿ, ಶೊರಪ್ಪ ಕೊಪನ್ನವರ ,ಮುತ್ತಣ್ಣ ಗಾಜಿ, ಶಿವಾನಂದ ಚೊಳನ್ನವರ, ಶರಣಪ್ಪ ತಮಿನಾಳ,ಕಾಮಣ್ಣ ಪೂಜಾರ,ಪ್ರಕಾಶ ದೇಸಾಯಿ, ಬಾಪುಗೌಡ ಪಾಟೀಲ,ಕೆ.ಬಿ.ಗೌಡರ,ಶಿವಾನಂದ ದ್ಯಾಮಣ್ಣವರ, ವಾಸು ಬಾವಿ ಮತ್ತಿತರರು ಪಾಲ್ಗೊಂಡಿದ್ದರು.