
ಬಾಗಲಕೋಟ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಬಾಗಲಕೋಟ ನಗರ
ಯೋಜನಾ ಪ್ರಾಧಿಕಾರದ ಮಾಜಿ ಸಭಾಪತಿ ಎ. ಎ.ದಂಡಿಯಾ ಇವರನ್ನು ನೇಮಕಮಾಡಬೇಕೆಂದು ನಗರದ ಯುವಕರ ನಿಯೋಕ ಇಂದು ಶಾಸಕ ಶ್ರೀಎಚ್.ವೈ.ಮೇಟಿ ಇವರಿಗೆ ಅವರ ತಿಮ್ಮಾಪೂರ ನಿವಾಸದಲ್ಲಿ ಭೇಟಿ ಮಾಡಿ ಮನವಿ ನೀಡಲಾಯಿತು . ತಿಮ್ಮಾಪುರ ಗ್ರಾಮದ ಶ್ರೀ ಮೇಟಿ ಅವರ ನಿವಾಸದಲ್ಲಿ ನೂರಾರು ಯುವಕರು ಭೇಟಿ ಮಾಡಿ ದಂಡಿಯಾ ಇವರು ಬಾಗಲಕೋಟ ನಗರ ಸಭೆಗೆ ಸತತವಾಗಿ ನಾಲ್ಕು ಬಾರಿ ಆಯ್ಕೆಗೊಂಡಿದ್ದಾರೆ. ಬಾಗಲಕೋಟ ನಗರ ಯೋಜನಾ ಪ್ರಾಧಿಕಾರದ ಸಭಾಪತಿಯಾಗಿ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರಾಗಿ, ಜಿಲ್ಲಾ ಸೈನಿಕ ಮಂಡಳಿಯ ಸದಸ್ಯರಾಗಿ, ಸುಮಾರು 45 ವರ್ಷಗಳಿಂದ ನಗರದ ಶಾಂತತಾ ಸಮಿತಿ ಸದಸ್ಯರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಅನುಭವಿ, ಸರಳ ವ್ಯಕ್ತಿತ್ವ ಹೊಂದಿರುವ ಇವರು ಎಲ್ಲ ಸಮಾಜದ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ. ಇವರ ನೇಮಕದಿಂದ ಪ್ರಾಧಿಕಾರದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ, ಅನಾವಶ್ಯ ಸಂತ್ರಸ್ತರಿಗೆ ಆಗುವ ಕಿರುಕುಳ ತೊಂದರೆಗೆ ನಿವಾರಣೆ ಮಾಡಿದಂತಾಗುವುದೆಂದು ಮನವರಿಕೆ ಮಾಡಿಕೊಟ್ಟರು.
ಶಾಂತಚಿತ್ತರಾಗಿ ಹಿರಿಯರ ಹಾಗೂ ಯುವಕರ ಹೇಳಿಕೆಯನ್ನು ಆಲಿಸಿದ ಶ್ರೀ ಮೇಟಿಯವರು ಈ ಕುರಿತು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಟ್ಟು ದಂಡಿಯಾ ನೇಮಕಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ವೇಳೆ ಹಿರಿಯರಾದ ಸರ್ವಶ್ರೀ ಜಿ.ಎಂ.ಟಂಕಸಾಲಿ, ನದಿಮ ಸಾಬ್ ಕಮಾನಗಾರ, ನಗರಸಭೆ ಸದಸ್ಯರಾದ ಖ್ವಾಜಾಸಾಬ್ ಹೊನ್ಯಾಳ, ಯುವ ಮುಖಂಡರಾದ ಬಾಬು, ಕಂಟ್ರಾಕ್ಟರ್ ಇಲಿಯಾಸ್ ಮನಿಯಾರ, ಇಲಿಯಾಸ್ ಜಮಖಂಡಿ, ಇರ್ಫಾನ್ ಕಲಾದಗಿ, ದಾವೂದ್ ಗೋವೆ, ಇಲಿಯಾಸ್ ಮದರಾಖಂಡಿ, ಮಹಬೂಬ ಮೋಮಿನ, ಶಾಬಾಜ್ ಖಾಜಿ, ದಾದಾಪಿರ ಜಂಡೆ, ತೌಹೀದ್ ಮಣಿಯಾರ, ಆಲಿಂ ಬಾಗೇವಾಡಿ, ಮುನ್ನಾ ಬಾಗವಾನ, ರಫೀಕ್ ಹನಮಸಾಗರ, ಆರಿಫ್ ಕಲಾದಗಿ, ಮುಷ್ತಾಕ್ ಗೋವೆ, ಅಬ್ದುಲ್ ಇನಾಮದಾರ, ಮೋಹಸಿನ ಪಠಾಣ, ಬಾಬು ಸಣ್ಣಕ್ಕಿ, ಶಾಹೀದ ಮಹಬೂಬ ಕಲೈಗಾರ, ನದೀಮ ಪಠಾಣ, ರಫೀಕ್ ಕೆರೂರ, ಫಯಾಜ್ ಜಮಾದಾರ, ಅಶ್ರಫ್ ಖಾಜಿ, ರಾಜು ಪಿಂಜಾರ, ಅಜಿಮ್ ಆದೋನಿ, ಮೆಹೆಬೂಬ ಮೋಮಿನ, ಮೆಹೆಬೂಬ ಹಡಗಲಿ, ನಯೀಮ್ ನಾಲಬಂದ, ನೂರಅಹ್ಮದ ಸೌದಾಗರ, ಹುಸೇನ್ ಖಾಜಿ, ಹಾಗೂ ಅನೇಕ ಯುವಕರು ಉಪಸ್ಥಿತರಿದ್ದರು.
ಸಿಸ್ಟೇಕ ಕಂಪ್ಯೂಟರ ಟ್ರಸ್ಟ್ ಅಧ್ಯಕ್ಷ ಎ ಎಸ್ ಬದಾಮಿಯಾಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಮಾನ್ಯ ಶ್ರೀ ಎಚ್.
ವಾಯ್ ಮೇಟಿ ಇವರಿಗೆ ಮನವಿ ಸಲ್ಲಿಸಿದರು
ವರದಿ : ಜಾವೀದ್ ಮನಿಯಾರ್