
ಗುಡೂರು : ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಹೊತ್ತ ಪಲ್ಲಕ್ಕಿ ಮೆರವಣಿಗೆಯು ಸರಳ ಹಾಗೂ ಸಾಂಪ್ರದಾಯಿಕವಾಗಿ ಜರುಗಿತು.
ಗುಡೂರ ಎಸ್ ಸಿ ಗ್ರಾಮದಲ್ಲಿ ಶ್ರೀ ನೂಲಿ ಚಂದಯ್ಯನವರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಭಜಂತ್ರಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ದುರ್ಗಾದೇವಿ ದೇವಾಲಯದ ಪಲ್ಲಕ್ಕಿ ಉತ್ಸವವು ವಿಜೃಂಭಣೆಯಿಂದ ಜರುಗಿತು.

ಶ್ರೀ ದುರ್ಗಾದೇವಿ ಪಲ್ಲಕ್ಕಿ ಉತ್ಸವದ ಮೆರವಣಿಗೆ ದೇವಾಲಯದಿಂದ ಪ್ರಾರಂಭವಾಗಿ ಬನಶಂಕರಿ ದೇವಾಲಯ ಬಸವೇಶ್ವರ ದೇವಾಲಯ ವಿಜಯ ಮಹಾಂತೇಶ ಬ್ಯಾಂಕ್ ಹುಲ್ಲೇಶ್ವರ ದೇವಾಲಯ ಬಸ್ ನಿಲ್ದಾಣ ಮಳಿಯಪ್ಪನ ಕಟ್ಟಿ ಅಂಬಾ ಭವಾನಿ ದೇವಾಲಯ ಮೌನೇಶ್ವರ ಮಠ ಕಾಯಿಪಲ್ಯ ಮಾರುಕಟ್ಟೆ ಮಾರ್ಗವಾಗಿ ದೇವಸ್ಥಾನ ತಲುಪಿತು.
ಅಧ್ಯಕ್ಷರಾದ ಶ್ರೀ ಶ್ರೀಶೈಲ ಭಜಂತ್ರಿ ಉಪಾಧ್ಯಕ್ಷರಾದ ಶ್ರೀ ಮಾರುತಿ ಭಜಂತ್ರಿ ಶ್ರೀ ಗದ್ದೆಪ್ಪ ಭಜಂತ್ರಿ ಶ್ರೀ ಬೊಮ್ಮನ್ನ ಭಜಂತ್ರಿ ಶ್ರೀ ಸುರೇಶ ಭಜಂತ್ರಿ ಗ್ರಾಪಂ ಸದಸ್ಯೆಯಾದ ಶ್ರೀಮತಿ ಅನ್ನಪೂರ್ಣ ಭಜಂತ್ರಿ ಅಭಿಯಂತಕರಾದ ಶ್ರೀ ಹನುಮಂತ ಭಜಂತ್ರಿ ಶ್ರೀ ಮುತ್ತಣ್ಣ ಭಜಂತ್ರಿ ಸೇರಿದಂತೆ ಭಜಂತ್ರಿ(ಕೊರಮ) ಸಮಾಜದ ಹಿರಿಯರು ಮಹಿಳೆಯರು ಯುವಕರು ಹಾಗೂ ಭಕ್ತರು ಇತರರಿದ್ದರು.

