
ಅಮೀನಗಡ : ಡಾ; ಪುನೀತ್ ರಾಜ್‍ಕುಮಾರ್ ಅವರು ತಮ್ಮ ಬದುಕಿನ ಉದ್ದಕ್ಕೂ ಎಲೆ ಮರೆಯ ಕಾಯಿಯಂತೆ ಜನ ಸೇವೆ ಮಾಡಿ ಇಂದು ತಮ್ಮ ನಟನೆ ಹಾಗೂ ನಡೆತೆ ಸದ್ಗುಣಗಳಿಂದ ಭಾರತದಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಪವರ್ ಸ್ಟಾರ್ ಪುನೀತ್ ಅವರ 50 ನೇ ವರ್ಷದ ಈ ಹುಟ್ಟು ಹಬ್ಬ ಸಂಭ್ರಮದಲ್ಲಿ ಒಬ್ಬ ನಿಜವಾದ ಕರ್ನಾಟಕ ರತ್ನ ಅಷ್ಟೇ ಅಲ್ಲ ಭಾರತದ ರತ್ನವನ್ನು ನಾವು ಇಂದು ಕಳೆದುಕೊಂಡಿದ್ದೇವೆ.
ಅವರ ಅಪಾರಾವಾದ ಸಾಧನೆಯಲ್ಲಿ ಅವರ ಜೀವಂತಿಕೆಯ ಹೆಜ್ಜೆ ಗುರುತುಗಳನ್ನು ಹುಡುಕುತ್ತಾ ಹೋದರೆ ಅವರ ಸಾಧನೆ ಅಪಾರ ಅವರಂತೆ ನಮ್ಮ ಯುವಕರು ಮುಂದೆ ಸಾಧನೆ ಮಾಡಿ ಅವರ ಅಭಿಮಾನಿ ಭಳಗ ಸಮಾಜದಲ್ಲಿ ಉತ್ತಮ ಕೆಲಸದ ಮೂಲಕ ಮುಂದಿನ ನಮ್ಮ ಪೀಳಿಗೆಗೆ ದಾರಿ ದೀಪವಾಗುವಂತೆ ಅವರ ಸದ್ಗುಣಗಳನ್ನು ಪಾಲಿಸಬೇಕೆಂದರು.
ಇಂದು ನಗರದ ಬಸ್ ನಿಲ್ದಾಣದ ಹೋರಗಡೆ ಅಪ್ಪು ಅಭಿಮಾನಿ ಬಳಗ ಹಾಗೂ ಗ್ರಾಮೀಣ ಜಾನಪದ ಕಲಾವಿದರ ಅಭಿವೃದ್ಧಿ ಸಂಘದಿಂದ ಅಪ್ಪು ಅವರ ಕಟೌಟ್ ಮುಂದೆ ಶಿರೂರಿನ ಚಿತ್ತರಗಿ ಮಹಾಂತ ತಿರ್ಥ ಕ್ಷೇತ್ರದ ಪೂಜ್ಯರಾದ ಶ್ರೀ ಗುರುಮಹಾಂತ ಸ್ವಾಮಿಗಳು ಕೇಕ್ ಕಟ್ ಮಾಡಿ ಅವರ ಸಾಧನೆ ,ಸಮಾಜದ ಕಳಕಳಿ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಜಾತ್ರಾ ಕಮೀಟಿ ಅಧ್ಯಕ್ಷ ಶ್ರೀ ಜಗದೇಶ ಬಿಸಲದಿನ್ನಿ ಮಾತನಾಡಿ ಅಪ್ಪು ಇವರು ಇದ್ದಾಗ ಅವರು ಸಮಾಜಕ್ಕೆ ಮಾಡಿದ ತ್ಯಾಗ, ಸೇವೆ ನಮಗೆ ಕಾಣಲಿಲ್ಲ ಅವರ ಕಾಲವಾದ ನಂತರ ಅವರು ಮಾಡಿದ ಸೇವೆ ಹೋರಬಂತು, ಅವರಂತೆ ಆದರ್ಶಮಯವಾಗಿ ನಾವು ನೀವೆಲ್ಲ ಬದಕೊನ ಎಂದು ಹೇಳಿದರು.
ನಂತರ ಮಾತನಾಡಿದ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಜಾತ್ರಾ ಕಮೀಟಿ ಉಪಾಧ್ಯಕ್ಷರಾದ . ಅಜ್ಮೀರ ಮುಲ್ಲಾ ಅವರು ಮಾತನಾಡಿ ಇದ್ದಾಗ ವ್ಯಕ್ತಿಯ ಬೆಲೆ ಗೊತ್ತಾಗುವುದಿಲ್ಲ ಸತ್ತಾಗ ಒಳ್ಳೆಯದು,ಕೊಟ್ಟದ್ದು ಹೋರಬರುತ್ತದೆ., ಅಪ್ಪು ಅವರು ಸತ್ತಾಗ ಇಡಿ ದೇಶ ಕಂಬನಿ ಮಿಡಿಯಿತು ಹಾಗೂ ಇವರ ಅಕಾಲಿಕ ಮರಣ ರಾಷ್ಟ್ರ ಮಟ್ಟದ ಸುದ್ದಿ ಆಯಿತು,ಇಂತಹ ಮಹಾನ್ ವ್ಯಕ್ತಿಯ ನೆನಪು ಒಂದು ದಿನ ನೆನದು ಬಿಡುವುದು ಬೇಡ, ನಾವು ನೀವು ಎಲ್ಲರೂ ಕೂಡಿ ಒಂದು ಉತ್ತಮ ಸಂಘಟನೆ ಮಾಡಿ ಅವರು ಬಿಟ್ಟು ಹೋದ ಸಾಮಾಜಿಕ ಒಳ್ಳೆಯ ಎಲ್ಲಾ ಕೆಲಸಗಳನ್ನು ಈ ಸಂಘಟನೆ ಮೂಲಕ ಅವರ ಅಭಿಮಾನಿ ಬಳಗದಿಂದ ಮುಂದುವರೆಯಲಿ,ಇದಕ್ಕೆ ನಮ್ಮ ಸಹಕಾರ ಕೂಡ ನಿಮಗೆ ಸದಾ ಇರುತ್ತದೆ, ಎಂದರು.
