
ಹುಬ್ಬಳ್ಳಿ.17: ವ್ಯಕ್ತಿಯೋರ್ವ ಯುವತಿಗೆ ಮದುವೆಯಾಗೋದಾಗಿ ನಂಬಿಸಿ ಯುವತಿಯ ನಗ್ನ ಚಿತ್ರವನ್ನು ವಾಟ್ಸಾಪ್ ಸ್ಟೇಟಸ್ಗೆ ಇಟ್ಟು ವಿಕೃತಿ ಮೆರೆದಿರುವ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಶಿರಡಿ ಮೂಲದ ಶುಭಂ ಮಧುಕರ ಕೂಲೆ ಎಂಬಾತ ಧಾರವಾಡದ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ತನಗಿಂತ 20 ವರ್ಷ ಕಿರಿಯ ಯುವತಿಯೊಂದಿಗೆ ವಾಟ್ಸಾಪ್ ಮೂಲಕ ಸ್ನೇಹ ಬೆಳೆಸಿದ್ದಾನೆ. ಆ ಬಳಿಕ ಸ್ನೇಹ ಪ್ರೀತಿಗೆ ತಿರುಗಿದ್ದು ಮದುವೆಯಾಗೋದಾಗಿ ನಂಬಿಸಿ ನಗ್ನವಾಗಿ ವಿಡಿಯೋ ಕಾಲ್ ಮಾಡಲು ಹೇಳಿದ್ದಾನೆ..
ಈ ವೇಳೆ ಯುವತಿ ವಿಡಿಯೋ ಕಾಲ್ನಲ್ಲಿ ನಗ್ನವಾಗಿದ್ದು ರೆಕಾರ್ಡ್ ಮಾಡಿಕೊಂಡ ಆರೋಪಿ ಅದನ್ನು ಎಡಿಟ್ ಮಾಡಿ ವಾಟ್ಸಾಪ್ ಸ್ಟೇಟಸ್ ಇಟ್ಟು ವಿಕೃತಿ ಮೆರೆದಿದ್ದಾನೆ ಎನ್ನಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಯುವತಿ ನಗರದ ಸೈಬರ್ ಪೊಲೀಸ್ ಸ್ಟೇಶನ್ ಮೆಟ್ಟಿಲು ಹತ್ತಿದ್ದು ಆರೋಪಿಯ ಮೇಲೆ ಕೇಸ್ ದಾಖಲಿಸಿದ್ದಾರೆ.ಈ ಬಗ್ಗೆ ಮೊಬೈಲ್ ನಲ್ಲಿ ಇಂತಹ ಸಾಹಸಕ್ಕೆ ಕೈ ಹಾಕುವ ಹುಡುಗಿಯರು ಬಹಳ ಎಚ್ಚರಿಕೆಯಿಂದ ಇರಬೇಕು,ದಿನದಿಂದ ದಿನಕ್ಕೆ ಇಂತಹ ಸೈಬರ್ ಕ್ರೈಮ್ ಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ಪಾಲಕರು ತಮ್ಮ ಮಕ್ಕಳ ಮೇಲೆ ನಿಗಾ ಇಡಬೇಕು,ಪ್ರತಿ ವಾರಕ್ಕೊಮ್ಮೆ ಅವರ ಮೊಬೈಲ್ ಹಿಸ್ಟರಿ ಚಕ್ ಮಾಡಬೇಕು ಅಥವಾ ಮೊಬೈಲ್ ಗಳನ್ನು ಮಕ್ಕಳಿಗೆ ಯಾವ ಸಮಯದಲ್ಲಿ ಕೊಡಿಸಬೇಕು ಎಂಬುದನ್ನು ಗಮನ ಇರಬೇಕು ಇದರಿಂದ ಮಕ್ಕಳ ಶಿಕ್ಷಣದ ಜೊತೆಗೆ ಅವರ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಇಂತಹ ಪ್ರಕರಣಗಳು ಈಗ ಸರ್ವೆ ಸಾಮಾನ್ಯವಾಗಿ ಕಾಣುತ್ತಿವೆ,ಈ ಬಗ್ಗೆ ಹುಡುಗಿಯರು ಇಂತಹ ಹುಡುಗರಿಂದ ವಿಡಿಯೋ ಕಾಲ್,ಅಥವಾ ಪೊಟ ಹಾಕುವ ಮುನ್ನ ತಮ್ಮ ಭವಿಷ್ಯದ ಬಗ್ಗೆ ಅರಿವಿರಲಿ,ಎಂಬುದು BB News ಕಳಕಳಿ.