Breaking News

ರಾಜಕಾರಣಿಗಳ ಸಂಬಂಧಿಕರಿಗೆ,60 ವರ್ಷ ಮೇಲ್ಪಟ್ಟವರಿಗೆ ಬಿಜೆಪಿ ಟಿಕೆಟ್ ಇಲ್ಲ!

ಗುಜರಾತ್​ನ ಬಿಜೆಪಿ ಘಟಕ ಸ್ಥಳೀಯ ಹಾಗೂ ನಾಗರಿಕ ಚುನಾವಣೆಯಲ್ಲಿ ಪಕ್ಷದಿಂದ ನೀಡಲಾಗುವ ಟಿಕೆಟ್​ನ್ನ ಪಡೆಯಬೇಕು ಅಂದರೆ ಕೆಲ ಮಾನದಂಡಗಳನ್ನ ವಿಧಿಸಿದೆ.

ಇದರನ್ವಯ 60 ವರ್ಷಕ್ಕಿಂತ ಮೇಲ್ಪಟ್ಟವರು, ಮೂರು ಬಾರಿ ಚುನಾವಣೆಯಲ್ಲಿ ಆಯ್ಕೆಯಾದವರು ಹಾಗೂ ರಾಜಕಾರಣಿಗಳ ಸಂಬಂಧಿಗಳಿಗೆ ಬಿಜೆಪಿ ಟಿಕೆಟ್ ಸಿಗೋದಿಲ್ಲ ಎಂದು ಹೇಳಿದೆ. ಈ ಬಗ್ಗೆ ಸ್ವತಃ ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ಅಧಿಕೃತ ಮಾಹಿತಿ ನೀಡಿದ್ದಾರೆ.

ಮುಂಬರುವ ಮುನ್ಸಿಪಾಲ್ ಕಾರ್ಪೋರೇಷನ್ ಚುನಾವಣೆ ಸಂಬಂಧ ನಡೆಸಲಾದ ಸಭೆಯಲ್ಲಿ ಬಿಜೆಪಿ ಮುಖಂಡರು ಈ ನಿರ್ಧಾರವನ್ನ ಕೈಗೊಂಡಿದ್ದಾರೆ. ಗುಜರಾತ್ ಸಿಎಂ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಿಎಂ ವಿಜಯ್ ರೂಪಾಣಿ ಕೂಡ ಭಾಗಿಯಾಗಿದ್ರು. ತಾಲೂಕು, ಜಿಲ್ಲೆ, ಮುನ್ಸಿಪಾಲಿಟಿ ಹಾಗೂ ಕಾರ್ಪೋರೇಷನ್ ಚುನಾವಣೆಗೆ ಬಿಜೆಪಿ ಒಟ್ಟು 8 ಸಾವಿರ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಿದೆ.

ಸ್ಥಳೀಯ ಚುನಾವಣೆಗೆ ಗುಜರಾತ್ನ ಚುನಾವಣಾ ಆಯೋಗ ಈಗಾಗಲೇ ದಿನಾಂಕ ನಿಗದಿ ಮಾಡಿದೆ. ಮುನ್ಸಿಪಲ್ ಕಾರ್ಪೋರೇಷನ್ಗೆ ಫೆಬ್ರವರಿ 21 ಹಾಗೂ ಮುನ್ಸಿಪಾಲಿಟಿ, ಪಂಚಾಯತ್ಗೆ ಫೆಬ್ರವರಿ 28ರಂದು ಚುನಾವಣೆ ನಡೆಯಲಿದೆ. ಮುನ್ಸಿಪಾಲ್ ಕಾರ್ಪೋರೇಷನ್ ಮತ ಎಣಿಕೆ ಫೆಬ್ರವರಿ 23ರಂದು ಹಾಗೂ ಪಂಚಾಯತ್, ಮುನ್ಸಿಪಾಲಿಟಿ ಮತ ಎಣಿಕೆ ಮಾರ್ಚ್ 2ರಂದು ನಡೆಯಲಿದೆ.

About vijay_shankar

Check Also

ಬದಾಮಿ ನಗರದಲ್ಲಿ  ಬಿ ರಾಜ್ ಶಟ್ಟಿ ಸಾರಥ್ಯದಲ್ಲಿ,,, “ಬಿ ನ್ಯೂಸ್ ಅಲರ್ಟ್ ಡಿಜಿಟಲ್ ಲೈವ್ಹ್ ಚಾನಲ್ ಅನಾವರಣ,,,!!

ಬದಾಮಿ ನಗರದಲ್ಲಿ ಬಿ ರಾಜ್ ಶಟ್ಟಿ ಸಾರಥ್ಯದಲ್ಲಿ,,, “ಬಿ ನ್ಯೂಸ್ ಅಲರ್ಟ್ ಡಿಜಿಟಲ್ ಲೈವ್ಹ್ ಚಾನಲ್ ಅನಾವರಣ,,,!!

ಬದಾಮಿ: ಇಂದು ಬದಾಮಿ ನಗರದ ಅಂಬೇಡ್ಕರ್ ಭವನದಲ್ಲಿ ಬಿ ರಾಜ್ ,,,ಶಟ್ಟಿ ಸಾರಥ್ಯದಲ್ಲಿ ” ಬಿ ನ್ಯೂಸ್ ಅಲಟ್೯ ಡಿಜಿಟಲ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.