
ಬಾಗಲಕೋಟೆ : ೨೪. ನರದಲ್ಲಿ ಕೆಲವು ಹಿಂದೂ ಸಂಘಟನೆ ಶ್ರೀರಾಮ್ ಸೇನೆ ಕಾರ್ಯಕರ್ತರು ಕೋಮು ಗಲಭೆ ಸೃಷ್ಟಿಸಲು ಪ್ರಚೋದನಕಾರಿ ಹೇಳಿಕೆ ನೀಡುತ್ತಾ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ,ಮಸೀದಿಗಳ ಮೇಲಿನ ಧ್ವನಿವರ್ಧಕಗಳಿಂದ ಕಿರಿ ಕಿರಿ ಯಾಗುತ್ತಿದ್ದೆ ಎಂದು ಆರೋಪಿಸಿರುವ ಕಾರ್ಯಕರ್ತರು ಹಿಂದೂ ದೇವಾಲಯಗಳ ಮೇಲೆ ಧ್ವನಿವರ್ಧಕ ಇಲ್ವಾ ? ಈ ಬಗ್ಗೆ ಅವರು ಆತ್ಮವಿಮರ್ಷೆ ಮಾಡಿಕೊಳ್ಳಲಿ ನಾವು ಭಾರತೀಯರು ಇಲ್ಲಿ ಸಾವಿರಾರು ಜಾತಿಗಳು,ಪಂಗಡಗಳು,ಅವರದೇ ಧರ್ಮ,ಆಚಾರ,ವಿಚಾರ,ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುತ್ತಾ ಬಂದಿವೆ ಅವರ ಧಾರ್ಮಿಕ ಭಾವಣೆಗಳಿಗೆ ಧಕ್ಕೆ ಬರುವಂತಹ ಇಂತಹ ಪ್ರಚೋದನೆ ಭಾಷಣ ಮಾಡಿ ಮನವಿ ಸಲ್ಲಿಸೊದು ಅಪರಾಧ ಇಂತಹ ಹಿಂದೂ ಕಾರ್ಯಕರ್ತರ ಮನವಿಯನ್ನು ತಾವು ತಿರಸ್ಕರಿಸಿ ಅವರ ಮೇಲೆ ಕ್ರಮ ಕೈಗೊಳ್ಳಲು ನಗರದ ಮುಸ್ಲಿಂ ಬಾಂಧವರು ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಲಿಂ ಮೋಮಿನ್ ಅವರು ಮಾತನಾಡಿದರು.

ಎರಡು ಕೋಮಿನ ನಡುವೆ ಶಾಂತಿ ಭಂಗ ಉಂಟು ಮಾಡಲು ಪ್ರಯತ್ನಿಸಿ ಪ್ರಚೋಧನಾಕಾರಿ ಭಾಷಣ ಮಾಡಿರುವ ಶ್ರೀರಾಮಸೇನೆ ಕಾರ್‍ಯಕರ್ತರ ಮೇಲೆ ಕಾನೂನಿನ ಕ್ರಮಕೈಗೊಳ್ಳಲು ನಗರದ ಮುಸ್ಲಿಂ ಸಮುದಾಯದವರು ಆಗ್ರಹಿಸಿದರು.ಇಂದು ನವನಗರದ ಜಿಲ್ಲಾಡಳಿತ ಭವನದ ಮುಂದೆ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಯುವಕರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಿ ಶ್ರೀರಾಮಸೇನೆಯ ಕಾರ್‍ಯಕರ್ತರು ನವೆಂಬರ್ ೧೮ ರಂದು ಜಿಲ್ಲಾಡಳಿತ ಭವನದ ಮುಂದೆ ಭಾಷಣ ಮಾಡುತ್ತಿರುವಾಗ ಬಾಗಲಕೋಟ ಹಾಗೂ ನವನಗರದಲ್ಲಿ ಇರುವ ಮಸೀದಿಗಳ ಧ್ವನಿವರ್ಧಕಗಳು ಭೇರೆ ಧರ್ಮದ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿವೆ ಅವುಗಳನ್ನು ಸರ್ಕಾರ ತೆಗೆಯದಿದ್ದರೆ ನಾವೇ ಕಿತ್ತು ಹಾಕುತ್ತೆವೆ ಅಂತಾ ಹೇಳಿಕೆ ನೀಡಿ ಮತೀಯ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತೆ ಮತ್ತು ಕಾನೂನು ಕೈಗೆ ತೆಗೆದುಕೊಳ್ಳುವಂತೆ ಮಾತನಾಡಿ ಎರಡು ಕೋಮಿನ ನಡುವೆ ಶಾಂತಿ ಭಂಗ ಮಾಡುವ ಪ್ರಯತ್ನಗಳನ್ನು ಉಂಟು ಮಾಡುತ್ತಿದ್ದಾರೆ.

ಕೋಡಲೇ ಅವರ ಮೇಲೆ ಕಾನೂನಿನ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರಾದ ಸಲೀಂ ಪಠಾಣ, ಸಲೀಂ ಮೋಮಿನ, ಜಾಕೀರ ತಾಳಿಕೋಟಿ, ನಬೀಸಾಬ ಟಂಕಸಾಲಿ, ಆರ್.ಎಚ್.ಪೆಂಡಾರಿ, ನೂರಸಾಬ ಮಂಗಳೂರು,ತರಫದಾರ, ನೂರಸಾಬ ಪಟ್ಟೆವಾಲೆ, ರಫೀಕ ಲೋಕಾಪೂರ, ಅಮೀನಸಾಬ ರಕ್ಕಸಗಿ, ಹಾರೂನ ರಶೀದ ಬಾಗವಾನ, ರಿಯಾಜ ಬೆಳಕೊಪ್ಪ, ಮುಸ್ಲಿಂ ಡಾಲಾಯತ, ವಸೀಂ ಜಮಾದಾರ, ರೌಫ ಚೌಧರಿ, ಅಯುಬ ಪುಣೆಕಾರ, ಅಬುಶಮಾ ಖಾಜಿ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ: ಹಾಜಿಮಸ್ತಾನ್ ಬದಾಮಿ.