Breaking News

ಕೊಟ್ಟ ಮಾತು ಉಳಿಸಿಕೊಂಡ ಕಲಿಯುಗದ ಭಗೀರಥ ಶ್ರೀ ವಿಶ್ವನಾಥ ಹಣಗಿ,

ಅಮೀನಗಡ: ಹುನಗುಂದ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ವಾರ್ಡ್ ನಂಬರ್ ೫ ರಿಂದ ಗ್ರಾಮ ಪಂಚಾಯತಿ ಉಪಚುನಾ ವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದ ಶ್ರೀ ವಿಶ್ವನಾಥ್ ಅವರು ವಿಜಯಶಾಲಿಯಾದ ನಂತರ ಚುನಾವಣೆ ಯಲ್ಲಿ 5ನೇ ವಾರ್ಡಿನ ಸಾರ್ವಜನಿಕರಿಗೆ ಈ ವಾರ್ಡಿ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಮತಯಾಚನೆ ಮಾಡಿ ದ್ದರು. ಅದರ ಫಲವಾಗಿ ಮತದಾರರು 90 ಮತಗಳ ಅಂತರದಿಂದ ಭರ್ಜರಿ ಗೆಲುವನ್ನು ತಂದುಕೊಟ್ಟಿದ್ದರು.

ಕೊಟ್ಟಮಾತಿನಂತೆ ಈ ವಿಶ್ವನಾಥ ಹಣಗಿ ಅವರನ್ನು ಕಲಿಯುಗದ ಭಗೀರಥನೆಂದು ಜನ ಕರೆಯುತ್ತಿದ್ದಾರೆ. ಇದಕ್ಕೆ ಕಾರಣ ವಾರ್ಡ್ ನಂಬರ್ ೫ ರಲ್ಲಿ ಈ ಉಪಚುನಾವಣೆಯಲ್ಲಿ ಗೆದ್ದು ಬಂದರೆ ಸ್ವಂತ ಖರ್ಚಿನಲ್ಲಿ ಬೋರ್ವೆಲ್ ಕೋರಿಸಿ ನೀರಿನ ತೊಂದರೆಯನ್ನು ನೀಗಿಸುವುದಾಗಿ ಹೇಳಿ ಕೊಂಡಿದ್ದರು. ಅದರಂತೆ ಈಗ ಶ್ರೀರಾಮ ನಗರದಲ್ಲಿ ಬೋರ್ವೆಲ್ ಹಾಕಿಸಿದ್ದಾರೆ, ಕನಿಷ್ಠ ೦೧ ಇಂಚು ನೀರು ಬಿದ್ದಿದ್ದು ಜನರಿಗೆ ಹರ್ಷವಾಗಿದೆ. ನೀರಿನ ಭವಣೆಯನ್ನು ನೀಗಿಸಿದ ಈ ಕಲಿಯುಗದ ಭಗೀರಥ ಎಂದು ವಿಶ್ವನಾಥ ಅವರನ್ನು ಕರೆಯುತ್ತಿದ್ದಾರೆ.

ಸೂಳೇಭಾವಿ ಗ್ರಾಮ ಪಂಚಾಯತಿ ೫ನೇ ವಾಡಿನ ಸದಸ್ಯ ದಿ,ಶ್ರೀ ರಮೇಶ ಧುತ್ತರಗಿ ಅವರು ಅನಾರೋಗ್ಯ ದಿಂದ,ಮರಣ ಹೊಂದಿದ ಪ್ರಯುಕ್ತ ಈ ಉಪಚುನಾವಣೆ ನಡೆದಿತ್ತು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ವಿಶ್ವನಾಥ ಹಣಗಿ ಸ್ಪರ್ಧೆ ಮಾಡಿದ್ದರು. ಅತ್ಯಂತಹ ಯುವ ಉತ್ಸಾಹಿ ಯುವಕನಾದ ವಿಶ್ವನಾಥ ಉತ್ತಮ ಕ್ರಿಯಾಶೀಲತೆ ಹೊಂದಿರುವ ನಾಯಕ, ಅವರು ವಾರ್ಡಿನ ಸಮಗ್ರ ಅಭಿವೃದ್ಧಿ ಜೊತೆಗೆ ಸಾರ್ವಜನಿಕ ರಂಗದಲ್ಲಿ ಉತ್ತಮ ಸಾಮಾಜೀಕ ಚಿಂತನೆಗಳ ಮೂಲಕ ಗುರುತಿಕೊಂಡವರು.

