

ಅಮೀನಗಡ : ನಗರದ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಇಂದ ದಿ. ನಟ ಪುನಿತರಾಜಕುಮಾರ ಅವರ ೫೧ ನೇ ಹುಟ್ಟು ಹಬ್ಬವನ್ನು ರಾಜವಂಶ ಅಪ್ಪು ಅಭಿಮಾನಿ ಬಳಗದ ಹಂಗಾಮಿ ಅಧ್ಯಕ್ಷ ಶ್ರೀ ನಾಗರಾಜ್ ಲಮಾಣಿ ಹಾಗೂ ಉಪಾಧ್ಯಕ್ಷ ಶ್ರೀ ಶಿವಾನಂದ ರಾಠೋಡ ಹಾಗೂ ಸರ್ವ ಸದಸ್ಯರು ಸೇರಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಾಗಿ ಅವರ ಜನ್ಮದಿನೋತ್ಸವನ್ನು ಸಂಭ್ರಮದಿಂದ ಆಚರಿಸಿದರು.
ಮೂಲಕ ಅವರ ಸವಿ ನೆನಪಿಗಾಗಿ ಬೆಳಗ್ಗೆ ಅಮೀನಗಡ ಬಸ್ ನಿಲ್ದಾಣದಲ್ಲಿರುವ ಇಂದಿರಾ ಕ್ಯಾಂಟಿನ್ ನಲ್ಲಿ ಅಧಿಕೃತ ೨೦೦ ಉಪಹಾರ ಕೊಪನ್ ಪಡೆದು ನಿಲ್ದಾಣದಲ್ಲಿರುವ ಶಾಲಾ ಕಾಲೇಜು ವಿಧ್ಯಾರ್ಥಿಗಳಿಗೆ ಹಾಗೂ ಬಡವರಿಗೆ ಉಚಿತ ಉಪಹಾರ ವ್ಯವಸ್ಥೆ ಮಾಡಿ ಅಪ್ಪು ಅವರನ್ನು ಸ್ಮರಿಸುವ ಮೂಲಕ ಅಪ್ಪು ಚಿರಾಯು ಎಂದು ಘೋಷಣೆ ಕೂಗಿದರು.
ನಂತರ ೧೨ ಗಂಟೆಗೆ ನಿಲ್ದಾಣದ ಹೊರಗಡೆ ಅಪ್ಪು ಅವರ ಭಾವ ಚಿತ್ರದ ಕಟ್ಟೌಟ್ ಗೆ ಪುಷ್ಪಾರ್ಚಣೆ ಅರ್ಪಿಸಿ ಕೆಕ್ ಕಟ್ಟ್ ಮಾಡಿ ಅಪ್ಪು ಅವರನ್ನು ಉದ್ದೇಶಿಸಿ ಮಾತನಾಡಿದ ಜಗದೇಶ ಬಿಸಲದಿನ್ನಿ ಅವರು ಒಂದು ಕರೆಯನ್ಬು ಕೊಟ್ಟರು. ನಗರದಲ್ಲಿ ಬಂಜಾರ ಸಮಾಜದ ಯುವಕರು ಪ್ರತಿ ವರ್ಷ ಅಪ್ಪು ಅವರ ಜನ್ಮ ದಿನವನ್ನು ಆಚರಿಸುತ್ತಾ ಬಂದಿದ್ದಾರೆ. ಇದು ಒಬ್ಬ ನಟನಿಗೆ ಸಲ್ಲಿಸುವ ನಿಜವಾದ ಗೌರವ ಇದಾಗಿದೆ.

ಆ ಗೌರವಕ್ಕೆ ಅಪ್ಪು ಅವರು ಅಪ್ಟೆ ಈ ನಾಡಿನ ಪತ್ರಿ ಕನ್ನಡಿಗರ ಮನಸ್ಸನ್ನು ಗೆದ್ದು ತೆರೆಯ ಹಿಂದೆ ಅಷ್ಟು ಉತ್ತಮವಾದ ಕೆಲಸ ಅಪ್ಪು ಅವರು ಮಾಡಿದ್ದಾರೆ. ಸುಮಾರು ೩೦ ಅನಾಥ ಆಶ್ರಮ ,೨ ಗೋವುಗಳ ಶಾಲೆ ಅನೇಕ ಮಕ್ಕಳಿಗೆ, ಶೈಕ್ಷಣಿಕವಾಗಿ, ಸಹ ಕಲಾವಿಧರ ಪಾಲಿನ ದೇವರಾಗಿ ಜನಮಾನಸದಲ್ಲಿ ಉಳಿದ ಕನ್ನಡದ ಎಖೈಕ ನಟ ಅದು ಅಪ್ಪು ಸರ್ ಎಂದರೆ ತಪ್ಪಾಗಲಾರದು.

