
ಬಾಗಲಕೋಟೆ: ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಬಂದ ಶ್ರೀ ಪಿ,ಸುನೀಲಕುಮಾರ ಅವರಿಗೆ ಜಿಲ್ಲಾ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀ ಡಿ,ಬಿ,ವಿಜಯಶಂಕರ್ ಅವರು ಸನ್ಮಾನ ಮಾಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಉತ್ತಮ ಆಡಳಿತ ನೀಡಲು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಜಿಲ್ಲಾ ಸಮಿತಿ ಸದಸ್ಯರಾದ ಶ್ರೀ ಸಂಗಪ್ಪ ದುರಗಪ್ಪ ಭಜಂತ್ರಿ ಹಾಗೂ ಜಿಲ್ಲಾ ಪ್ರದಾನ ಕಾರ್ಯದರ್ಶಿ ಶ್ರೀ ಹಾಜಿಮಸ್ತಾನ್ ಬದಾಮಿ, ಜಿಲ್ಲಾ ಸಮಿತಿ ಸದಸ್ಯರಾದ ಶ್ರೀ ಶಂಕರಗೌಡ ಎಚ್ ಶೆಬಣ್ಣನವರ, ಪತ್ರಕರ್ತರಾದ ಶ್ರೀ ರಮೇಶ ಚವ್ಹಾಣ ,ಸಲಿಂ ಜಗನಾಥಪೂರ,ಶ್ರೀ ಆನಂದ ರಾಂಪೂರ ಮತ್ತಿತರರು ಭಾಗವಹಿಸಿದ್ದರು.

