
ಅಮೀನಗಡ; ಹುನಗುಂದ ತಾಲೂಕಿನ ಅಮೀನಗಡ ನಗರಕ್ಕೆ ಕಂದಾಯ ನೀರಿಕ್ಷಕರಾಗಿ ಶ್ರೀ ಧರ್ಮಣ್ಣ ಎಸ್ ಯತ್ನಟ್ಟಿ ಅವರು ಚಾಜ್೯ ತೆಗೆದುಕೊಂಡು ಒಂದೆ ವಾರದಲ್ಲಿ ಇಲಾಖೆಯ ನೈಜತೆಯನ್ನೆ ಬದಲಿಸಿದ್ದಾರೆ, ಹೌದು ಇದೆ ಇಲಾಖೆಯಲ್ಲಿ ಅಮೀನಗಡ ಕಂದಾಯ ಇಲಾಖೆಯಲ್ಲಿ ಕಮತಗಿ,ಕಡಿವಾಲ,ಐಹೊಳೆ,ಸೂಳೇಭಾವಿ, ಚಿಲಾಪೂರ,ಕೆಲೂರು,ಸಜೆಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಮಾಡಿ ಸಾರ್ವಜನಿಕರಿಂದ ಸೈ ಎನ್ನಿಸಿಕೊಂಡ ನಿಷ್ಟಾವಂತ ಅಧಿಕಾರಿ ಧರ್ಮಣ್ಣನವರು ಇಂದು ಇದೆ ನಗರದಲ್ಲಿ ಕಂದಾಯ ನೀರಿಕ್ಷಕರಾಗಿ ಪ್ರಮೋಷನ್ ಹೊಂದಿದ್ದು ಸಾರ್ವಜನಿಕ ರಂಗದಲ್ಲಿ ಹರ್ಷ ವ್ಯಕ್ತವಾಗಿದೆ , ತಮ್ಮ ಉತ್ತಮ ಸೇವೆಯ ಮೂಲಕ ಜನಮಾನಸದಲ್ಲಿ ಉಳಿದುಕೊಂಡ ಶ್ರೀ ಡಿ,ಎಸ್, ಯತ್ನಟ್ಟಿ ಅವರ ಕರ್ತವ್ಯ ಪಾಲನೆ ಹಾಗೂ ಅವರ ಶಿಸ್ತು ಇತರೆ ಅಧಿಕಾರಿಗಳಿಗೆ ಮಾದರಿ ಎಂದರೆ ತಪ್ಪಾಗಲಾರದು.

ಇಂತಹ ಧಕ್ಷ ಅಧಿಕಾರಿಗಳ ಅವಶ್ಯಕತೆ ಈ ನಗರಕ್ಕೆ ಇದೆ ,ಇಲಾಖೆಯ ಯಾವುದೆ ಸಮಯದಲ್ಲಿ ಸಾರ್ವಜನಿಕರು ಏನೆ ಸೇವೆ ಬಯಸಿ ಬಂದರು ಸಹ ನಮ್ಮ ಇಲಾಖೆಯಿಂದ ಸಮಯ ವ್ಯರ್ಥವಾಗದೆ ಉತ್ತಮ ಸೇವೆ ಒದಗಿಸಲು ಎಲ್ಲಾ ತಲಾಟಿಗಳಿಗೆ ಸೂಚನೆ ನೀಡಿದ್ದು ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಗ್ರಾಮ ಲೆಕ್ಕಾಧಿಕಾರಿಯಾಗಿ ನಾನು ಇಲ್ಲೆ ಸೇವೆ ಮಾಡಿದ್ದೇನೆ ಇಲ್ಲಿನ ಜನರ ಮನಸ್ಥಿತಿ ಹಾಗೂ ಎಲ್ಲಾ ರೈತರ ಸಮಸ್ಯೆ ಏನೆಂಬುದು ನನಗೆ ಗೊತ್ತಿದೆ,ಜನ ಸೇವೆ ಮಾಡಲು ಇದೊಂದು ನಮಗೂ ಉತ್ತಮ ಅವಕಾಶ, ಸಾಧ್ಯವಾದಷ್ಟು ನಾವು ಇನ್ನೂ ಉತ್ತಮ ಸೇವೆ ಮಾಡಲು ಬಯಸುತ್ತೇವೆ ಎಂದರು. ಕಂದಾಯ ನೀರಿಕ್ಷಕರಾಗಿ ಚಾರ್ಜ್ ಪಡೆದ ನಂತರ ಇಲಾಖೆಯ ಕಳೆ ಬದಲಾಗಿದೆ ಸುಣ್ಣ ಬಣ್ಣಗಳಿಂದ ಇಲಾಖೆ ಕಂಗೋಳಿಸುತ್ತಿದೆ,ಈ ಶಿಸ್ತು ಯಾವಗಲು ಇಲಾಖೆಯ ಎಲ್ಲಾ ಅಧಿಕಾರಿಗಳು ಕಾಯ್ದುಕೊಂಡು ಜನರ ಆಶೋತ್ತರಗಳಿಗೆ ಸ್ಪಂದಿಸಲಿ ಎಂದು ನಾವು ಕೂಡ ಶುಭ ಹಾರೈಸುತ್ತೇವೆ. ನೂತನವಾಗಿ ಅಧಿಕಾರ ವಹಿಸಿಕೊಂಡ ಶ್ರೀ ಡಿ,ಎಸ್ ಯತ್ನಟ್ಟಿ ಅವರಿಗೆ ನಮ್ಮ BB News ವತಿಯಿಂದ ಅಭಿನಂದನೆಗಳು.