
ಬಾಗಲಕೋಟೆ : ಕಳೆದ ೧೫ ವರ್ಷಗಳಿಂದ ಹುನಗುಂದ ತಾಲೂಕಿನ ಕರವೆ ಅಧ್ಯಕ್ಷರಾಗಿ ತಾಲೂಕಿನಾಧ್ಯಾಂತ ಉತ್ತಮ ಸಂಘಟನೆ ಮಾಡಿ ಹತ್ತು ಹಲವಾರು ಹೋರಾಟಗಳನ್ನು ಮಾಡುತ್ತ ಸಾರ್ವಜನಿಕ ರಂಗದಲ್ಲಿ ಉತ್ತಮ ಕೆಲಸ ಮಾಡಿದ ರಮ್ಮಜಾನ್ ನದಾಫ್ ಅವರು ಇಂದು ಬಾಗಲಕೋಟೆಯ ಕರವೆ ನೂತನ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಂಘಟನೆ ಚತುರ,ಚಾಣಕ್ಯ ವಾಗ್ಮಿ ರಮ್ಮಜಾನ್ ಅವರು ವೃತ್ತಿಯಲ್ಲಿ ಹುನಗುಂದ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿ ಸೇವೆ ಮಾಡುತ್ತಿದ್ದಾರೆ. ಯಾವತ್ತಿಗೂ ನೊಂದವರ ಧ್ವನಿಯಾಗಿ ಬಡವರ ,ಅಸಹಾಯಕರ ಅನ್ಯಾಯದ ವಿರುದ್ದ ಹೋರಾಟ ಮಾಡುತ್ತಾ ಸನಾಜ ಸೇವೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡವರು.

ಇವರ ಸಂಘಟನೆ ಚಾತುರ್ಯವನ್ನು ನೋಡಿ ರಾಜ್ಯಾಧ್ಯಕ್ಷರಾದ ಶ್ರೀ ನಾರಾಯಣಗೌಡ್ರು ನೂತನ ಬಾಗಲಕೋಟೆ ಕರವೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ನೀಡಿದ್ದಾರೆ. ಇಂದು ಹಣಬಲ,ಜನಬಲ,ಜಾತಿಬಲ,ಅಧಿಕಾರ ಬಲದಿಂದ ಜನ ಸಾಮಾನ್ಯರು ನಿತ್ಯ ಅನ್ಯಾವನ್ನು ಎದುರಿಸುತ್ತಿದ್ದಾರೆ. ಇಂತಹ ಸಂಘಟೆಗಳ ಮೂಲಕ ಜನರ ಆಶಾ ಕಿರಣವಾಗಿ ರಮ್ಮಜಾನ್ ಅವರು ನಿಲ್ಲಲಿ ಎಂದು ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಡಿ,ಬಿ,ವಿಜಯಶಂಕರ್ ಹಾಗೂ ಹುನಗುಂದ ತಾಲೂಕಿನ ವಕೀಲರ ಸಂಘದ ಅಧ್ಯಕ್ಷ ಶ್ರೀ ಮಾಧವ ದೇಶಪಾಂಡೆ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News