Breaking News

ಶ್ರೀ ಅಶ್ವಿನಿ ಆನಂದ ಜೋಶಿ ಅರ್ಪಿಸುವ ‘ಅಮ್ಮು ಯು ಆರ್ ಗ್ರೇಟ್’ ಕಿರುಚಿತ್ರದ ಚಿತ್ರೀಕರಣದ ಮುಹೂರ್ತ ಸಮಾರಂಭ


ಧಾರವಾಡ : ಶ್ರೀ ಸಿದ್ದಿವಿನಾಯಕ ಪ್ರೊಡಕ್ಷನ್ ಅವರ ಶ್ರೀ ಅಶ್ವಿನಿ ಆನಂದ ಜೋಶಿ ಅರ್ಪಿಸುವ ‘ಅಮ್ಮು ಯು ಆರ್ ಗ್ರೇಟ್’ ಕಿರುಚಿತ್ರದ ಚಿತ್ರೀಕರಣದ ಮುಹೂರ್ತ ಸಮಾರಂಭ ಧಾರವಾಡದಲ್ಲಿ ನೆರವೇರಿತು.
ವಿನಾಯಕ ನಗರದ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಪೂಜೆಯೊಂದಿಗೆ ಮೊದಲ ದೃಶ್ಯವನ್ನು ಛಾಯಾಗ್ರಾಹಕ ದಯಾನಂದ ಸೆರೆಹಿಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕವಿವಿ ಸಿಂಡಿಕೇಟ್ ಸದಸ್ಯರಾದ ಡಾ.ಕಲ್ಮೇಶ ಹಾವೇರಿಪೇಟ್ ಅವರು ಅರವಿಂದ ಮುಳಗುಂದ ಸದಾ ಕ್ರಿಯಾಶೀಲ ಉತ್ತರ ಕರ್ನಾಟಕದ ನಿರ್ದೇಶಕರು. ಈಗಾಗಲೇ ಮೂರು ಚಲನಚಿತ್ರಗಳನ್ನು ,ಕೆಲವು ಕಿರುಚಿತ್ರಗಳನ್ನೂ ನಿರ್ದೇಶನ ಮಾಡಿದ್ದು ಸ್ವತ: ಕಲಾವಿದರೂ ಆಗಿದ್ದಾರೆ. ಅವರ ಕ್ರಿಯಾಶೀಲತೆಗೆ ಈ ಕಿರುಚಿತ್ರ ಕೂಡ ಸಾಕ್ಷಿಯಾಗಿದೆ. ಎಲ್ಲರೂ ಇದನ್ನು ನೋಡಿ ಪ್ರೋತ್ಸಾಹ ನೀಡಬೇಕು ಎಂದರು. ನಿರ್ದೇಶಕ ಅರವಿಂದರು ಮಾತನಾಡಿ ಸಧ್ಯದಲ್ಲೇ ‘ನಮ್ಮೂರ ನಾಯಕ’ ಚಲನಚಿತ್ರದ ಚಿತ್ರೀಕರಣ ತಯಾರಿ ನಡೆದಿದೆ. ಸಂಪೂರ್ಣ ಉತ್ತರ ಕರ್ನಾಟಕದಲ್ಲೇ ಚಿತ್ರೀಕರಣ ನಡೆಸಲಿದ್ದೇವೆ. ಈ ನಡುವೆ ಆಕಸ್ಮಿಕವಾಗಿ ಕಿರುಚಿತ್ರ ನಿರ್ಮಿಸುವ ಜವಾಬ್ದಾರಿ ಬಿತ್ತು. ಇದರಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶವಿದೆ. ಮುಗಿದ ತಕ್ಷಣ ಅದನ್ನು ಆರಂಭ ಮಾಡುತ್ತೇವೆ ಎಂದರು.
ಪಾತ್ರವರ್ಗದಲ್ಲಿ ಬಹುಮುಖ ಪ್ರತಿಭೆಯ ನಟಿ, ಹಿನ್ನೆಲೆ ಗಾಯಕಿ,ಸಂಗೀತ ನಿರ್ದೇಶಕಿ ಶ್ರೀದೇವಿ ಮೆಳ್ಳಿಗಟ್ಟಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಅರವಿಂದ ಮುಳಗುಂದ್, ಅಫ್ತಾಬ್ ಹುಸೇನ್, ಆನಂದ ಜೋಶಿ, ಲಕ್ಷ್ಮಿ ಬಡಿಗೇರ,ಕೀರ್ತಿ ಅರವಿಂದ್, ಚಲನಚಿತ್ರ, ಮಿಮಿಕ್ರಿ ಕಲಾವಿದ ಅವಿನಾಶ ಗಂಜಿಹಾಳ, ಸಿದ್ದು ಢೇಕಣಿ, ಸೋಮು ಪಾಟೀಲ್, ಭೀಮಣ್ಣ ಡಿ.