Breaking News

ಪಟ್ಟಣ ಪಂಚಾಯತ ಚುನಾ ವಣೆಯಲ್ಲಿ BJP ಪಕ್ಷದಿಂದ ಭರ್ಜರಿ ಗೆಲವು ಸಾಧಿಸಿದ ಶ್ರೀಮತಿ ರತ್ನಾ ಮಹಾಂತೇಶ ಬಿಸನಾಳ

ಶ್ರೀ ಮಹಾಂತೇಶ ಬಿಸನಾಳ – ನನ್ನ ಧರ್ಮಪತ್ನಿ ಅವರನ್ನು ಪ್ರಚಂಡ ಬಹುಮತದಿಂದ ಆರಿಸಿ ತಂದ ನಿಮಗೆ ನನ್ನ ಹೃದಯ ಪೂರ್ವಕ ನಮನಗಳು

ಕಮತಗಿ; ಹುನಗುಂದ ತಾಲೂಕಿನ ಕಮತಗಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಭರ್ಜರಿ ಗೆಲುವನ್ನು ಶ್ರೀಮತಿ ರತ್ನಾ ಮಹಾಂತೇಶ ಬಿಸನಾಳ ಅವರು ವಾರ್ಡ ನಂಬರ್ ೧೦ ರಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು.ಇವರ ಸಹೋದರ ಮಹಾಂತೇಶ ಹಾಗೂ BJP ಪಕ್ಷದ ಎಲ್ಲಾ ಕಾರ್ಯಕರ್ತರು ಹಗಲು ರಾತ್ರಿ ಶ್ರಮ ಪಟ್ಟು ಸರಕಾರದ ಸಾಧನೆ ಬಗ್ಗೆ ಜನರಿಗೆ ಮನವರಿಕೆ ಮಾಡಿ ಕೇಂದ್ರ ಹಾಗೂ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವು ಅಧಿಅಕಾರದಲ್ಲಿ ಇರುವುದರಿಂದ ನಮ್ಮ ನಗರ ಹಾಗೂ ವಾಡ್೯ಗೆ ಹೆಚ್ಚಿನ ಅನುದಾನ ತಂದು ಸಮಗ್ರ ಅಭಿವೃದ್ಧಿ ಮಾಡುವುದಾಗಿ ಹೇಳಿದರು.

ಈ ನಮ್ಮ ಗೆಲುವಿಗೆ ನಮ್ಮ ಜನರ ಸಹಕಾರ ಬಹಳ ಇದೆ ಕಾಂಗ್ರೆಸ್ ಮುಖಂಡರು ನಮ್ಮ ಬಗ್ಗೆ ಬಹಳ ಪಿತೂರಿ ಮಾಡಿದರು ಅವರ ಆಟ ಜನರ ಮುಂದೆ ನಡೆಯಲಿಲ್ಲ ಜನರು ನಮ್ಮ ಪ್ರಾಮಾಣಿಕ ಸೇವೆ ಗುರುತಿಸಿ ಮತ ನೀಡಿದ್ದಾರೆ, ಅವರ ಸೇವೆಯನ್ನು ನಮ್ಮ ಅಧಿಕಾರ ಮುಗಿದರೂ ಸಹ ಜನ ಸೇವೆ ಮಾಡುವುದಾಗಿ ಇವರ ಸಹೋದರ ಮಹಾಂತೇಶ ಅವರು ಗುಡುಗಿದರು.

ನೂತನ ಪಟ್ಟಣ ಪಂಚಾಯತ ಸದಸ್ಯರಾಗಿ ಆಯ್ಕೆಯಾದ ಶ್ರೀಮತಿ ರತ್ನಾ ಮಹಾಂತೇಶ ಬಿಸನಾಳ ಅವರು ಭಾರತೀಯ ಜನತಾ ಪಕ್ಷದ ಮುಖಂಡರಿಗೆ,ಕಾರ್ಯಕರ್ತರಿಗೆ ಸಮಾಜದ ಹಿರಿಯರಿಗೆ ಮತದಾರ ಪ್ರಭುಗಳಿಗೆ ನಾನು ಮೊದಲು ಕೃತಜ್ಞತೆ ಸಲ್ಲಿಸುತ್ತಾ ಎಲ್ಲರಿಗೂ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯ ಕೋರಿದರು.

About vijay_shankar

Check Also

BJP ತೋರೆದು ಕಾಂಗ್ರೆಸ್ ಕೈ ಹಿಡಿದ ರಂಗಪ್ಪ ಸುರಪೂರ

ಇಲಕಲ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ:- ಕೆಪಿಸಿಸಿ ಸದಸ್ಯರಾದ ಶಾಂತಕುಮಾರ್ ಸುರಪುರ ಅವರ ನೇತೃತ್ವದಲ್ಲಿ ಯುವ ಮುಖಂಡರಾದ ರಂಗಪ್ಪ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.