Breaking News

ಸೂಳೇಭಾವಿ ಗ್ರಾಮ ಪಂಚಾಯತಿಯಲ್ಲಿ ಭಾವೈಕ್ಯತಾ ಗಣರಾಜ್ಯೋತ್ಸವ ಆಚತಣೆ

ಅಮೀನಗಡ :
ಭಾರತೀಯರಾದ ನಾವೆಲ್ಲರೂ ಭಾರತವನ್ನು ಒಂದು ಸಾರ್ವಭೌಮ ಸಮಾಜಾವಾದೀ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಅದರ ಮತ್ತು ಅದರ ಸಮಸ್ತ ನಾಗರಿಕರಿಗೇ : ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯ ನ್ಯಾಯ ವಿಚಾರ ,ಅಭಿವೃದ್ಧಿ, ವಿಶ್ವಾಸ,ಧರ್ಮಶ್ರೆದ್ದೆ,ಮತ್ತು ಉಪಾಸನಾ ಸ್ವಾತಂತ್ರ್ಯ ,

” ಸ್ಥಾನಮಾನ ಮತ್ತು ಅವಕಾಶ ಸಮಾನತೆ, ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವನ್ನು, ರಾಷ್ಟ್ರದ ಏಕತೆಯನ್ನು ಹಾಗೂ ಅಖಂಡತೆಯನ್ನು ಸುಶ್ಚಿತಗೊಳಿಸಿ ಅದರಲ್ಲಿ ಭ್ರಾತೃಭಾವನೆಯನ್ನು ವೃದ್ದಿಗೊಳಿಸಲು ಶ್ರದ್ದಾಪೂರ್ವಕ ಸಂಕಲ್ಪ ಮಾಡಿದವರಾಗಿ ನಮ್ಮ ಸಂವಿಧಾನದ ಸಭೆಯಲ್ಲಿ ೧೯೪೯ ರ ನವಂಬರ್ ೨೬ ರಂದು ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ ಅಧಿನಿಯಮಿಸಿ ಅರ್ಪಿಸಿಕೊಂಡಿದ್ದೇವೆ

ಎಂದು ಪಂಚಾಯತ್ ಆಡಳಿತ ಅಧಿಕಾರಿ ಎಸ್ ಆರ್ ಕೂಳ್ಳಳ್ಳಿ ಅವರು ಈ ೭೬ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉಪಸ್ಥಿತಿ ವಹಿಸಿ ಮಾತನಾಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಪಿಡ್ಡಪ್ಪ ಕುರಿ ಧ್ವಜಾರೋಹಣ ನೇರವೇರಿಸಿದರು. ಗ್ರಾಮದ ಸರಕಾರಿ ಪ್ರೌಢಶಾಲೆ ಹಾಗೂ

ಕಾಲೇಜು ವಿದ್ಯಾರ್ಥಿಗಳು, ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಗಳ ಮಕ್ಕಳು, ಶ್ರೀ ರಾಮಯ್ಯಸ್ವಾಮಿ ಶಿಕ್ಷಣ ಸಂಸ್ಥೆ ಹಾಗೂ ಗ್ರಾಮದ ವಿವಿಧ ಎಲ್ಲಾ ಶಾಲೆ ಮಕ್ಕಳು, NCC ವಿದ್ಯಾರ್ಥಿಗಳು, ಗೃಹರಕ್ಷಕ ದಳ ಸಿಬ್ಬಂದಿ ಸೇರಿದಂತೆ ನೂರಾರು ಮಕ್ಕಳು ಈ ಧ್ವಜಾರೋಹಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು,

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್,ಜಿ ನಂಜಯ್ಯನಮಠ ಹಾಗೂ ಹಾಗೂ ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಮಾಜಿ ಸೈನಿಕ ಷಣ್ಮುಖಪ್ಪ ಮಡಿವಾಳರ ,ಗ್ರಾಮದ ಪ್ರಮುಖರಾದ ರಹೆಮನಸಾಬ ದೊಡಮನಿ,ದುರಗಪ್ಪ ಹೊಸಮನಿ,ಕೆ,ಎಸ್ ಗೌಡರ್, ಹಾಗೂ ವಿವಿಧ ಶಾಲಾ ಶಿಕ್ಷಕರು,ಅಂಗನವಾಡಿ ಕಾರ್ಯಕರ್ತರು, ಯುವಕರು, ವಿಜ್ರಂಮನೆಯಿಂದ ಧ್ವಜಾರೋಹಣಕ್ಕೆ ಪಾಲ್ಗೊಂಡಿದ್ದರು.

About vijay_shankar

Check Also

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಅಮೀನಗಡ : ಸಮೀಪದ ಗುಡೂರು ಎಸ್,ಸಿ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ವಿಚಿತ್ರ ಎಂದರೆ ಈ ದುಶ್ಚಟಕ್ಕೆ ವಯಸ್ಕರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.