
ಅಮೀನಗಡ: ಇಂದು ಹುನಗುಂದ ತಾಲೂಕಿನ ಅಮೀನಗಡ ನಗರದ ಪೊಲೀಸ್ ಠಾಣೆಯಲ್ಲಿ ೭೩ ನೇ ಗಣರಾಜೋತ್ಸವವನ್ನು ಆಚರಿಸಲಾಯಿತು, ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಠಾಣಾ ಮುಖ್ಯಾಧಿಕಾರಿ ಶ್ರೀ ಎಮ್ ಜೆ ಕುಲಕರ್ಣಿ ಅವರು ೧೯೫೦ / ಜನೇವರಿ ೨೬ ರಂದು ನಮ್ಮ ಭಾರತದ ಮೊಟ್ಟ ಮೊದಲ ಪ್ರಧಾನಿ ದಿ,ಶ್ರೀ ರಾಜೇಂದ್ರ ಪ್ರಸಾದ ಅವರು ಅಧಿಕಾರ ಸ್ವೀಕರಿಸಿ ಮೊಟ್ಟ ಮೊದಲ ಭಾರಿಗೆ ಈ ದೇಶದ ಸಂವಿಧಾನದ ಮೂಲಕ ಪ್ರಜಾಪ್ರಭುತ್ವ ಆಡಳಿತವನ್ನು ವಹಿಕೊಂಡ ದಿನ.

ಈ ಭಾರತದ ಸಂವಿಧಾನವು ಜಾರಿಗೆ ಬರುವ ಮೂಲಕ ನಮ್ಮ ದೇಶ ಸಾರ್ವಭೌಮ ಗಣರಾಜ್ಯವಾಗಿ ಮಾರ್ಪಪಟ್ಟತ್ತು. ಹಾಗಾಗಿ ತಾವು ನಮ್ಮ ದೇಶದ ಕಾನೂನು ಶಾಂತಿ ಪರಿಪಾಲನೆಯನ್ನು,ಅಚ್ಚುಕಟ್ಟಾಗಿ ನಿರ್ಭಯವಾಗಿ ಎಲ್ಲರೂ ಪಾಲಿಸಬೇಕು. ಈ ಸಮಾಜದ ಸೂಕ್ತ ರಕ್ಷಣೆ ಜಾಗೂ ಶಾಂತಿ ಪಾಲನೆಯಲ್ಲಿ ನಾವು ಮುಖ್ಯ ಪಾತ್ರ ವಹಿಸಿಕೊಂಡು ಉತ್ತಮ ಸೇವೆಯ ಮೂಲಕ ಕರ್ತವ್ಯ ನಿಭಾಹಿಸಬೇಕು ಎಂದರು. ಈ ಸಂದರ್ಭದಲ್ಲಿ ಠಾಣಾ ಅಧಿಕಾರಿ ಸೇರಿದಂತೆ ASI ಶ್ರೀ ವ್ಹಿ,ವಾಯ್,ಪಾಟೀಲ,ಶ್ರೀ ಎಮ್,ಎಲ್,ಭಜಂತ್ರಿ, ಶ್ರೀ ಡಿ,ಜೆ,ಶಿವಪುರ, ಹಾಗೂ ಅಮೀನಗಡ ಠಾಣೆಯ ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗದವರು ಈ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.