ಗೋವಾ: ನಾಡಿನ ಸಮಸ್ತ ಜನತೆಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯ ಕೋರಿದ ಮುರಳಿ ಮೋಹನ್ ಶಟ್ಟಿ

ಕರ್ನಾಟಕದ ಹೆಮ್ಮೆಯ ಕನ್ನಡಿಗನ ಸಣ್ಣ ಪರಿಚಯ

ಭಾರತದ ಅತೀ ಚಿಕ್ಕ ರಾಜ್ಯ ಎಂದರೆ ಅದು ಗೋವಾ ಈ ರಾಜ್ಯವನ್ನು ವಿಶ್ವದಲ್ಲಿ ಯಾರು ಇಟ್ಟ ಪಡದೇ ಇರಲು ಸಾಧ್ಯವಿಲ್ಲ ಇಡೀ ಸ್ವರ್ಗನೇ ಈ ಭೂಮಿಯಲ್ಲಿ ಇದೆ ಅನ್ನೊ ಫೀಲ್ ಒಂದು ಸಲ ಗೋವಾ ಕಡಲ ತೀರದಲ್ಲಿ ಇರುವ ವಿವಿಧ ಬೀಚ್ಗಳಿಗೆ ಬೇಟಿ ಕೊಟ್ಟಾಗ ಅದರ ಅನುಭವವಾಗುತ್ತದೆ. ಈ ಗೋವಾ ರಾಜ್ಯವೆಂದರೆ ವಿದೇಶಿಯರ ತುಂಬಾ ನೆಚ್ಚಿನ ತಾಣ ಅಷ್ಟೇ ಅಲ್ಲ ಭಾರತದ ಅನೇಕ ರಾಜ್ಯಗಳ ಜನರು ಕೂಡ ಈ ರಾಜ್ಯವನ್ನು ಇಷ್ಟ ಪಡುತ್ತಾರೆ. ಕಾರಣ ಇಲ್ಲಿ ಸುಂದರ ಪ್ರವಾಸಿ ತಾನಗಳು ಹಾಗೂ ಸಮುದ್ರದ ದಂಡೆಯ ಮೇಲೆ ಇರುವ ಸುಂದರ ರೆಸಾರ್ಟ್ ವಿವಿಧ ಬಗೆಯ ಮೀನುಗಳ ಖ್ಯಾಧ್ಯ ಕಡಿಮೆ ಧರದಲ್ಲಿ ಸಿಗುವ ಮಧ್ಯಪಾನ ಹೀಹಾಗಿ ಮೊಜು,ಮಸ್ತಿ,ಜೂಜಾಟಕ್ಕಾಗಿ ಕ್ಯಾಶಿನೊ ಆಟಕ್ಕಾಗಿ ಅನೇಕ ಬಗೆಯ ಜನರು ಇಲ್ಲಿಗೆ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಬರುತ್ತಾರೆ,

ಈ ರಾಜ್ಯದಲ್ಲಿ ಅತೀ ಹೆಚ್ಚಿನ ಆದಾಯ ಎಂದರೆ ಅದು ಪ್ರವಾಸಿಗರಿಂದ ಸಣ್ಣ ಬಂದೂರು ಇದೆ ಆದರೆ ಈ ರಾಜ್ಯದಲ್ಲಿ ಸುಮಾರು ೧೮ ಬೀಚ್ ಗಳು ಇವೆ, ಐಲೆಂಡ್ ಸೇರಿದಂತೆ ನಿತ್ಯ ಸಾವಿರಾರು ಜನ ಈ ರಾಜ್ಯಕ್ಕೆ ವರ್ಷದ ೧೨ ತಿಂಗಳು ವಿದೇಶಿಗರು ಬೇಟಿ ಕೊಡುತ್ತಾರೆ. ಈ ರಾಜ್ಯದಲ್ಲಿ ಸ್ಥಳಿಯವಾಗಿ ಕರ್ನಾಟಕ, ಮಹಾರಾಷ್ಟ್ರ, ಕೇರಳ,ಆಂದ್ರ, ಜನತೆ ಬಹಳ ಜನ ಇದ್ದಾರೆ. ಅತೀ ಹೆಚ್ಚಿನ ಜನ ಕರ್ನಾಟಕದವರು ಯಾಕೆ ಇಷ್ಟೊಂದು ಈ ರಾಜ್ಯದ ಬಗ್ಗೆ ನಾ ಪರಿಚಯ ಮಾಡುತ್ತಿದ್ದೇನೆ ಎಂದರೆ ನಮ್ಮ ಕರ್ನಾಟಕದ ಅಪ್ಪಟ ಕನ್ನಡ ಅಭಿಮಾನಿ, ಒಬ್ಬರು ಸುಮಾರು ವರ್ಷಗಳಿಂದ ಈ ರಾಜ್ಯದಲ್ಲಿ ಬದುಕು ಕಟ್ಟಿಕೊಂಡು ಎಲೆ ಮರೆಯ ಕಾಯಿಯಂತೆ ಸಮಾಜ ಸೇವೆ ಮಾಡುತ್ತಿದ್ದಾರೆ.

