ಬೆಂಗಳೂರು: ಹೊಸವರ್ಷದ ಹೊಸ್ತಿಲಲ್ಲಿರುವ ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ, ಆಸ್ತಿ ತೆರಿಗೆಯಲ್ಲಿ ಶೇ% 15 ರಿಂದ ಶೇ% 30 ರಷ್ಟು ಹೆಚ್ಚಳ ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ,
ಇಂದು ಮುಖ್ಯಮಂತ್ರಿ ಬಿ,ಎಸ್,ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು ಈ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವಂತೆ ಮಸೂದೆಗೆ ಅಂಗೀಕಾರ ನೀಡಲಾಗಿದೆ,
ಈ ಮೂಲಕ ಆಸ್ತಿ ತೆರಿಗೆ ಶೇ,15 ರಿಂದ 39 ರಷ್ಟು ಹೆಚ್ಚಳಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ, ಇಂತಹ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡಲಿದೆ, ವಾಣಿಜ್ಯ ಕಟ್ಟಡದ ತೆರಿಗೆ ಹೆಚ್ಚಳಕ್ಕೂ ನಿರ್ಧಾರ ಕೈಗೊಳ್ಳಲಾಗಿದೆ ಈ ಮೂಲಕ ರಾಜ್ಯದ ಜನತೆಗೆ ಬಿಗ್ ಶಾಕ್ ಕೊಡಲಿದೆ ರಾಜ್ಯ ಸರ್ಕಾರ..!!