ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಶಿವರಾಜ್ಕುಮಾರ್ ಸದ್ಯ ಎ ಹರ್ಷ ನಿರ್ದೇಶನದ ಭಜರಂಗಿ 2, ಆರ್ಡಿಎಕ್ಸ್, ಭೈರತಿ ರಣಗಲ್ಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆ ಅವರು ಸೈಲೆಂಟ್ ಆಗಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.
ಶಿವರಾಜ್ಕುಮಾರ್ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರತಿ ವರ್ಷ ಅವರ ನಟನೆಯ ಕನಿಷ್ಟ ಮೂರು ಚಿತ್ರಗಳು ತೆರೆಗೆ ಬರುತ್ತವೆ. ಚಿತ್ರದಿಂದ ಚಿತ್ರಕ್ಕೆ ಅವರ ಪಾತ್ರ ಕೂಡ ಭಿನ್ನವಾಗಿರುತ್ತದೆ. ಆರ್ಜಿವಿ ನಿರ್ದೇಶನದ ಕಿಲ್ಲಿಂಗ್ ವೀರಪ್ಪನ್ ಸಿನಿಮಾದಲ್ಲಿ ಶಿವರಾಜ್ಕುಮಾರ್ ಬಣ್ಣ ಹಚ್ಚಿದ್ದರು. ಈ ಸಿನಿಮಾ ತೆಲುಗು ಹಾಗೂ ತಮಿಳು ಎರಡೂ ಭಾಷೆಯಲ್ಲಿ ತೆರೆಗೆ ಬಂದಿತ್ತು. ನಂತರ ಬಾಲಕೃಷ್ಣ ನಟನೆಯ ಗೌತಮಿಪುತ್ರ ಶಾತಕರ್ಣಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದರು. ಈಗ ಮತ್ತೆ ಟಾಲಿವುಡ್ನತ್ತ ಮುಖ ಮಾಡಲು ಶಿವರಾಜ್ಕುಮಾರ್ ರೆಡಿ ಆಗಿದ್ದಾರಂತೆ.
ಶಿವರಾಜ್ಕುಮಾರ್ ಸದ್ಯ ಎ ಹರ್ಷ ನಿರ್ದೇಶನದ ಭಜರಂಗಿ 2, ಆರ್ಡಿಎಕ್ಸ್, ಭೈರತಿ ರಣಗಲ್ಲು ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆ ಅವರು ಸೈಲೆಂಟ್ ಆಗಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.
ಹೌದು, ತೆಲುಗು ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ಸಿದ್ಧಗೊಳ್ಳಲಿರುವ ಸಿನಿಮಾಗೆ ಶಿವರಾಜ್ಕುಮಾರ್ ಹೀರೋ ಅಂತೆ. ಈ ಚಿತ್ರ ಸಂಪೂರ್ಣ ಆಕ್ಷನ್ ಎಂಟರ್ಟೇನರ್ ಆಗಿರಲಿದೆ. ರಾಮ್ ಧೂಳಿಪುಡಿ ಹೆಸರಿನವರು ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಶ್ರೀಕಾಂತ್ ಧೂಳಿಪುಡಿ ಹೆಸರಿನ ಉದ್ಯಮಿ ಈ ಚಿತ್ರಕ್ಕೆ ಹಣ ಹೂಡಿಕೆ ಮಾಡುತ್ತಿದ್ದಾರೆ. ಕನ್ನಡದ ಖ್ಯಾತ ಕಲಾವಿದರು ಹಾಗೂ ತಂತ್ರಜ್ಞರು ಈ ಸಿನಿಮಾದಲ್ಲಿ ಇರಲಿದ್ದಾರಂತೆ.
ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಎ.ಹರ್ಷ ನಿರ್ದೇಶನದ ಭಜರಂಗಿ 2 ಶೂಟಿಂಗ್ ಪೂರ್ಣಗೊಳಿಸಿ ಮೇ ತಿಂಗಳಲ್ಲೇ ತೆರೆಗೆ ಬರಬೇಕಿತ್ತು. ಆದರೆ, ಕೊರೋನಾದಿಂದಾಗಿ ಸಿನಿಮಾ ಶೂಟಿಂಗ್ ನಿಂತಿತ್ತು. ಈಗ ಮತ್ತೆ ಸಿನಿಮಾ ಶೂಟಿಂಗ್ ಆರಂಭವಾಗಿದೆ. ಶಿವರಾಜ್ಕುಮಾರ್ ಅಭಿನಯಿಸುತ್ತಿರುವ ಉಳಿದೆರಡು ಚಿತ್ರಗಳ ಕೆಲಸಗಳೂ ನಡೆಯುತ್ತಿವೆ.