ಅವರಂತೆ ಅವರ ಆದರ್ಶಗಳನ್ನು ನಾವು ನೀವೆಲ್ಲರೂ ಪಾಲಿಸಿಕೊಂಡು ಈ ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಮಾಡಿ ಅವರ ಆದರ್ಶಗಳನ್ನು ಮುಂಬರುವ ಯುವ ಪೀಳಿಗೆಗೆ ತಲುಪಿಸುವ ಕೆಲಸ ಮಾಡಿ ಸದಾ ನಾನು ಕೂಡ ನಿಮ್ಮೊಂದಿಗೆ ಕೈ ಜೊಡಿಸುತಗತೇನೆಂದು ಅಪ್ಪು ಅವರನ್ನು ಉದ್ದೇಶಿಸಿ ಮಾತನಾಡಿದರು.
ನಂತರ ಮಾತನಾಡಿದ ಪಟ್ಟಣ ಪಂಚಾಯತ ಸದಸ್ಯೆ ತುಕಾರಾಮ ಪವಾರ್ ಮಾತನಾಡಿ ನಾನು ಈ ಅಪ್ಪು ಅವರ ಜನ್ಮ ದಿನೋತ್ಸವದಲ್ಲಿ ಕಳೆದ ೩ ವರ್ಷಗಳಿಂದ ಭಾಗವಹಿಸುತ್ತಾ ಬಂದಿದ್ದೇನೆ. ಇನ್ಮುಂದೆ ರಸ್ತೆ ಮೇಲೆ ಉತ್ಸವ ಮಾಡೊದು ಬೇಡ ಅದಕ್ಕಾಗಿ ಕೆರೆಯ ಪಕ್ಕದಲ್ಲಿ ಜಾಗ ಕೊಡುತ್ತೇವೆ. ಅಲ್ಲಿಯೇ ಮುಂದಿನ ವರ್ಷ ಮಾಡಿ ಎಂಸು ಭರವಸೆ ನೀಡಿದರು.
ಆದರೆ ಅಲ್ಲಿದ್ದ ಕೆಲವು ಅಭಿಮಾನಿಗಳು ಕಳೆದ ಮೂರು ವರ್ಷಗಳಿಂದ ಇದೆ ಡೈಲಾಗ್ ಭರಸೆ ನೀಡುತ್ತಿದ್ದಾರೆ. ಇದು ಮತ್ತೆ ನೆನಪಾಗೊದು ಮುಂದಿನ ವರ್ಷ ಇಂತಹ ಭರವಸೆಯ ನಾಯಕರು ಬರಿ ಭಾಷಣಕ್ಕೆ ಅಷ್ಟೆ ಸಿಮಿತ ಎಂದು ಮೌನವಾದರು.

ಆದರೆ ಈ ವಾರ್ಡಿನ ದಲಿತ ಮುಖಂಡರಾದ ಪವಾರ್ ಅವರು ಈ ಅಭಿಮಾನಿ ಬಳಗದ ಎಲ್ಲ ಯುವಕರನ್ನು ಕರೆಯಿಸಿ ಚರ್ಚಿಸಿ ಎಷ್ಟರ ಮಟ್ಟಿಗೆ ಜಾಗವನ್ನು ನೋಡುತ್ತಾರೆ ಎಂದು ಕಾದು ನೋಡೋಣ,

ಈ ಸಂದರ್ಭದಲ್ಲಿ ಶ್ರೀಮತಿ ರೇಣುಕಾ ರಾಠೋಡ, ನಾಗರಾಜ್ ಲಮಾಣಿ, ಶಶಿಧರ ದಲಮಂಜನ್ , ಅನೇಕರು ಅಪ್ಪು ಅವರನ್ನು ಸ್ಮರಿಸಿಕೊಂಡರು, ನಂತರ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಸಾರ್ವನಿಕರಿಗೆ ಅಣ್ಣದಾನ ಪ್ರಸಾದ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಅಪ್ಪು ಅಭಿಮಾನಿ ಬಳಗದ

ನಾಗರಾಜ್, ಸಂತೋಷ, ವೆಂಕಟೇಶ್,ಶಿವಾನಂದ, ರಾಹುಲ್, ಪ್ರವೀಣ್, ಸುದೀಪ್, ಪ್ರೀಯ, ಪೂಜಾ, ಲಕ್ಷ್ಮಿ, ನಿರ್ಮಲ, ಸುಶೀಲ,ಸಮಂಜುನಾಥ ಶೋಭಾ, ಮಂಜುನಾಥ ಅನೇಕರು ಪಾಲ್ಗೊಂಡಿಧದರು.
https://www.youtube.com/live/I4W4jIteZNs?si=vc7MR2FHr0LV64n6
ವರದಿ : ಕಿರಣರಾಜ್ ಎಂ ಕಾಳಗಿ
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News