ನವದೆಹಲಿ: ಕ್ರೀಡಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಕ್ರಿಕೆಟಿಗ ರೋಹಿತ್ ಶರ್ಮಾರಿಗೆ ಖೇಲ್ ರತ್ನ ನೀಡಿ ಗೌರವಿಸುವಂತೆ ಶಿಫಾರಸು ಮಾಡಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಗೌರವ ಇದಾಗಿದೆ.
ಟೀಂ ಇಂಡಿಯಾದ ಉಪನಾಯಕರಾಗಿರುವ ಶರ್ಮಾ ಸೇರಿ ನಾಲ್ವರು ಕ್ರೀಡಾಪಟುಗಳಿಗೆ ಖೇಲ್ ರತ್ನ ನೀಡುವಂತೆ ಶಿಫಾರಸು ಮಾಡಲಾಗಿದೆ. ಏಷ್ಯನ್ ಗೇಮ್ ಗೋಲ್ಡ್ ಮೆಡಲಿಸ್ಟ್ ವಿನೇಶ್ ಪೊಗಾಟ್, ಟೇಬಲ್ ಟೆನಿಸ್ ಚಾಂಪಿಯನ್ ಮನಿಕಾ ಬಾತ್ರಾ, ಪ್ಯಾರಾಒಲಂಪಿಕ್ ವಿಜೇತ ಮರಿಪ್ಪನ್ ಥಂಗವೇಲು ಅವರಿಗೆ ಖೇಲ್ ರತ್ನ ಗೌರವ ನೀಡುವಂತೆ ಶಿಫಾರಸು ಮಾಡಲಾಗಿದೆ.
ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಇವರನ್ನ ಆಯ್ಕೆ ಮಾಡಿ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶಿಫಾರಸಿಗೆ ಅಂಗೀಕಾರ ಮಾಡಲಿದ್ದಾರೆ. ಇನ್ನು ಕ್ರಿಕೆಟ್ ಕ್ಷೇತ್ರದಲ್ಲಿ ಮೊದಲ ಬಾರಿಗೆ ಖೇಲ್ ರತ್ನ ಪ್ರಶಸ್ತಿಯು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ಗೆ ಒಲಿದಿತ್ತು. ಅದಾದ ನಂತರ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಕ್ರೀಡಾ ಕ್ಷೇತ್ರದ ಈ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ.