
ಅಮೀನಗಡ: ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮದ ಭಾರತೀಯ ಜನತಾ ಪಾರ್ಟಿ ಮುಖಂಡರಿಂದ ಇಂದು ಗ್ರಾಮದ ಶ್ರೀ ರಾಮಯ್ಯಸ್ವಾಮಿ ಮಠದಲ್ಲಿ ಸರಳವಾಗಿ ಇಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಆಚರಿಸಲಾಯಿತು, ಈ ಸಂದಭ೯ದಲ್ಲಿ ತಾಲ್ಲೂಕ ಬಿಜೆಪಿಯ ನೇಕಾರ ಪ್ರಕೊಷ್ಠದ ಸಂಚಾಲಕಾರದ ರಾಮಚಂದ್ರ ನೆಮ್ಮದಿ ಹಾಗೂ ಸಹ ಸಂಚಾಲಕರಾದ ರಮೇಶ ಬಾಫ್ರಿ ಅವರನು ಸನ್ಮಾನಿಸಲಾಯಿತು. ಈ ಸಂದಭ೯ದಲ್ಲಿ ತಾಲೂಕು OBC ಘಟಕದ ಅಧ್ಯಕ್ಷರಾದ ಶ್ರೀ ನಾಗೆಶ ಗಂಜಿಹಾಳ ಅವರು ವೇದಿಕೆ ಉದ್ದೇಶಿಸಿ ನೇಕಾರರ ಬದುಕು ಇಂದು ಬಹಳ ಕಷ್ಟದಲ್ಲಿ ಇದೆ,ಗ್ರಾಮದಲ್ಲಿ ಕೈಮಗ್ಗವನ್ನೆ ನಂಬಿ ನೂರಾರು ಜನ ಬದುಕು ಕಟ್ಟಿಕೊಂಡಿದ್ದಾರೆ,

ನಮ್ಮ ಗ್ರಾಮದ ಪ್ರತಿಷ್ಟಿತ ಶ್ರೀ ಶಾಖಾಂಬರಿ ನೇಕಾರರ ಸಹಕಾರಿ ಸಂಘ ಅವರ ಏಳಿಗೆಗಾಗಿ ಕೆಲಸ ಮಾಡುತ್ತಿದೆ,ಯಡಿಯೂರಪ್ಪ ಸರಕಾರ ಇದ್ದಾಗ ಎರಡು ಸಲ ನೇಕಾರರ ಫ್ಯಾಕೇಜ್ ಬಿಡುಗಡೆ ಮಾಡಲಾಯಿತು,ಇನ್ನೂ ಸರಕಾರ ನೇಕಾರರ ಸಲುವಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ, ಅದಕ್ಕಾಗಿ ಗ್ರಾಮದಲ್ಲಿ ಪಕ್ಷದ ಸಂಘಟನೆ ಮುಖ್ಯ ಹಾಗೂ ತಮ್ಮ ಜನಾಂಗದಲ್ಲಿ ಸಮರ್ಥ ಯುವಕರು ಪಕ್ಷದಲ್ಲಿ ಪ್ರಾಮಾಣಿಕ ಸೇವೆ ಮಾಡುತ್ತಿದ್ದಾರೆ ,ತಾವು ಕೂಡ ಈ ಪಕ್ಷದ ಬಲವರ್ಧನೆಗೆ ಕೈ ಜೊಡಿಸಬೇಕು ಮತ್ತು ಎಲ್ಲಾ ನೇಕಾರ ಬಾಂಧವರಿಗೆ ಶುಭಾಶಯಗಳ ಕೋರಿದರು,

ಈ ಸಂಧರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಶ್ರೀ ಹನಮಂತಗೌಡ ಬೆವೂರು ಹಾಗೂ ಗ್ರಾಮದ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳಿಯ ಪಿ,ಕೆ,ಪಿ,ಎಸ್, ನಿರ್ದೆಶಕರಾದ ಶ್ರೀ ಆನಂದ ಮೋಕಾಶಿ ಶ್ರೀ ಕುಡ್ಲೆಪ್ಪ ಹುಲ್ಯಾಳ PKPS ನಿರ್ದೇಶಕರು, ಶ್ರೀ ಮುರಳೀಧರ ಮಾಂಡ್ರೆ ಶ್ರೀ ಭೈಲಪ್ಪ ಭಜಂತ್ರಿ ಶ್ರೀ ಸುನೀಲ ಗಡೆದ ಗ್ರಾಮ ಪಂಚಾಯತಿ ಸದಸ್ಯ ಶ್ರೀ ಗ್ಯಾನಪ್ಪ ಗೋನಾಳ SDMC ಅಧ್ಯಕ್ಷ ಶ್ರೀ ಯಮನೂರ ಹುಲ್ಯಾಳ , ಶ್ರೀ ವಾಯ್,ಬಿ,ಹುಲ್ಯಾಳ, ಮುಂತಾದವರು ಉಪಸ್ಥಿತರಿದ್ದರು.