Breaking News

ದಂಗಾಗಿಸುತ್ತೆ ಬಹು ಕಾಲದ ಬಳಿಕ ತೆರೆದ ಚಿತ್ರಮಂದಿರಕ್ಕೆ ಬಂದವರ ಸಂಖ್ಯೆ..!

ದೆಹಲಿಯಲ್ಲಿ ಕೊರೊನಾ ಹಾಗೂ ಲಾಕ್​ಡೌನ್​ನಿಂದಾಗಿ 7 ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದ ಸಿನಿಮಾ ಹಾಲ್​ಗಳು ಇದೀಗ ಮತ್ತೆ ಓಪನ್​ ಆಗಿವೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳ ಮೂಲಕ ಥಿಯೇಟರ್​ಗಳನ್ನ ತೆರೆಯಲಾಗಿದೆ. ಆದರೆ ಬೆರಳಣಿಕೆಯ ಪ್ರೇಕ್ಷಕರು ಮಾತ್ರ ಥಿಯೇಟರ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ದೆಹಲಿಯ ಗ್ರೇಟರ್​ ಕೈಲಾಶ್​ ಏರಿಯಾದಲ್ಲಿ 150 ಸೀಟ್​ಗಳನ್ನ ಹೊಂದಿದ್ದ ಸಿನಿಮಾ ಹಾಲ್​ನಲ್ಲಿ ಬೆಳಗ್ಗೆ 11:30ರ ಶೋಗೆ ಕೇವಲ 4 ಟಿಕೆಟ್​ ಮಾತ್ರ ಬಿಕರಿಯಾಗಿದೆ. ಮಧ್ಯಾಹ್ನ 2.30ರ ಶೋಗೆ 5 ಸೀಟ್​ಗಳು ಬುಕ್​ ಆಗಿವೆ.

ಟಿಕೆಟ್ ಖರೀದಿ ಮಾಡಿದ್ದ ಸೌರಬ್ ಎಂಬವರು ಈ ವಿಚಾರವಾಗಿ ಮಾತನಾಡಿ, ನಾನು ನನ್ನ ಫ್ರೆಂಡ್ಸ್ ಜೊತೆ ಥಿಯೇಟರ್ಗೆ ಬಂದಿದ್ದೆ. ಫಿಲಂ ನೋಡೋದಕ್ಕೆ ಅನ್ನೋದಕ್ಕಿಂತ ಹೆಚ್ಚಾಗಿ ಯಾವ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಅನ್ನೋದನ್ನ ನೋಡೋಕೆ ಬಂದಿದ್ದೆವು ಅಂತಾ ಹೇಳಿದ್ದಾರೆ.

ಇನ್ನು ಸಿನಿಮಾ ಹಾಲ್​ ಮಾಲೀಕರು ವೀಕೆಂಡ್​ನಲ್ಲಿ ಹೆಚ್ಚು ಟಿಕೆಟ್​ ಮಾರಾಟವಾಗಬಹುದು ಎಂಬ ನಿರೀಕ್ಷೆಯನ್ನ ಹೊಂದಿದ್ದಾರೆ.

About vijay_shankar

Check Also

test

test

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.