
ಅಮೀನಗಡ : ಕಳೆದ ೨ ವರ್ಷಗಳಿಂದ ಶಾಲೆಗಳು ಸರಿಯಾಗಿ ಪ್ರಾರಂಭ ಆಗದೇ ಬಂದ್ ಆಗಿ ಶಾಲೆಗಳು ಬಿಕೊ ಅನ್ನುತ್ತಿದ್ದವು ,ಇಂದು ಶಾಲೆ ಪ್ರಾರಂಭವಾದ ಕಾರಣ ಶಿಕ್ಷಕರು ಹಾಗೂ ವಿಧ್ಯಾರ್ಥಿಗಳ ಮೊಗದಲ್ಲಿ ಮಂದಹಾಸದ ನಗು ,ಉತ್ಸಾಹ ವಿಧ್ಯಾರ್ಥಿಗಳ ಖಾಳಜಿ ಎಲ್ಲಡೆಯು ರಾರಾಜಿಸುತ್ತಿತ್ತು,ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಪ್ರತಿಷ್ಠಿತ ಶ್ರೀ ರಾಮಯ್ಯಸ್ವಾಮಿ ವಿಧ್ಯಾ ಸಂಸ್ಥೆಯು ತಳಿರು ತೋರಣಗಳಿಂದ ಅಲಂಕಾರಗೊಂಡು ಹಬ್ಬದ ವಾತಾರಣ ಸೃಷ್ಟಿಯಾಗಿತ್ತು ನೂರಾರು ವಿಧ್ಯಾರ್ಥಿಗಳು ತುಂಬಾ ಉತ್ಸಾಹಕರಾಗಿ ಬಂದು ಕರೋನಾ ಪರೀಕ್ಷೆಯನ್ನು ಸಾಲಾಗಿ ನಿಂತು ತಪಾಸನೆ ಮಾಡಿಸಿಕೊಂಡರು.

ಬಳಿಕ ಪ್ರಥಮ ಬಾರಿಗೆ ಎಲ್ಲಾ ವಿಧ್ಯಾರ್ಥಿಗಳನ್ನು ಅದ್ದೂರಿಯಾಗಿ ಸ್ವಾಗತಿಸಿದ ಶಾಲಾ ಶಿಕ್ಷಕರು ಸರಸ್ವತಿ ದೇವಿ ಪೂಜೆ ಹಾಗೂ ಶ್ರೀ ರಾಮಯ್ಯಸ್ವಾಮಿ ಪೊಟ ಪೂಜಿಸಿ ಶಾಲಾ ಪ್ರಾರಂಭೋತ್ಸವಕ್ಕೆ ಸಂಸ್ಥೆಯ ಸಂಸ್ಥಾಪಕ/ ಗೌರವ ಅಧ್ಯಕ್ಷ ಆರ್,ಪಿ,ಕಲಬುರ್ಗಿ ಅವರು ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿಯೊಬ್ಬರು ಶಾಲಾ ಆವರಣದಲ್ಲಿ ತಾವು ಇನ್ನೂ ಸ್ವಲ್ಪ ದಿನ ಅಂತರ ಕಾಯ್ದುಕೊಂಡು ಆಟ,ಪಾಠವನ್ನು ಮಾಡಬೇಕು ಶಾಲೆಗೆ ಬರುವಾಗ ಸೆನೇಟರ್ ಹಾಗೂ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಂಡು ಬರಬೇಕು,ಪ್ರತಿ ದಿನ ತಾವು ಶಾಲೆಯಲ್ಲಿ ಕರೋನ ತಪಾಸನೆಯನದನು ಮಾಡಿಸಿಕೊಂಡು ತಮ್ಮ ಕೈಗಳನ್ನು ಸ್ವಚ್ಚವಾಗಿ ತೊಳೆದುಕೊಂಡು,ಶಾಲೆಯಲ್ಲಿ ಅಂತರ ಕಾಯ್ದುಕೊಂಡು ಊಟ ಮಾಡಬೇಕು.ನಿಮ್ಮ ಉತ್ತಮ ಆರೋಗ್ಯದ ಜೊತೆಗೆ ಉತ್ತಮ ಶಿಕ್ಷಣ ಪಡೆಯಬೇಕು,

