ಹುನಗುಂದ : ತಾಲೂಕಿನ ನಗರದ ರಿಯಾಜ್ ಅಹಮ್ಮದ್, ಮು,ಬಂಗಾರಗುಂಡ ಇವರ ಸಾಮಾಜಿಕ ಸೇವೆ ಹಾಗೂ ನಿರಂತರ ಹೋರಾಟದ ಮೂಲಕ ಜನ ಸಾಮಾನ್ಯರ ಹಕ್ಕುಗಳಿಗಾಗಿ ಹೋರಾಟದ ಮೂಲಕವೇ ಗುರುತಿಸಿಕೊಂಡ ಹಾಗೂ ಬಾಲ ಕಾರ್ಮಿಕರ ಕಲ್ಯಾಣಕ್ಕಾಗಿ ಮತ್ತು ಕಾನೂನು ಸಂರಕ್ಷಣೆಯ ವಿಚಾರವಾಗಿ ಸಮಾಜದಲ್ಲಿ ಸದಾ ಭಾವನಾತ್ಮಕ ಮತ್ತು

ಭಾವೈಕ್ಯತೆಯಿಂದ ಸರ್ವಧರ್ಮಗಳ ಜೊತೆ ಅವಿನಾಭಾವ ಸಂಬಂಧಗಳ ಮೂಲಕ ಗುರುತಿಕೊಂಡ ರಿಯಾಜ್ ಅಹಮ್ಮದ್ ಅವರನ್ನು ಹುನಗುಂದ ತಾಲೂಕಿನ ಅಲ್ಪ ಸಂಖ್ಯಾತರ ವಿಭಾಗದ ಮಾನವ ಹಕ್ಕುಗಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆ ಮಾಡಿ ರಾಜ್ಯ ಅಧ್ಯಕ್ಷರು ಆದೇಶ ಮಾಡಿದ್ದಾರೆ ಎಂದು ಪತ್ರಿಕಾ ಪ್ರಕಟನೆ ಕೊರಿದ್ದಾರೆ.