ಅಪ್ಪು ಜನ್ಮದ ಸಂತೋಷದ ಕ್ಷಣಕ್ಕೆ ಸಾಕ್ಷಿಯಾಗಿ ಜಗದೇಶ ಬಿಸಲದಿನ್ನಿ ಅವರು ಅವರ ಚಲನಚಿತ್ರ ಗೀತೆ ಹಾಡಿ ರಂಜಿಸಿದರು.
ನಗರದ ಪಿಕೆಪಿಎಸ್ ಅಧ್ಯಕ್ಷ ಸಿದ್ದು ಭದ್ರಶಟ್ಟಿ ಉದ್ದೆಮಿ ಪಾಯಾಜ್ ಮಸಳಿ, ಹಾಗೂ ಹೋಟೆಲ್ ಉದ್ದಿಮಿ ಅಶೋಕ ಶಿರಿಯಾನ್, ಅಪ್ಪು ಅಭಿಮಾನಿ ಬಳಗದ ಅಧ್ಯಕ್ಷ ಶಿವಾನಂದ ರಾಠೋಡ, ಉಪಾಧ್ಯಕ್ಷ ನಾಗರಾಜ್ ಲಮಾಣಿ, ಹಾಗೂ ಉದ್ದಿಮಿ ಡಾ; ಪ್ರಶಾಂತ್ ನಾಯಕ್, ಹೋಮ್ಸಿಂಗ್ ನಾಯಕ್, ರವಿ ಅನವಾಲ್, ಡಿ,ಬಿ,ವಿಜಯಶಂಕರ್, ಸಮಾಜ ಸೇವಕಿ ಶ್ರೀಮತಿ ರೇಣುಕಾಬಾಯಿ ರಾಠೋಡ, ಬಸ್ ನಿಲ್ದಾಣದ ಹೋರಗಡೆ ನಡೆದ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು.
ನಂತರ ಇಲ್ಲಿಂದ ಕೆರೆ ಪಕ್ಕದಲ್ಲಿರುವ ಬಯಲು ಉದ್ಯಾನದಲ್ಲಿ ಕಾರ್ಯಕ್ರಮದ ಆಯೋಜನೆ ಮಾಡಲಾಗಿತ್ತು. ಕೇಕ್ ಕಟ್ ಮಾಡುವ ಮೂಲಕ ಜಗೇಶ ಬಿಸಲದಿನ್ನಿ ಉದ್ಘಾಟನೆ ಮಾಡಿದರು. ಪಟ್ಟಣ ಪಂ, ಅಧ್ಯಕ್ಷ ಶ್ರೀಮತಿ ಬೇಬಿ ಚವ್ಹಾಣ, ಕೇಕ್ ಮಕ್ಕಳಿಗೆ ತಿನಿಸಿ ಕಾರ್ಯಕ್ರಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷ ಶ್ರೀಮತಿ ಉಮಾ ಹಣಗಿ, ಪ,ಪಂ,ಸದಸ್ಯರಾದ ತುಕಾರಾಮ್ ಪವ್ಹಾರ್, ಬಾಬು ಛಬ್ಬಿ, ಸಂಜಯ್ ಐಹೊಳೆ, ಹಾಗೂ ಉಧ್ಯಮಿ ಸಂಗಮೇಶ ಮೊಕಾಶಿ ಸೇರಿದಂತೆ ಅಪ್ಪು ಅಭಿಮಾನಿ ಬಳಗದ ಸರ್ವಸದಸ್ಯರು ಸಂಭ್ರಮದಿಂದ ಹುಟ್ಟು ಹಬ್ಬ ಆಚರಿಸಿ ನಗರದಲ್ಲಿ ಒಂದು ಅಪ್ಪು ಉದ್ಯಾನವಣ ದತ್ತು ಪಡೆದು ಅಭಿವೃದ್ಧಿ ಮಾಡಿ ಅಲ್ಲಿ ನಂತರ ಪುನೀತ್ ರಾಜ್‍ಕುಮಾರ್ ಅವರ ಪುತ್ಥಳಿ ಪ್ರತಿಷ್ಠಾನ ಮಾಡುವುದಾಗಿ ಪಟ್ಟಣ ಪಂಚಾಯತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಮನವಿ ಮಾಡಿದರು .


ವರದಿ: ಶ್ರೀಮತಿ ಸುಮಾ ವ್ಹಿ,ಕೆ