
ಅಮೀನಗಡ: ಹುನಗುಂದ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಇಂದು ದಯಾನಂದ ಗಜಾನನ ಯುವಕ ಮಂಡಳಿಯಿಂದ ಅದ್ದೂರಿ ಗಣೇಶ ಉತ್ಸವವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು ಇಂದು ಎರಡನೇ ದಿನ ದಯಾನಂದ ನಗರದ ಎಲ್ಲಾ ಸಾರ್ವಜನಿಕರು ಹಿರಿಯರು ಅತೀ ಉತ್ಸಾಹದಿಂದ ಗಣೇಶೋತ್ಸವವನ್ನು ಪ್ರತಿಷ್ಠಾಪಿಸಿ ಸಾರ್ವಜನೊಕವಾಗಿ ಅದ್ದೂರಿ ಮಹಾಪ್ರಸಾದವನ್ನು ಹಮ್ಮಿಕೊಳ್ಳಲಾಗಿತ್ತು. ನೂರಾರು ಜನ ಸಾರ್ವಜನಿಕರು ಮಹಾಪ್ರಸಾದದಲ್ಲಿ ಪಾಲ್ಗೊಂಡು ಗಣೇಶನ ದರ್ಶನವನ್ನು ಪಡೆದುಕೊಂಡರು.

ಸುಮಾರು 20 ವರ್ಷಗಳಿಂದ ದಯಾನಂದ ನಗರದಲ್ಲಿ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಗಣಪತಿಯನ್ನು ಇಡಲಾಗುತ್ತಿದೆ. ಅತೀ ದುಂದುವೆಚ್ಚ ಮಾಡದೆ ಡಿಜೆ ಅಥವಾ ಡಾನ್ಸ ಇಲ್ಲದೆ ಅದಕ್ಕೆ ತಗಲುವ ವೆಚ್ಚದ ಹಣವನ್ನೆ ಸಾರ್ವಜನಿಕ ಪ್ರಸಾದಕ್ಕೆ ಖರ್ಚುಮಾಡಿ ಸರಳವಾಗಿ ಗಣಪತಿಯನ್ನು ಇಂದು ಎರಡನೆ ದಿನಕ್ಕೆ ವಿಸರ್ಜನೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಶ್ರೀ ಪಿ,ಸಿ,ಗಾಡಿ ಅವರು ತಿಳಿಸಿದರು. ದಯಾನಂದ ನಗರದ ಎಲ್ಲಾ ಹಿರಿಯರು ಇದಕ್ಕೆ ಸಾತ್ ನೀಡಿ ಯಶಸ್ವಿಯಾಗಿಸಿದರು.

ಪಿ ಸಿ ಗಾಡಿ, ರಾಜು ಗುಂಡ್ಮಿ ನಾಗರಾಜ್
ಹಣಗಿ ,ಪುಂಡಲೀಕ ಕಟಗೇರಿ, ಶಿವು ಗುಂಡ್ಮಿ
ಸುನಿಲ್ ರಾಮದುರ್ಗ ಶಂಕರ್ ರಾಮದುರ್ಗ
ಸಂಗಮೇಶ ನಾವಿ ,ಮೈಬುಬ ಸಾಲಮನಿ,
ಗುರುನಾಥ ವಡ್ಡರ್, ಸುದೀಪ್ ಗಾಡದ
ಭರತ್ ಹೊಸಮನಿ, ಬಸು ಬಾಪ್ರಿ, ಬಸು ಗಾಡದ, ಸಿದ್ದಪ್ಪ ಗೌಡ್ರ,ಸಿದ್ದಪ್ಪ ರಾಮದುರ್ಗ
ವೆಂಕಟೇಶ್ ಮಂಗಳೂರ. ಹಾಗೂ ದಯಾ ನಂದ,ನಗರದ ಹಿರಿಯರು, ಯುವಕರು ಭಾಗವಹಿಸಿದ್ದರು.