ಇಂತಹ ಯುವಕರಿಂದ ಗ್ರಾಮಗಳು ಅಭಿವೃದ್ಧಿ ಕಾಣಲಿ,ನೂತನ ಗ್ರಾಮ ಪಂಚಾಯತಿ ಸದಸ್ಯನ ಈ ಸಾಮಾಜೀಕ ಕಾರ್ಯಕ್ಕೆ ಎಲ್ಲಡೆ ಪ್ರಶೌಂಸೆ ವ್ಯಕ್ತವಾಗಿದೆ. ನೂತನ ಗ್ರಾಮ ಪಂಚಾಯತಿ ಸದಸ್ಯರಾಗಿ ಈ ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿ ಎಂದು ನಮ್ಮ BB News ಹಾರೈಸುತ್ತದೆ.ಅಲ್ಲದೆ ಆಯ್ಕೆ ಮಾಡಿದ ಮತಬಾಂಧವರಿಗೆ ಕೃತಜ್ಞತೆ ಸಲ್ಲಿಸಿ ಈ ಹೊಸವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯ ಕೋರಿದರು.

ಅಲ್ಲದೆ ಈ ಬೋರವೆಲ್ ಹಾಕಿಸಲು ಜಿಲ್ಲಾ KPPC ಅಧ್ಯರು/ ಮಾಜಿ ಶಾಸಕರಾದ ಶ್ರೀ ಎಸ್,ಜಿ, ನಂಜಯ್ಯನಮಠ ಹಾಗೂ KHDC ನಿಮಗ ಮಂಡಳಿ ಮಾಜಿ ಅಧ್ಯಕ್ಷರಾದ ಶ್ರೀ ಆರ್,ಪಿ,ಕಲಬುರಗಿ ಅವರು ತಲಾ ೧೦,೦೦೦ ಸಾವಿರ ರೂಪಾಯಿ ಸಹಾಯ ಮಾಡಿದ್ದಾರೆ,

ಈ ಸಂಧರ್ಭದಲ್ಲಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಶ್ರೀರಾಮ ನಗರದ ಹಿರಿಯರಾದ ಶ್ರೀ ಯೋಗಪ್ಪ ಕಟಗೇರಿ,ಶ್ರೀ ಪರಸಪ್ಪ ಐಹೊಳ್ಳಿ,ಶ್ರೀ ಭೀಮಣ್ಣ ಕಟಾಪೂರ,ಶ್ರೀ ಮಲ್ಲಪ್ಪ ನೆಮದಿ,ಶ್ರೀ ಬಸಪ್ಪ ಜವಳಿ,ಶ್ರೀ ರಮೇಶ ಭಾಫ್ರಿ ,ಮುಂತಾದವರು ಇದ್ದರು.

ಇದೆ ಜನವರಿ ೧೨ ರಂದು ಸ್ವಾಮಿ ವಿವೇಕಾನಂದ ಅವರ ಜಯಂತೋತ್ಸವ ಅಂಗವಾಗಿ ಈ ಬೋರವೆಲ್ ಶ್ರೀರಾಮ ನಗರದ ಜನತೆಗೆ ಕುಡಿಯಲು ನೀರು ಅರ್ಪನೆ ಮಾಡಲಿದ್ದಾರೆ.

About vijay_shankar

Check Also

ಆಸಂಗಿ ಗ್ರಾಮದಲ್ಲಿ ರಾಜಶೇಖರ್ ಶೀಲವಂತ ಇವರಿಂದ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ವಿತರಣೆ

ಗುಳೇದಗುಡ್ಡ : ತಾಲೂಕಿನ ಸಮಿಪದ ಆಸಂಗಿ ಗ್ರಾಮದಲ್ಲಿ ಇಂದು ಶ್ರೀ ಮಾರುತೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಸದಸ್ಯರಿಗೆ ಬಾಗಲಕೋಟೆ ಜಿಲ್ಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.