ಹೈದರಾಬಾದ್ : ಕೋವಿಡ್ ಸೋಂಕಿತ ತಂದೆ ಸಾವು ಬದುಕಿನ ನಡುವೆ ಹೋರಾಡುವ ವೇಳೆ ಆತನಿಗೆ ಮಗಳು ನೀರು ಕೋಡಲು ಹೋದಾಗ ಸ್ವತಃ ಆಕೆಯ ತಾಯಿಯೇ ಮಗಳನ್ನು ತಡೆದಿರುವ ಅಮಾನವೀಯ ಘಟನೆ ಬೆಳಕಿದೆ ಬಂದಿದೆ.
50 ವರ್ಷದ ವ್ಯಕ್ತಿ ವಿಜಯವಾಡಲ್ಲಿ ಕೆಲಸ ಮಾಡುತ್ತಿದ್ದು, ಕೋವಿಡ್ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ತಮ್ಮ ತವರೂರು ಆಂಧ್ರ ಪ್ರದೇಶದ ಶ್ರೀಕಾಕುಲಂಗೆ ಬಂದಿದ್ದಾರೆ. ಕೋವಿಡ್ ಸೋಂಕು ಇರುವುದರಿಂದ ಗ್ರಾಮಸ್ಥರು ಆ ವ್ಯಕ್ತಿಯನ್ನು ಗ್ರಾಮದಿಂದ ಹೊರ ಇಟ್ಟಿದ್ದಾರೆ. ಅಲ್ಲದೆ ಆತನ ಮನೆಯಲ್ಲಿ ಸೇರಿಸಲು ಹೆಂಡತಿ ಕೂಡ ಒಪ್ಪಿಗೆ ನೀಡಿಲ್ಲ. ಈ ಕಾರಣದಿಂದ ಸೋಂಕಿತ ವ್ಯಕ್ತಿ ತನ್ನ ಗ್ರಾಮದ ಪಕ್ಕದಲ್ಲಿ ಗುಡಿಸಲಿನಲ್ಲಿ ಉಳಿದುಕೊಂಡಿದ್ದಾನೆ.
ಈ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಹೃದಯ ಕಲಕುವ ಘಟನೆಯನ್ನು ವಿಡಿಯೋ ಮಾಡುತ್ತಿರುವ ವ್ಯಕ್ತಿ ಕೂಡ ಸೋಂಕಿತ ವ್ಯಕ್ತಿಯ ಸಹಾಯಕ್ಕೆ ಹೋಗಿಲ್ಲ. ನೀರು ಕೊಡಲು ಹೋದ ಮಗಳನ್ನು ಆಕೆಯ ತಾಯಿ ಹಿಂದಿನಿಂದ ಎಳಯುತ್ತಿರುವ ದೃಶ್ಯ ನೋಡಿದ ಎಂಥವರಿಗೂ ನೋವಾಗುತ್ತದೆ.

ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲದೆ ಆ ವ್ಯಕ್ತಿಯು ಗ್ರಾಮದಿಂದ ಹೊರಗಡೆಯೇ ಪ್ರಾಣ ಬಿಟ್ಟಿದ್ದಾರೆ. ಆತ ಸಾವನ್ನಪ್ಪಿದ ಮೇಲೆ ಗ್ರಾಮಸ್ಥರು ಹೆಂಡತಿ ಮತ್ತು ಮಗಳಿಗೆ ಆತನ ಬಳಿ ಹೋಗಲು ಅನುಮತಿ ನೀಡಿದ್ದಾರೆ. ಮತ್ತೊಂದು ವಿಚಾರ ಏನಂದ್ರೆ ಕುಟುಂಬದ ಎಲ್ಲರಿಗೂ ಕೋವಿಡ್ ಸೋಂಕು ತಗುಲಿರುವ ವಿಚಾರ ಗೊತ್ತಾದ ಮೇಲೆ ಆ ವ್ಯಕ್ತಿಯನ್ನು ನೋಡಲು ಅನುಮತಿ ನೀಡಲಾಗಿದೆಯಂತೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News