
ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಪುರಾತನ ಐತಿಹಾಸಿಕ ಶೂಲೇಶ್ವರ ಶಿವ ದೇವಾಲಯದಲ್ಲಿ ನಿನ್ನೆಯ ದಿನ ಮಣ್ಣೆತ್ತಿನ ಅಮವಾಸ್ಯೆ ದಿನ ಶಿವಾಲಯದಲ್ಲಿ ತ್ರೀಕಾಲ ಮಹಾ ರುದ್ರಾಭೀಶೇಖ ಹಾಗೂ ಮಂಗಳಾರತಿ ಧಾರ್ಮಿಕ ಪೂಜಾ ಕಾರ್ಯಕ್ರಮ ಜರುಗಿತು,ಪ್ರತಿ ಅಮವಾಸ್ಯೆ ದಿನ ಈ ಶಿವಾಲಯದಲ್ಲಿ ಅನ್ನಸಂತರ್ಪಣೆ ನಡೆಯುತ್ತದೆ, ಕರೋನಾ ದಿಂದ ಹೋಟೆಲ್ ಅಂಗಡಿಯನ್ನೆ ನಂಬಿ ಜೀವನ ಮಾಡುತ್ತಿದ್ದ ಶಂಕ್ರಪ್ಪ ಅಂಟಿನ ಹಾಗೂ ಮಹಾಂತೇಶ ಮಡಿವಾಳರ ಈ ಶಿವಾಲಯದಲ್ಲಿ ರುಚಿಕಟ್ಟಾದ ಅಡುಗಿ ಮಾಡಿ ಜನಮನ ಗೆದ್ದ ಇವರ ಸೇವೆಯನ್ನು ಮೆಚ್ಚಿ ಹಾಗೂ ಕರೋನಾ ದಿನ ಲಾಕಡೌನ್ ಸಮಯದಲ್ಲಿ ಬಹಳ ತೊಂದರೆ ಅನುಭವಿಸಿದ್ದರು,

,ಇಂದು ಇವರ ಸೇವೆ ಗುರುತಿಸಿ ಶೂಲೇಶ್ವರ ಕಾರ್ಯಾಲಯದಲ್ಲಿ ಸಮಿತಿ ಅಧ್ಯಕ್ಷ ಶ್ರೀ ದೇವರಾಜ ಕಮತಗಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ರಹೇಮನಸಾಬ ದೊಡಮನಿ, ಸಮಿತಿ ನಿರ್ದೇಶಕ ಶ್ರೀ ಮುತ್ತಪ್ಪ ಹಡಪದ,ಮಾಜಿ,ಗ್ರಾಮ,ಪಂ,ಸದಸ್ಯೆ ಇಬ್ರಾಹಿಮ್ ಮಾಗಿ,ಸಮಿತಿ ಕಾರ್ಯದರ್ಶಿ ,ಎಸ್,ಡಿ,ಭಜಂತ್ರಿ ಎಲ್ಲರು ಸೇರಿ ಗೌರವ ಸನ್ಮಾನ ಮಾಡಿದರು.ಈ ಶಿವಾಲಯದಲ್ಲಿ ತಾವು ಜೀವಿತಾ ಅವಧಿಯಲ್ಲಿ ಹೀಗೆ ಉತ್ತಮ ಸೇವೆ ಮಾಡಬೇಕೆಂದು ಸಮಿತಿ ಅಧ್ಯಕ್ಷ ದೇವರಾಜ ಕಮತಗಿ ವಿನಂತಿಸಿದರು.

ನಂತರ ಮಾತನಾಡಿದ ರಹೇಮನಸಾಬ ದೊಡಮನಿ ಅವರು ಹಣ ಹೋಗುತ್ತೆ – ಬರುತ್ತೆ ಸಾರ್ವಜನಿಕ ರಂಗದಲ್ಲಿ ನೂರಾರು ಜನ ತಾವು ಮಾಡಿದ ಪ್ರಸಾದ ಸ್ವೀಕಾರ ಮಾಡಿ ಅದನ ಮೆಚ್ಚಿದರೆ ಅದಕ್ಕಿಂತ ದೊಡ್ಡ ಭಾಗ್ಯ ಯಾವುದು ಇಲ್ಲ ತಾವು ಹೀಗೆ ಉತ್ತಮ ಸೇವೆಯನ್ನು ಮಾಡಿ ಎಂದು ಸಲಹೆ ನೀಡಿದರು.