
ಬದಾಮಿ: ತಾಲೂಕಿನ ಗಂಗನಬೂದಿಹಾಳ ಗ್ರಾಮದಲ್ಲಿ ನೂತನ ಶ್ರೀ ಮಾರುತೇಶ್ವರ ದೇವಸ್ಥಾನ ಹಾಗೂ ಶ್ರೀ ಹಾದಿ ಬಸವೇಶ್ವರ ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಕುಂಭಾಭಿಷೇಖ ಮಹೋತ್ಸವದ ಧಾರ್ಮಿಕ ಪೂಜಾ ಕಾರ್ಯಕ್ರಮ ಗ್ರಾಮದಲ್ಲಿ ತುಂಬಾ ಅದ್ದೂರಿಯಾಗಿ ದಿನಾಂಕ 25/ 03 / 2025 ಮಂಗಳವಾರ ದಿಂದ 26/ 27 ರ ಗುರುವಾರದ ವರೆಗೆ ಶ್ರೀ ಮಾರುತೇಶ್ವರ ಮೂರ್ತಿ ಮರು ಪ್ರಾಣಪ್ರತಿಷ್ಠಾಪನೆ , ಹಾಗೂ ಗೋಪುರಕ್ಕೆ ಕುಂಭಾಭಿಶೇಖ ಮತ್ತು ಹೋಮ,ಹವನ ನಡೆಯಲಿದೆ. ಗ್ರಾಮದ ಎಲ್ಲಾ ಸದ್ಬಕ್ತರು ಮತ್ತು ಸುತ್ತ ಹಳ್ಳಿಯ ಎಲ್ಲ ಭಕ್ತಾಧಿಗಳು ಈ ಧಾರ್ಮಿಕ ಉತ್ಸವದಲ್ಲಿ ಬಂದು ಭಾಗವಹಿಸಬೇಕೆಂದು ಈ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಎಚ್ ಆರ್ ಹಿರೇಮಠ
ಹಾಗೂ ಉಪಾಧ್ಯಕ್ಷರಾದ ಶ್ರೀ ಎಸ್,ಎಚ್ ಉದಗಟ್ಟಿ ಖಜಾಂಚಿಗಳಾಗ ಶ್ರೀ ಜಿ,ಎಸ್ ವಡಗೇರಿ, ಮತ್ತು ಕಾರ್ಯದರ್ಶಿ ಶ್ರೀ ಎಂ,ಎನ್ ಹೂಲಗೇರಿ ಮತ್ತು ಗ್ರಾಮದ ಎಎಪಿ ಜಿಲ್ಲಾ ಅಧ್ಯಕ್ಷ ಶ್ರೀ ಭೀಮಪ್ಪ ಅವರು ಮಾಧ್ಯಮಕ್ಕೆ ವಿಷಯ ತಿಳಿಸಿದರು.
ದಿನಾಂಕ – 25 ರಿಂದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಶ್ರೀ ಶ್ರೀ ಷ,ಬ್ರ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ,ಚರಂತಿಮಠ ಕೆರೂರ ಹಾಗೂ ಅನೇಕ ಮಹಾಸ್ವಾಮಿಗಳು ಉಪಸ್ಥಿತಿ ವಹಿಸಿದರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಳಬಸಯ್ಯ ಆರ್ ಹಿರೇಮಠ ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವ ಶ್ರೀ ಬಿಬಿ ಚಿಮ್ಮನಕಟ್ಟಿ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಮಾಜಿ ಸಚಿವ ಶ್ರೀ ಮುರಗೇಶ ನಿರಾಣಿ ,ಮಾಜಿ ಶಾಸಕ ಎಂ,ಕೆ ಪಟ್ಟಣಶಟ್ಟಿ, ಸೇರಿದಂತೆ ಅನೇಕ ಮುಖಂಡರು, ಉಪಸ್ಥಿತಿ ವಹಿಸಲಿದ್ದಾರೆ. ನಿರಂತರ ಧಾರ್ಮಿಕ ವಿವಿಧ ಪೂಜಾ ಕಾರ್ಯಕ್ರಮಗಳು ನಿರಂತರವಾಗಿ 3 ದಿನ ನಡೆಯಲಿವೆ ದಿನಾಂಕ 27 / ರ ಗುರುವಾರ ಬೆಳಗ್ಗೆ 11:30 ಕ್ಕೆ ಈ ನೂತನ ಹನುಮಾನ್ ಮಂದಿರ ಲೋಕಾರ್ಪಣೆ ಸಭಾ ಕಾರ್ಯಕ್ರಮದ

ದಿವ್ಯ ಸಾನಿದ್ಯವನ್ನು ಪ,ಪೂ ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ವಹಿಸಲಿದ್ದಾರೆ, ಇವರೊಂದಿಗೆ ಅನೇಕ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ, ಕಾರ್ಯಕ್ರಮದ ಉದ್ಘಾಟನೆಯನ್ನು ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಪಿ,ಸಿ,ಗದ್ದಿಗೌಡರ ಮಾಡಲಿದ್ದಾರೆ. ಹಾಗೆ ಜ್ಯೋತಿ ಬೆಳಗುವವರು : ರಾಜ್ಯಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ನಾರಾಯಣಸಾ ಭಾಂಡಿಗೆ ಹಾಗೂ ಶಾಸಕರಾದ ಸನ್ಮಾನ್ಯ ಎಚ್,ವೈ,ಮೇಟಿ ಸೇರಿದಂತೆ ಅನೇಕ ನಾಯಕರು ವೇದಿಕೆ ಉಪಸ್ಥಿತಿ ವಹಿಸಲಿದ್ದಾರೆಂದು ಈ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು/ ಸರ್ವ ಸದಸ್ಯರು ತಿಳಿಸಿದರು.