
ಬೆಂಗಳೂರು: ಕರ್ನಾಟಕ ರಾಜ್ಯದ ಔಖಾಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಮೌಲಾನಾ ಶಾಫಿ ಸ ಅದಿ ಆಯ್ಕೆಯಾದ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿ ಮಾತನಾಡಿದ ಬ್ಯಾರಿ ಸೊಸೈಟಿ ಸಂಸ್ಥೆಯ ಮುಖ್ಯಸ್ಥ ಶೇಖಬ್ಬರವರು ಮೊದಲಿಗೆ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ “ಬ್ಯಾರಿ ಸಮುದಾಯ”ದವರಿಗೆ ಔಖಾಫ್ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿ ಬ್ಯಾರಿ ಸಮುದಾಯದ ಗೌರವ ಹೆಚ್ಚಿಸಿದೆ. ವಿರೋಧದ ನಡುವೆಯೂ ಸರ್ಕಾರ ದಿಟ್ಟಹೆಜ್ಜೆ ಇಟ್ಟು ತನ್ನ ಕರ್ತವ್ಯ ಪಾಲಿಸಿದೆ. ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವೆ ಶಶಿಕಲಾ ಜೊಲ್ಲೆ, ಸಚಿವರಾದ ಮಾಧುಸ್ವಾಮಿಯವರಿಗೆ ಹಾಗೂ ಸಿಎಂರವರ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ರವರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸುತ್ತೇವೆ ಎಂದ ಅವರು ತನ್ನ ಅಧಿಕಾರದ ಅವಧಿಯಲ್ಲಿ ಒಳ್ಳೆಯ ಕಾರ್ಯಗಳಿಗೆ ತಮ್ಮ ಸಹಕಾರವಿದೆ ಎಂದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಇಂಪಾಲ್ ಸಂಸ್ಥೆಯ ನಾಸೀರ್, ಮಂಗಳೂರಿನ ಸ್ಟಾರ್ ಇನ್ಫ್ರಾಟೆಕ್ ಮಾಲೀಕರಾದ ಶಕೀಲ್, ಉಳ್ಳಾಲದ ಶಿಹಾಬ್ ಟ್ರೇಡಿಂಗ್ ಕಾರ್ಪೋರೇಷನ್ ಮಾಲೀಕ ಶಹೀರ್ ಅಲಿ, ಟಿಎಂ ಈವೆಂಟ್ ಮಾಲೀಕ ಅಬ್ಬುಲ್ ಶಬ್ಬೀರ್, ಬಾಬು ಅಜೇಕಾರ್, ಸಮದ್ ತೀರ್ಥಹಳ್ಳಿ ಇತರರು ಉಪಸ್ಥಿತರಿದ್ದರು.