ಬೆಂಗಳೂರು : ಇಂದು ರಾಜ್ಯದ 604 ಕೇಂದ್ರಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆಯಲಿದ್ದು, ಈ ಬಾರಿ ಪತ್ರಿಕೆ -1 ಕ್ಕೆ 74,977 ಮತ್ತು ಪತ್ರಿಕೆ-2 ಕ್ಕೆ 1,69,716 ಸೇರಿ ಒಟ್ಟುಉ 2,44,693 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ಟಿಇಟಿ ಪರೀಕ್ಷೆಗೆ ಕೊರೊನಾ ಪಾಸಿಟಿವ್ ಅಭ್ಯರ್ಥಿಗಳಿಗೂ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕಿಂತ ಒಂದು ಗಂಟೆ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ, ತಪಾಸಣೆ ಕೌಂಟರ್ ನಲ್ಲಿ ಆರೋಗ್ಯ ತಪಾಸಣೆಗೆ ಒಳಪಡಬೇಕಿದೆ. ಪ್ರವೇಶ ಪತ್ರವಿಲ್ಲದ ಯಾವುದೇ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ.