
ಹುನಗುಂದ : ಇಂದು ನಗರದ MR ಲಾಡ್ಜ್ ನಲ್ಲಿ ಕೊರಮ ಜನಾಂಗದ ಕುಲಗುರು ಶಿವಶರಣ ಶ್ರೀ ನೂಲಿ ಚಂದಯ್ಯನವರ ಜಯಂತಿಯನ್ನು ರಜಾ ದಿನ ರಹಿತವಾಗಿ ಇದೆ ತಿಂಗಳು ಅಗಸ್ಟ್ ೧೨ ನೇ ತಾರಿಕಿಗೆ ಆಚರಿಸಲು ಸರಕಾರ ಅಧಿಕೃತ ಆದೇಶ ಹೋರಡಿಸಿದೆ. ದಶಕಗಳಿಂದ ಕೊರಮ ಜನಂಗದ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ.
ನಮ್ಮ ಕೊರಮ ಸಮಾಜದ ಹೋರಾಟ ಬರಿ ಈ ಜಯಂತಿ ಆಚರಣೆ ಅಲ್ಲ ಸರಕಾರ ಕೊರಮ ಜನಾಂಗದ ನಿಮಗ ಮಂಡಳಿ ಸ್ಥಾಪನೆ ಮಾಡಬೇಕೆಂದು ತಾಲೂಕಿನ ಕೊರಮ ಸಮಾಜದ ಅಧ್ಯಕ್ಷ ಬಸವರಾಜ್ ಹುನಕುಂಟಿ ಸರಕಾರಕ್ಕೆ ಮನವಿ ಮಾಡಿದರು. ೧೨ ನೇ ಶತಮಾನದ ಸಮಕಾಲಿನವರಾದ ಶಿವಶರಣ ನೂಲಿ ಚಂದಯ್ಯನವರನ್ನು ಗುರುತಿಸಲು ಸರಕಾರಕ್ಕೆ ಇಷ್ಟು ವರ್ಷ ಬೇಕಾಯಿತು, ಸುಮಾರು ೪೮ ವಚನ ಗ್ರಂಥಗಳನ್ನು ಸರಕಾರ ಶೋಧಿಸಿ ರಜೇ ದಿನ ರಹಿತವಾಗಿ ಈ ಜಯಂತಿಯನ್ನು ಗೌರವದಿಂದ ಆಚರಿಸಲು ಸರಕಾರ ಆದೇಶ ನೀಡಿದ್ದು ಬಹಳ ಖುಷಿ ತಂದಿದೆ. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ನಮ್ಮ ಕೊರಮ ಜನಾಂಗದ ಪರವಾಗಿ ಕೃತಜ್ಞತೆಗಳು ಎಂದರು.
ಇದೆ ದಿನಾಂಕ ೧೨/೮/೨೦೨೨ ರಂದು ಹುನಗುಂದ ನಗರದ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಜಯಂತಿಯನ್ನು ಆಚರಿಸಲಾಗುವು ತಾಲೂಕಿನ ಎಲ್ಲಾ ಕೊರಮ ಜನಾಂಗದ ಹಿರಿಯರು,ಯುವಕರು,ತಾಯಂದಿರು,ಬಂದು ಈ ಜಯಂತಿಯನ್ನು ಯಶಸ್ವಿಗೋಳಿಸಬೇಕೆಂದು ಮುತ್ತಣ್ಣ ಸ ಭಜಂತ್ರಿ ವಿನಂತಿಸಿದರು. ಈ ಸಭೆಯಲ್ಲಿ ಸಮಾಜದ ಹಿರಿಯರಾದ ಶ್ರೀ ರಾಮಣ್ಣ ಭಜಂತ್ರಿ (ಹುನಗುಂದ),ಶ್ರೀ ಬಸಪ್ಪ ಭಜಂತ್ರಿ (ಅಮರಾವತಿ)ಶ್ರೀ ಬಸವರಾಜ್ ಹುನಕುಂಟಿ,ಶ್ರೀ ಯಲ್ಲಪ್ಪ ಭಜಂತ್ರಿ ಶ್ರೀ ಮಹಾಂತೇಶ ಭಜಂತ್ರಿ (ಬಿಂಜವಾಡಗಿ) ರಾಮಣ್ಣ ಭಜಂತ್ರಿ ( ಅಮೀನಗಡ) ಶ್ರೀ ಬಸಪ್ಪ ಹಂಗರಗಿ ( ಸೂಳೇಭಾವಿ) ಬಾಲಾಜಿ ಭಜಂತ್ರಿ ,

ಶ್ರೀ ನಾಗಪ್ಪ ಭಜಂತ್ರಿ ( ಅಮರಾವತಿ) ಶ್ರೀ ರೋಮಣ್ಣ ಭಜಂತ್ರಿ, ಯಮನಪ್ಪ ಫ ಭಜಂತ್ರಿ ಶ್ರೀ ಹನಮಂತ ಹಿರೇಮನಿ ,ಶ್ರೀ ಮುತ್ತಣ್ಣ ಭಜಂತ್ರಿ (ಸಂಗಮ) ಶ್ರೀ ಬಸವಂತಪ್ಪ ಭಜಂತ್ರಿ ( ಯರಗೇರಿ ) ಹಾಗೂ ಶ್ರೀ ಸಂಗಪ್ಪ ಭಜಂತ್ರಿ (ಹಿರೇಮಾಗಿ) ಶಿವಪುತ್ರಪ್ಪ ಭಜಂತ್ರಿ ( ಮರೋಳ) ಶ್ರೀ ಯಮನಪ್ಪ ಭೊ ಭಜಂತ್ರಿ ಹಾಗೂ ಸಮಾಜದ ಹಲವಾರು ಮುಖಂಡರು ಈ ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News