ಬಡವರ ಕಣ್ಮನಿಯಾಗಿ, ಅನೇಕ ಬಡ ಯುವಕರಿಗೆ ತಮ್ಮ ರೆಸಾರ್ಟ್, ರೆಸ್ಟೋರೆಂಟ್ ಗಳಲ್ಲಿ ಸುಮಾರು 400 ಯುವಕರಿಗೆ ಕೆಲಸ ಕೊಟ್ಟಿರುವ ನಮ್ಮ ಹೆಮ್ಮೆಯ ಕನ್ನಡಿಗ ಶ್ರೀ ಮುರಳಿ ಮೋಹನ್ ಶಟ್ಟಿ ಅವರು ಗೋವಾದಲ್ಲಿ ರತ್ನಸಾಗರ ರೆಸಾರ್ಟ್ , ಹಾಗೂ ೧೦ ಹೋಟೆಲ್ ರೆಸ್ಟೋರೆಂಟ್ ಮಾಲೀಕರು ಕನ್ನಡ ಸಂಘಟನೆ ಅಧ್ಯಕ್ಷರು, ಹಾಗೂ ಸಮಾಜ ಸೇವಕರಾಗಿ ಎಲೆ ಮರಿಯ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಕನ್ನಡ ಪತ್ರಿಕೆಗಳ ಮಾಧ್ಯಮ ಸಲಹೆಗಾರನಾಗಿ ಕೂಡ ಸೇವೆ ಮಾಡುತ್ತಿದ್ದಾರೆ. ಇಂತಹ ಸಮಾಜ ಸೇವಕರನ್ನು ಇಂದು ನಮ್ಮ BB NEWS ತಂಡ ಗುರುತಿಸಿ ಪ್ರತಿ ವರ್ಷ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ ದೆಹಲಿ ಇವರು ಕೊಡಮಾಡುವ ರಾಜ್ಯಮಟ್ಟದ “ಸಮಾಜ ಸೇವಾ ರತ್ನ ಪ್ರಶಸ್ತಿ ,ಗೆ ಆಯ್ಕೆ ಮಾಡಿದೆ, ಗೋವಾದ ಕಲ್ಲಂಗುಟ್ ಬೀಚ್ ನಲ್ಲಿ ರತ್ನಸಾಗರ ರೆಸ್ಟೋರೆಂಟ್ ಮೂಲಕ ಇಡಿ ರಾಜ್ಯದಲ್ಲಿ ಬೆಸ್ಟ ಹೋಟೆಲ್ ಉಧ್ಯಮಿಯಾಗಿ ಕರ್ನಾಟಕದ ನಂಬರ್ ಒನ್ ಉದ್ಯಮಿ ಎಂದು ಗುರುತಿಸಲಾಗಿದೆ. ಅನೇಕ ಕನ್ನಡ ಜನರಿಗೆ ಸಹಾಯ ಸಹಕಾರ ನೀಡಿ ಬಡ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದವರು.

, ಬಹಳ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿ ಮುರಳಿ ಮೋಹನ್ ಅವರು ಸರಳ ವ್ಯಕ್ತಿತ್ವದ ಮನುಷ್ಯ, ಅತೀ ಕಡಿಮೆ ಸಮಯದಲ್ಲಿ ಎಂತವರನ್ನು ಕೂಡ ತಮ್ಮ ನಯ ವೀನಯದ ಮೂಲಕ ಆತ್ಮೀಯರನ್ನಾಗಿ ಮಾಡುವ ಗುಣ ಹೊಂದಿದವರು, ಸದಾ ಸ್ನೇಹ ಜೀವಿ, ಸಂಘ ಜೀವಿ ಎಷ್ಟೇ ಉಧ್ಯಮದ ಒತ್ತಡ ಇದ್ದರೂ ಬಂದವರ ಜೊತೆಗೆ ಆತ್ಮೀಯ ಮಾತುಗಳನ್ನು ಹೇಳಿ ಊಟ ಉಪಚಾರ, ಮಾಡಿಸಿ ಅತೀಥಿ ಸತ್ಕಾರ ಮಾಡುವ ಗುಣ ದೊಡ್ಟದು, ಇಂತಹ ವ್ಯಕ್ತಿ ನಮ್ಮ ಕನ್ನಡಿಗ ಎಂದು ಹೆಮ್ಮೆಯಿಂದ ಹೇಳಲು ನಾವು ಬಯಸುತ್ತೇವೆ , ಇವರ ಈ ಸಮಾಜ ಸೇವೆ ಹೀಗೆ ಮುಂದುವರಿಯಲಿ ಹೋಟೆಲ್ ಉದ್ಯಮ ರಂಗದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ನಾವು ಕೂಡ ಶುಭ ಹಾರೈಸುತ್ತೇವೆ.ರತ್ನಸಾಗರ ರೆಸಾರ್ಟ್ ಎಲ್ಲಾ ಸಿಬ್ಬಂದಿ ಹಾಗೂ ಮಾಲೀಕರಿಂದ ಮತ್ತೊಮ್ಮೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಅತೀ ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಮಾಡಲಾಗುವುದು.