
ಅಮೀನಗಡ : ಇಂದು ಪ್ರತಿ ಸೋಮವಾರದಂತೆ ಈ ವಾರವು ೪೫ ನೇ ಮಹಾ ರದ್ರಾಭಿಶೇಖವನ್ನು ಶ್ರೀ ಶೂಲೇಶ್ವರ ಸೇವಾ ಸಮಿತಿಯಿಂದ ನಡೆಯಿತು ಅಪಾರ ಭಕ್ತರು ಬೆಳಗ್ಗೆ ೦೭ ಗಂಟೆಗೆಯಿಂದ ನಿರಂತರ ದರ್ಶನ ಪಡೆದು ಉಪಹಾರ ಪ್ರಸಾದ ಸ್ವೀಕರಿಸಿದರು, ಇಂದು ಸಾಯಂಕಾಲ ಪ್ರತಿ ವಾರದಂತೆ ಈ ವಾರವು ಸಂಜೆ ಗೋಧೂಳಿ ಸಮಯದಲ್ಲಿ ಶೂಲೇಶ್ವರನಿಗೆ ಮಹಾ ಕ್ಷೀರಾಭಿಶೇಖ ನಡೆಯಿತು, ಗ್ರಾಮದ ಹಲವು ದೇವಾಂಗ ಸಮಾಜದ

ಶ್ರೀ ಬನಶಂಕರಿ ದೇವಿ ಲಲಿತ ಪಾರಾಯಣ ಮಂಡಳಿಯ ಸರ್ವ ಸದಸ್ಯರು ಹಾಗೂ ಬಾಲ ಮಕ್ಕಳು ಹಾಗೂ ಯುವತಿಯರು, ತಾಯಂದಿರು ಶಿವಾಲಯದಲ್ಲಿ ಅರ್ಧ ನಾರೇಶ್ವರನಾದ ಶ್ರೀ ಶೂಲೇಶ್ವರ ಶಿವಾಲಯದಲ್ಲಿ ದೇವಿ ಲಲಿತಾ ಪಾರಾಯಣ ಮಾಡಲಾಯಿತು, ಸುಮಾರು ೫೦ ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸಂಘದ ಸದಸ್ಯನಿಯಾದ ಕುಮಾರಿ ಮಧುಶ್ರೀ ಬೆಟಗೇರಿ, ಕುಮಾರಿ ಸಹನಾ ಪೂಜಾರಿ ಕುಮಾರಿ ಶಂಕ್ರಮ ಶಾಪೂರ ಕುಮಾರಿ ಶಾಲಿನಿ ದೇವಾಂಗಮಠ ,

ಹಾಗೂ ಶ್ರೀಮತಿ ಸರಸ್ವತಿ ಶಿನ್ನೂರ ಶ್ರೀಮತಿ ಲಲಿತಾ ಧೂಪದ ಶ್ರೀಮತಿ ಶಂಕ್ರಮ್ಮ ನೆಮದಿ, ಶ್ರೀಮತಿ ಶಂಕ್ರಮ್ಮ ಮಿಣಜಗಿ ಅನೇಕ ಮಹಿಳೆಯರು ಸಾಮೂಹಿಕವಾಗಿ ದೇವಿ ಲಲಿತ ಪಾರಾಯಣ ಮಾಡಿದರು. ಈ ಸಂದರ್ಭದಲ್ಲಿ ಲಲಿತ ಪಾರಾಯಣ ಮಾಡಿದ ಕುಮಾರಿ ಮಧುಶ್ರೀ ಬೆಟಗೇರಿ ಅವರಿಗೆ ಎಲ್ಲರ ಪರವಾಗಿ ಗೌರವ ಸತ್ಕಾರ ಮಾಡಿ ಶಿವಾಲಯ ಅರ್ಚಕರಾದ ಶ್ರೀ ಮಹಾಂತಯ್ಯ ಹಿರೇಮಠ ಹಾಗೂ ಅವರ ಧರ್ಮಪತ್ನಿ ಭಾರತಿ ಅವರಿಂದ ಆರ್ಶಿವಾದ ಮಾಡಲಾಯಿತು, ಸಮಿತಿ ಅಧ್ಯಕ್ಷ ದೇವರಾಜ ಕಮತಗಿ, ಹಾಗೂ ಸದಸ್ಯರಾದ ಶ್ರೀ ಗ್ಯಾನಪ್ಪ ಗೋನಾಳ,ಶ್ರೀ ಯಮನೂರಪ್ಪ ಬಾರಕೇರ,ರಮೇಶ್ ಆಲೂರ, ಮುಂತಾದವರು ಉಪಸ್ಥಿತರಿದ್ದರು.
