Breaking News

ಲಕ್ಕಿ ಫಿಲಮ್ಸ್ ವತಿಯಿಂದ ಆರ್ ಸಂಪತ್ ನಿರ್ಮಿಸುತ್ತಿರುವ ’ಧ್ರುವ ನಕ್ಷತ್ರ’ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ


ಹುಬ್ಬಳ್ಳಿ : ಬೆಂಗಳೂರಿನ ಲಕ್ಕಿ ಫಿಲಮ್ಸ್ ವತಿಯಿಂದ ಆರ್ ಸಂಪತ್ ನಿರ್ಮಿಸುತ್ತಿರುವ ’ಧ್ರುವ ನಕ್ಷತ್ರ’ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ನಗರದ ಸಿದ್ದಾರೂಢಮಠದಲ್ಲಿ ನೆರವೇರಿತು.
ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ ಅವರು ಕ್ಲಾಪ್ ಮಾಡುವ ಮೂಲಕ ಮೊದಲ ದೃಶ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನಿಂದ ಇಲ್ಲಿ ಬಂದು ಇಲ್ಲಿಯೇ ಚಿತ್ರೀಕರಿಸುತ್ತಿರುವುದು ಸಂತಸದ ಸಂಗತಿ. ಇದರಲ್ಲಿ ಜನಪ್ರಿಯ ಹಾಸ್ಯ ಕಲಾವಿದರಾದ ವೈಜನಾಥ ಬಿರಾದಾರ ಪ್ರಮುಖ ಪಾತ್ರ ಮಾಡುತ್ತಿರುವುದರಿಂದ ಇದು ರಾಜ್ಯದಲ್ಲಿ ಯಶಸ್ವಿ ಪ್ರದರ್ಶನ ಕಾಣಲಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಹಿರಿಯ ಚಲನಚಿತ್ರ ಕಲಾವಿದರಾದ ಡಾ. ಗೋವಿಂದ ಮಣ್ಣೂರ ಅವರು ಕ್ಯಾಮರಾ ಗುಂಡಿ ಒತ್ತುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ಮಾಡಿ ತಂಡಕ್ಕೆ ಶುಭ ಕೋರಿದರು. ಅತಿಥಿಗಳಾಗಿ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಂಕರ ಸುಗತೆ, ನಿರ್ದೇಶಕ ಗುರುರಾಜ ಕಾಟೆ, ಹಿರಿಯ ಪತ್ರಕರ್ತ ಅಕ್ಬರ್ ಬೆಳಗಾಂವಕರ, ಚಲನಚಿತ್ರ ಪಿ.ಆರ್.ಓ ಡಾ. ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಿಗಿ, ನಿರ್ಮಾಪಕ, ನಟ ರೇಣುಕುಮಾರ ಸಂಸ್ಥಾನಮಠ, ಶೋಭಾ ಸಂಸ್ಥಾನಮಠ ಆಗಮಿಸಿದ್ದರು.
ಹಿರಿಯ ಕಲಾವಿದ ವೈಜನಾಥ ಬಿರಾದಾರ ಮಾತನಾಡಿ, ಗಂಡು ಮೆಟ್ಟಿನ ನಾಡು ಹುಬ್ಬಳ್ಳಿಯಲ್ಲಿ ಈ ಸಿನಿಮಾ ಚಿತ್ರೀಕರಣ ನಡೆಯುತ್ತಿರುವುದು ಸಂತಸದ ಸಂಗತಿ. ಇಲ್ಲಿನವರ ಪ್ರೀತಿಗೆ ನಾನು ಆಭಾರಿ. ಕುಡುಕರ ಜೀವನ ಹೇಗಿರುತ್ತದೆ? ಅವರ ಕುಟುಂಬ ಹೇಗಿರುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಇದು ಎಲ್ಲರ ಮನಗೆಲ್ಲುವಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು. ಹಿರಿಯ ಚಿತ್ರರಂಗ, ಕಿರುತೆರೆಯ ಕಲಾವಿದೆ ಸುನಂದಾ ಕಲಬುರ್ಗಿ ಮಾತನಾಡಿ, ಚಿತ್ರೀಕರಣಕ್ಕೆ ಹುಬ್ಬಳ್ಳಿಯ ಪರಿಸರ ಉತ್ತಮವಾಗಿದೆ. ಈ ಸಿನಿಮಾದಲ್ಲಿ ನನಗೆ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ ಎಂದರು.
ಚಿತ್ರದಲ್ಲಿ ವೈಜನಾಥ ಬಿರಾದಾರ, ಸುನಂದಾ ಕಲಬುರ್ಗಿ,ಶಂಕರ ಸುಗತೆ,ಖಳನಾಯಕನಾಗಿ ಪತ್ರಕರ್ತ ಪ್ರಕಾಶ. ಬಿ, ರಾಜಶೇಖರ ಪಾಟೀಲ, ಜೆ.ಇ,ರಾಜು ವಿಜಾಪೂರ, ತುಳಸಿ ರಾಠೋಠ, ಶಿವಾನಂದ,ಕೆ, ಮಾ.ಪ್ರಣವ್, ಲಕ್ಷ್ಮಿ ಯಾದವ, ಮಹೇಂದ್ರಕುಮಾರ , ವೀರಣ್ಣ ವಿಠಲಾಪುರ ,ಜಾಯ್ ಗ್ಯಾಬ್ರಿಯಲ್ ಡೊಕ್ಕಾ, ಷಣ್ಮುಖ ರಾಮ್, ಪ್ರಭು ಪ್ರಕಿನ, ರಿಕಿ ಎಂ ಜಾಯ್, ಮೊಸೆಸ್ ಕೊಡಾಸಿ, ಮೊದಲಾದವರಿದ್ದಾರೆ. ಛಾಯಾಗ್ರಹಣ ಜೆ.ಇ. ಶಂಕರ್, ಸಂಕಲನ ಸಂಜೀವರೆಡ್ಡಿ, ಪ್ರಸಾಧನ ಅಭಿನಂದನ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಕತೆ , ಚಿತ್ರಕತೆ ಜೊತೆಗೆ ನಿರ್ದೇಶನವನ್ನು ಶಿವಾಜಿರಾವ್ ಮಾಡುತ್ತಿದ್ದಾರೆ .ಆರ್.ಸಂಪತ್ ನಿರ್ಮಾಪಕರಾಗಿದ್ದಾರೆ.


**
ವರದಿ: ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬

About vijay_shankar

Check Also

ಎ, ನಾಗರಾಜ ರೆಡ್ಡಿ ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಕನ್ನಡ ಚಲನಚಿತ್ರ ಚಿತ್ರೀಕರಣ ಮುಕ್ತಾಯ

Veryಬೆಂಗಳೂರ : ಸ್ನೇಹಾಲಯಂ ಕ್ರಿಯೇಷನ್ಸ್ ಸಮರ್ಪಿಸಿ ಎ.ಎ.ನ್.ಆರ್ ಪಿಕ್ಚರ್ಸ್ ಬ್ಯಾನರ್ಅಡಿಯಲ್ಲಿ ಎ. ನಾಗರಾಜ ರೆಡ್ಡಿ ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಕನ್ನಡಚಲನಚಿತ್ರದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.