ಹುನಗುಂದ: ನಗರದ ಎಸ್ ವ್ಹಿ ಎಮ್ ಸ್ಕೂಲ್ನಲ್ಲಿ ನಿನ್ನೆಯ ದಿನ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಮತ ಪೆಟ್ಟಿಗೆಯನ್ನು ಭದ್ರವಾಗಿ ಸ್ಕೂಲ್ನಲ್ಲಿ ಇರಿಸಲಾಗಿದೆ,ನಗರದ ಪಿ,ಎಸ್,ಐ ಶರಣಬಸಪ್ಪ ಸಂಗಳದ ಹಾಗೂ ಸಿಬ್ಬಂದಿ ಹಗಲು ರಾತ್ರಿ ಮತ ಪೆಟ್ಟಿಗೆಯನ್ನು ಕಾವಲು ಮಾಡುತ್ತಿದ್ದು ಪ್ರತಿ,ಕ್ಷಣ,ನಿಮಿಷ ಅಭ್ಯರ್ಥಿಗಳಲ್ಲಿ ಎದೆ ಢವ,ಢವ ವಡೆಯುತ್ತಿದೆ,ಕಳೆದ ಒಂದು ವಾರದಿಂದ ಅಬ್ಬರ ಪ್ರಚಾರ,ಗುಂಡು,ಪಾರ್ಟಿ,ಮೋಜು,ಮಾಡಿ ಹಣದ ಜೊತೆ ಬಂಗಾರ,ಸೀರೆ,ಬೆಳ್ಳಿ ಉಂಗುರ,ಎಲ್ಲವನ್ನು ಮತದಾರರ ಓಲೈಕೆಗಾಗಿ ಕೊಟ್ರು ಸಹ ಮತದಾರ ಯಾರ ಪರ ತೀರ್ಪು ಬರೆಯಲ್ಲಿದ್ದಾನೆ, ಎಂಬ

ಕುತೂಹಲ ಸಾಮಾನ್ಯವಾಗಿ ಇರುತ್ತದೆ,ಆದರೆ ಇಲ್ಲಿ ಹಣಬಲ,ಅಧಿಕಾರ ಬಲ,ಜನಬಲ ಇರುವವರು ಸಹ ಮಣ್ಣಾದ ಉದಾಹರಣೆ ಸಾಕಷ್ಟಿದೆ, ಮತದಾರನ ತೀರ್ಪು ಅಂತಿಮ ಕಣದಲ್ಲಿ ಯಾರೆ ಜಯಗಳಿಸಲಿ ,ಪ್ರತಿ ಅಭ್ಯರ್ಥಿಗಳು ಇನ್ನೊಬ್ಬರನ್ನು ಹೊಣೆ ಮಾಡದೇ ಆ ಸೋಲಾಗಲಿ,ಜಯವಾಗಲಿ ಅವರೇ ಹೊತ್ತುಕೊಳ್ಳಬೇಕು, ಇದು ರಾಜಕೀಯ ಎರಡೆ ದಿನ ಜಾತ್ರೆ,ಸಂಬಂಧಗಳ ಬೆಲೆ ಇವಾಗ ಯಾರಿಗೂ ಅರ್ಥವಾಗಲ್ಲ ಅದನ ಮರೆತು,ಉದ್ರೇಕ ದಿಂದ ಹಾಳಾಗಬೇಡಿ,ಇದರಿಂದ ಯಾರಿಗೂ ನೆಮ್ಮದಿ ಇಲ್ಲ ,ಇಂತಹ ಸೋಲು,ಗೆಲುವಿನ ಲೆಕ್ಕಾಚಾರದ ಮತ ಪೆಟ್ಟಿಗೆಯನ್ನು ಕಾಯುತ್ತಿರುವುದು ,ಹಾಗೂ ಇದರಲ್ಲಿ ಮಾನ,ಅಪಮಾನ,ಸನ್ಮಾನಗಳ ಬಂಡಾರ ಅಡಗಿದೆ ನಾಳೆ ಒಂದೆ ದಿನ ಬಾಕಿ ನಾಡಿದ್ದು ಎಲ್ಲಾ ಅಭ್ಯರ್ಥಿಗಳ ಫಲಿತಾಂಶ ಹೊರ ಬಿದ್ದಿರುತ್ತದೆ,ಪ್ರತಿ ಅಭ್ಯರ್ಥಿಗಳು ತಮ್ಮ ತಮ್ಮ ಗೆಲುವಿನ ಲೆಕ್ಕಾಚಾರದಲ್ಲಿಯೇ ಇರುತ್ತಾರೆ ಆದರೆ ಅವರ ಹಣೆ ಬರಹ ಆ ದೇವರೆ ಬಲ್ಲ ,ಗೆಲುವಿನ ನಾಗಾಲೋಟ ಬಿರಲಿರುವ ಎಲ್ಲರಿಗೂ ನಮ್ಮ ಕಡೆಯಿಂದ ಹಾರ್ಧಿಕ ಅಭಿನಂದನೆ ,ಸ್ವಲ್ಪ ವಿಷಯಕ್ಕೆ ಇಷ್ಟೊಂದು ಸುದ್ದಿಯ ಅವಶ್ಯಕತೆ ಇತ್ತಾ ಅಂತ ಒಂದು ಪ್ರಶ್ನೆ ,ಇದು

ಮತ ಪೆಟ್ಟಿಗೆಯನ್ನು ಕಾಯುತ್ತಿರುವ ನಮ್ಮ ಪೊಲೀಸ್ ಇಲಾಖೆಯ PSI ಶರಣಬಸಪ್ಪ ಸಂಗಳದ ಸಿಬ್ಬಂದಿಗಳಾದ ರಮೇಶ ಸಮಗಾರ,ಅರುಣ ಚಲವಾದಿ,ಸುರೇಶ ಆಲೂರು,ಸಿದ್ದು,ಬಿರಾದರ,ರಮೇಶ ನಾವಿ,ಸಂಗು ಹಡಪದ,ಬಸು,ಹಿರೇಮಠ, ಅಬೂಬಕರ ಕೋಲೂರ,ಹಾಗೂ ಡಿಎಆರ್ ಸಿಬ್ಬಂದಿಗಳು,ಈ ಮತಪೆಟ್ಟಿಗೆಯನ್ನ ಕಾವಲು ನಾಡುತ್ತಿರುವಾಗ ಅವರ ಎಲ್ಲಾ ಚರ್ಚೆಗಳನ್ನು ಇಲ್ಲಿ ಸುದ್ದಿಯಾಗಿ ಬಿತ್ತರಿಸಿದೆ ಆದರೆ ಒಂದು ಮಾತು ಅವರ ಪ್ರತಿ ಭಾವನೆಗಳು ಇಲ್ಲಿ ಸತ್ಯವಾಗಿದೆ ಅಂತ ನಮ್ಮ ಅಭಿಪ್ರಾಯ,