ನಮ್ಮ ಶಾಲೆಗೆ ಹಾಗೂ ಸಂಸ್ಥೆಗೆ ,ಗ್ರಾಮಕ್ಕೆ ಉತ್ತಮ ಹೆಸರು ತರಬೇಕು ,ತಾವೆಲ್ಲರೂ ಶಿಸ್ತಿನ ಸಿಪಾಯಿಗಳಾಗಿ ಸಹೋದರ – ಸಹೋದರಿಯರಂತೆ ಬಾಂಧವ್ಯದಿಂದ ಇರಬೇಕು ಎಂದರು,ನಂತರ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕೃಷ್ಣಾ ರಾಮದುರ್ಗ ಅವರು ತಾವು ಉತ್ತಮ ಶಿಕ್ಷಣ ಪಡೆಯುವ ಜೊತೆಗೆ ಉತ್ತಮ ಹಾಗೂ ಸಧೃಡ ಆರೋಗ್ಯವನ್ನು ಬೆಳೆಸಿಕೊಳ್ಳಬೇಕು,ಈ ಸಂಸ್ಥೆಯ ವಿಧ್ಯಾರ್ಥಿಗಳು ಎಂದರೆ ಒಂದು ಉತ್ತಮ ಸಂಸ್ಕಾರ,ಇದೆ ,ಬುದ್ದಿವಂತಿಕೆ ಇದೆ,ಈ ಸಂಸ್ಥೆಯ ಗೌರವವನ್ನು ತಾವೆಲ್ಲರೂ ಎತ್ತಿ ಹಿಡಿದು ಉತ್ತಮ ಶಿಕ್ಷಣವನ್ನು ತಾವು ಪಡೆದು ಈ ಸಂಸ್ಥೆಗೆ ಕೀರ್ತಿ ತರಬೇಕು ಗುರುಗಳನ್ನು ಪೂಜ್ಯ ಹಾಗೂ ದೇವರ ಸಮಾನವಾಗಿ ಕಾಣಬೇಕು,ಇಲ್ಲಿ ಎಲ್ಲರೂ ಉನ್ನತ ಮಟ್ಟಕ್ಕೆ ಬೆಳೆದು ನಿಲ್ಲವಂತ ಶಕ್ತಿ ಇದೆ,ಅದನ ಎಲ್ಲರೂ ಶ್ರೆದ್ದೆಯಿಂದ ಕಲಿಯಬೇಕು,

ಹಾಗೂ ತಮಗೆ ಏನಾದರೂ ಜ್ವರ,ನೆಗಡಿ,ಕೆಮ್ಮು ಕಂಡುಬಂದರೆ ತಕ್ಷಣ ವೈಧ್ಯರನ್ನು ಸಂಪರ್ಕ ಮಾಡಿ ಚಿಕಿತ್ಸೆ ಪಡೆಯಬೇಕು,ತಮ್ಮ ಉತ್ತಮ ಆರೋಗ್ಯದ ಕಡೆ ತುಂಬಾ ಎಚ್ಚರಿಕೆ ವಹಿಸಬೇಕು ಎಂದರು. ಈ ಶಾಲಾ ಪ್ರಾರಂಭೋತ್ಸವ ಸರಳ ಸಮಾರಂಭದಲ್ಲಿ ಆರ್,ಪಿ,ಕಲಬುರ್ಗಿ ಕೆ,ಎಸ,ರಾಮದುರ್ಗ,ಶ್ರೀ ಆರ್,ಜೆ,ರಾಮದುರ್ಗ ಶ್ರೀವಎಮ್,ಎಮ್,ಕಮ್ಮಾರ,ಶ್ರೀ ಎಸ್,ಆರ್,ಜನಿವಾರದ, ಶ್ರೀ ಎನ,ಎಸ್,,ಅಂಗಡಿ,ಶ್ರೀ ಎ,ಸಿ,ಅತ್ತಾರ ,ಶ್ರೀ ಜಿ,ಕೆ ಧೂಪದ,ಶ್ರೀಮತಿ ಬಿ,ವ್ಹಿ,ಲ್ಯಾವಿ,ಶ್ರೀ ಎಸ್,ಎಸ್,ಗೌಡರ,ಶ್ರೀ ಎಮ್ ,ಆರ್ ನರಿ,ಶ್ರೀ ಡಿ,ಬಿ,ಶಿನ್ನೂರು ಶ್ರೀ ಪಿ,ಎಚ್,ಕತ್ತಿ,ಶ್ರೀ ಎಮ್,ಜಿ,ಇಟಿ,ಶ್ರೀ ಜಿ,ಡಿ,ಮಾದರ,ಶ್ರೀ ಎಮ್,ಬಿ,ಕಮ್ಮಾರ ಶ್ರೀ ಟಿ,ಬಿ,ಭಜಂತ್ರಿ, ಶ್ರೀ ಕುಮಾರಿ ಎಸ್,ಪಿ,ತುಂಬಗಿ, ಹಾಗೂ ಶ್ರೀ ಜಿ,ಕೆ ಧೂಪದ ವಂದನಾರ್ಪಣೆ ಮಾಡಿದರು.