ಬಿ, ಖಾನಾಪೂರ, ಸತೀಶ್ ಪತ್ತಾರ, ಎನ್.ಎಸ್.ಪಾಟೀಲ್, ಬಸವರಾಜ್ ಕಾಜಗಾರ್, ನಾರಾಯಣ್ ದೇಸಾಯಿ , ಶ್ರೇಯಸ್ ಸಿಂಧೆ, ಪುಷ್ಪ ಹಿರೇಮಠ, ಗೀತಾ ಚಿಕ್ಕಮಠ, ಅಂಕಿತ ಕುಲಕರ್ಣಿ ಮೊದಲಾದವರು ಅಭಿನಯಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ದಯಾನಂದ್, ಪ್ರಸಾಧನ ದೇವರಾಜು ಕುಮಾರ್, ವಸ್ತçವಿನ್ಯಾಸ ಕೀರ್ತಿ ಅರವಿಂದ್, ಸಂಕಲನ, ಸಂಗೀತ ಸಿದ್ದಾರ್ಥ ಜಾಲಿಹಾಳ್, ಪತ್ರಿಕಾ ಸಂಪರ್ಕ ಡಾ.ವೀರೇಶ್ ಹಂಡಗಿ,ಕಥೆ ಸಂಭಾಷಣೇ ಮುಧು ಜೋಶಿ,ಸಹ ನಿರ್ದೇಶನ ಡಾ.ಪ್ರಭು ಗಂಜಿಹಾಳ, ಬದ್ರಿಪ್ರಸಾದ ಕುಲಕರ್ಣಿ, ಮಹಾಂತೇಶ್ ಹಳ್ಳೂರ್, ವಿನಾಯಕ ಕಲ್ಲೂರ ಅವರ ಸಹಕಾರ, ನಿರ್ಮಾಣ ನಿರ್ವಹಣೆ ರಘು ತುಮಕೂರ , ಧರ್ಮವೀರ ಡಾ.ಕಲ್ಮೇಶ್ ಹಾವೇರಿಪೇಟ್ ಅವರ ಹಾರೈಕೆಗಳೊಂದಿಗೆ ,ಮಹಾಮಹಿಮ ಲಡ್ಡುಮುತ್ಯಾ, ಅಮರೇಶ್ವರ ಮಹಾತ್ಮೆ ಚಲನಚಿತ್ರ ನಿರ್ದೇಶಿಸಿದ ಅರವಿಂದ ಮುಳಗುಂದ ನಿರ್ದೇಶನ ಮಾಡುತ್ತಿದ್ದಾರೆ. ಸಧ್ಯ ವಿನಾಯಕ ನಗರ, ಶ್ರೀನಗರ, ಕಾಮನಕಟ್ಟಿ, ಶಂಕರಲಿಂಗೇಶ್ವರ ದೇವಸ್ಥಾನ, ಮಹಾಂತನಗರ , ಧಾರವಾಡ ಸುತ್ತಮುತ್ತ ಚಿತ್ರೀಕರಣ ನಡೆದಿದೆ.
***
ವರದಿ-
ಡಾ.ಪ್ರಭು.ಗಂಜಿಹಾಳ
ಮೊ:೯೪೪೮೭೭೫೩೪೬

About vijay_shankar

Check Also

ಎ, ನಾಗರಾಜ ರೆಡ್ಡಿ ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಕನ್ನಡ ಚಲನಚಿತ್ರ ಚಿತ್ರೀಕರಣ ಮುಕ್ತಾಯ

Veryಬೆಂಗಳೂರ : ಸ್ನೇಹಾಲಯಂ ಕ್ರಿಯೇಷನ್ಸ್ ಸಮರ್ಪಿಸಿ ಎ.ಎ.ನ್.ಆರ್ ಪಿಕ್ಚರ್ಸ್ ಬ್ಯಾನರ್ಅಡಿಯಲ್ಲಿ ಎ. ನಾಗರಾಜ ರೆಡ್ಡಿ ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಕನ್ನಡಚಲನಚಿತ್ರದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.